ಮುಂದಿನ ಐದು ದಿನಗಳವರೆಗೆ ಸಿಂಹ ರಾಶಿಯಲ್ಲಿರಲಿದೆ ಈ ಎರಡು ಗ್ರಹಗಳು , ಈ ಎರಡು ರಾಶಿಯವರ ಮೇಲಾಗಲಿದೆ ಭಾರೀ ಪರಿಣಾಮ

ಜ್ಯೋತಿಷ್ಯದ ಪ್ರಕಾರ, ಸೂರ್ಯ ಮತ್ತು ಮಂಗಳ ಇಬ್ಬರೂ ಈ ಸಮಯದಲ್ಲಿ ಸಿಂಹ ರಾಶಿಯಲ್ಲಿದ್ದಾರೆ . ಅವರ ಈ ಸಂಯೋಗವು ಸೆಪ್ಟೆಂಬರ್ 6 ರವರೆಗೆ ಮುಂದುವರಿಯುತ್ತದೆ.   

Written by - Ranjitha R K | Last Updated : Sep 1, 2021, 09:21 PM IST
  • ಸೆಪ್ಟೆಂಬರ್ 6 ರವರೆಗೆ ಈ ರಾಶಿಯಲ್ಲಿ ಉಳಿಯಲಿದ್ದಾರೆ ಸೂರ್ಯ ಮತ್ತು ಮಂಗಳ
  • ಹೊಸ ಕೆಲಸ ಆರಂಭಿಸಲು ಇದು ಶುಭ ಯೋಗ
  • ಸಹೋದರ ಮತ್ತು ಸಹೋದರಿಯಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು
ಮುಂದಿನ ಐದು ದಿನಗಳವರೆಗೆ ಸಿಂಹ ರಾಶಿಯಲ್ಲಿರಲಿದೆ ಈ ಎರಡು ಗ್ರಹಗಳು , ಈ ಎರಡು ರಾಶಿಯವರ ಮೇಲಾಗಲಿದೆ ಭಾರೀ ಪರಿಣಾಮ  title=
ಮುಂದಿನ ಐದು ದಿನಗಳವರೆಗೆ ಈ ಎರಡು ರಾಶಿಯವರಿಗೆ ಭಾರೀ ಅದೃಷ್ಟ (file photo)

ನವದೆಹಲಿ : ಹಿಂದೂ ಧರ್ಮಗ್ರಂಥಗಳಲ್ಲಿ ಸೂರ್ಯನನ್ನು (SUN) ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗಿದೆ. ಮತ್ತೊಂದೆಡೆ, ಮಂಗಳನನ್ನು (Mars) ಎಲ್ಲಾ ಗ್ರಹಗಳ ಸೇನಾಪತಿ ಎನ್ನಲಾಗುತ್ತದೆ.  ಜ್ಯೋತಿಷ್ಯದಲ್ಲಿ ಮಂಗಳ ಮತ್ತು ಸೂರ್ಯನನ್ನು ಸ್ನೇಹ ಗ್ರಹಗಳೆಂದು ಪರಿಗಣಿಸಲಾಗುತ್ತದೆ .

ಸೆಪ್ಟೆಂಬರ್ 6 ರವರೆಗೆ ಈ ರಾಶಿಯಲ್ಲಿ ಉಳಿಯಲಿವೆ ಎರಡು ಗ್ರಹಗಳು : 
ಜ್ಯೋತಿಷ್ಯದ (Astrology) ಪ್ರಕಾರ, ಸೂರ್ಯ ಮತ್ತು ಮಂಗಳ ಇಬ್ಬರೂ ಈ ಸಮಯದಲ್ಲಿ ಸಿಂಹ ರಾಶಿಯಲ್ಲಿದ್ದಾರೆ (Sun and Mars conjunction). ಅವರ ಈ ಸಂಯೋಗವು ಸೆಪ್ಟೆಂಬರ್ 6 ರವರೆಗೆ ಮುಂದುವರಿಯುತ್ತದೆ. ಈ ಸಂಯೋಜನೆಯಿಂದಾಗಿ, ಮುಂದಿನ 5 ದಿನಗಳವರೆಗೆ ಎರಡು ರಾಶಿಚಕ್ರ ಚಿಹ್ನೆಗಳು (Zodiac sign) ಅದ್ಭುತ ಪ್ರಯೋಜನಗಳನ್ನು ಪಡೆಯಲಿವೆ. ಆ ಎರಡು ರಾಶಿಗಳು ಯಾವುವು ಮತ್ತು ಅವುಗಳ ಲಾಭಗಳು ಯಾವುವು ನೋಡೋಣ.. 

ಇದನ್ನೂ ಓದಿ Lord Shiva: ನಿಮಗೆ ಶಿವನ ಅನುಗ್ರಹ ಬೇಕಾದರೆ, ಈ 7 ವಸ್ತುಗಳನ್ನು ಎಂದಿಗೂ ಅರ್ಪಿಸಬೇಡಿ

ಹೊಸ ಕೆಲಸ ಆರಂಭಿಸಲು ಇವರಿಗೆ ಶುಭ ಯೋಗ:
ವೃಶ್ಚಿಕ:  ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ, ಈ ಸಮಯವು ಒಂದು ವರದಾನಕ್ಕಿಂತ ಕಡಿಮೆಯಾಗಿರುವುದಿಲ್ಲ. ಕೆಲಸ ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಬಡ್ತಿ ಅಥವಾ ಆರ್ಥಿಕ ಲಾಭಗಳ ಸಾಧ್ಯತೆಗಳೂ ಇವೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಮಹತ್ತರ ಸಮಯವಾಗಿದೆ. ವಹಿವಾಟುಗಳಿಗೆ ಉತ್ತಮ ಸಮಯ. ಉದ್ಯೋಗ ಮತ್ತು ವ್ಯಾಪಾರಕ್ಕೆ ಸಮಯವು ಶುಭಕರವಾಗಿದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ.

ಸಹೋದರ ಮತ್ತು ಸಹೋದರಿಯಿಂದ ಸಿಗಲಿದೆ ಆರ್ಥಿಕ ನೆರವು : 
ಮಿಥುನ: ಕುಟುಂಬದಿಂದ ಹಠಾತ್ ಶುಭಸುದ್ದಿ ಬರುವ ಸಾಧ್ಯತೆ ಇದೆ. ನೀವು ಸಹೋದರರಿಂದ ಸಹಾಯದ ನಿರೀಕ್ಷೆ ಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಒಳ್ಳೆಯ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ಉತ್ತಮ ಸಮಯವಾಗಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೇ ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಅವಕಾಶವಿರುತ್ತದೆ. ನೀವು ವೈವಾಹಿಕ ಜೀವನದಲ್ಲಿ (Marriage) ಸಂತೋಷವನ್ನು ಅನುಭವಿಸುವಿರಿ. ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಪ್ರತಿಷ್ಠೆ ಮತ್ತು ಸ್ಥಾನಮಾನ ಉತ್ತಮವಾಗುತ್ತದೆ. ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. 

ಇದನ್ನೂ ಓದಿ : September ತಿಂಗಳಿನಲ್ಲಿ ಹುಟ್ಟಿದ ಜನರು Perfectionist ಆಗಿರುತ್ತಾರಂತೆ, ಇವರ ಇತರ ವೈಶಿಷ್ಟ್ಯಗಳೇನು ತಿಳಿಯೋಣ ಬನ್ನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News