ನವದೆಹಲಿ : ಏಕಾದಶಿಯ ದಿನವನ್ನು ಭಗವಾನ್ ವಿಷ್ಣುವಿನ (Lord Vishnu) ಆರಾಧನೆಗೆ ಅತ್ಯಂತ ವಿಶೇಷವೆಂದು ಪರಿಗಣಿಸಲಾಗುತ್ತದೆ. ಏಕಾದಶಿಗಳಿಗೆ ಧರ್ಮಗ್ರಂಥಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇವುಗಳಲ್ಲಿ ಒಂದು,  ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿ (Ekadashi), ಇದನ್ನು ಶಟಿಲ ಏಕಾದಶಿ (Shatila Ekadashi) ಎಂದು ಕರೆಯಲಾಗುತ್ತದೆ. ವಿಷ್ಣುವನ್ನು ಪೂಜಿಸಲು ಮತ್ತು ಸಂತಾನಭಾಗ್ಯ ಪಡೆಯಲು ಈ ದಿನ ಉಪವಾಸ ವೃತವನ್ನು ಆಚರಿಸಲಾಗುತ್ತದೆ. . ಈ ವರ್ಷ ಈ ಉಪವಾಸ ವೃತವನ್ನು ಇವತ್ತು ಅಂದರೆ ಜನವರಿ 28 ರಂದು ಆಚರಿಸಲಾಗುತ್ತದೆ. ಈ ವೃತದ ಬಗ್ಗೆ ಹಿಂದೂ ಧರ್ಮದಲ್ಲಿ ಕೆಲವು ವಿಶೇಷ ನಿಯಮಗಳನ್ನು ಹೇಳಲಾಗಿದೆ. ವ್ರುತಾಚರಣೆ ವೇಳೆ ಈ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

ವಿಷ್ಣುವಿಗೆ ಎಲ್ಲಿನಿಂದ ಮಾಡಿದ ಖಾದ್ಯಗಳ ಅರ್ಪಣೆ :   
ಶಟಿಲ ಏಕಾದಶಿಯ (Shatila Ekadashi) ವೃತದ ವಿಶೇಷವೆಂದರೆ, ಈ ದಿನ ವಿಷ್ಣುವಿಗೆ ಎಳ್ಳಿನ ಖಾದ್ಯಗಳನ್ನು ಮಾತ್ರ ಅರ್ಪಿಸಲಾಗುತ್ತದೆ. ಈ ಉಪವಾಸಡ ದಿನ ಎಳ್ಳಿನಿಂದ ಮಾಡಿದ ಫಲಾಹಾರವನ್ನೇ ಸೇವಿಸಲಾಗುತ್ತದೆ. ಮಾತ್ರವಲ್ಲ,  ಈ ದಿನ ಎಳ್ಳನ್ನು  ದಾನ ಮಾಡಲಾಗುತ್ತದೆ. ಒಟ್ಟಿನಲ್ಲಿ ಈ ವೃತದಲ್ಲಿ ಎಳ್ಳನ್ನು 6 ರೀತಿಯಲ್ಲಿ ಬಳಸಬೇಕೆಂಬ ನಿಯಮವಿದೆ. 


ಇದನ್ನೂ ಓದಿ : Chanakya Niti : ಜೀವನದಲ್ಲಿ ಈ 5 ನಿಯಮಗಳನ್ನ ಪಾಲಿಸಿ, ನಿಮಗೆ ಎಂದಿಗೂ ಸೋಲಿಲ್ಲ! ಅದು ಉದ್ಯೋಗ ಅಥವಾ ವ್ಯಾಪಾರ ಯಾವುದೆ ಆಗಿರಲಿ


ಉಪವಾಸದ ಈ ನಿಯಮಗಳನ್ನು ಪಾಲಿಸಬೇಕು : 
ಶಟಿಲ ಏಕಾದಶಿಯ ಉಪವಾಸವನ್ನು ಆಚರಿಸುವವರು ಒಂದು ದಿನ ಮುಂಚಿತವಾಗಿ ತಾಮಸಿಕ ಆಹಾರವನ್ನು ಸೇವಿಸಬಾರದು. ಮತ್ತೊಂದೆಡೆ, ಈ ದಿನ ಬದನೆ-ಅನ್ನವನ್ನು (Rice) ಸೇವಿಸಬಾರದು. ಈ ದಿನ ಬ್ರಹ್ಮಚರ್ಯವನ್ನು ಅನುಸರಿಸುವುದು ಅವಶ್ಯಕ. ಹಾಗೆಯೇ ನೆಲದ ಮೇಲೆ ಮಲಗಬೇಕು. ಅಪ್ಪಿತಪ್ಪಿಯೂ ಮಾಂಸಾಹಾರ (Non Veg) ಮತ್ತು ಅಮಲು ಪದಾರ್ಥಗಳನ್ನು ಸೇವಿಸಬೇಡಿ. ಪಾನ್ ತಿನ್ನುವುದು ಕೂಡಾ ನಿಷಿದ್ಧ. ಈ ದಿನ ಯಾವುದೇ ಸಸ್ಯದ ಹೂವುಗಳು ಮತ್ತು ಎಲೆಗಳನ್ನು ಒಡೆಯಬಾರದು.  ನೆನಪಿರಲಿ ವ್ರುತಾಚರಣೆ ವೇಳೆ ಸುಳ್ಳು ಹೇಳುವುದು ಸರಿಯಲ್ಲ. 


ಇದನ್ನೂ ಓದಿ :  ಮನೆಯ ಸುತ್ತಮುತ್ತ ಈ ವಸ್ತುಗಳೇನಾದರೂ ಇದ್ದರೆ ಎದುರಿಸಬೇಕಾಗುತ್ತದೆ ಆರ್ಥಿಕ ಸಂಕಷ್ಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.