ಈ ಉಪವಾಸ ಆಚರಿಸುವುದರಿಂದ ಅನೇಕ ಪ್ರಯೋಜನಗಳಿವೆ: ಮೋಕ್ಷ ಪ್ರಾಪ್ತಿಗಾಗಿ ಪೂಜೆಯ ವಿಧಾನ ತಿಳಿಯಿರಿ

ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಎಲ್ಲಾ ಏಕಾದಶಿಗಳಲ್ಲಿ ಉತ್ಪನ್ನ ಏಕಾದಶಿಯನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

Written by - Puttaraj K Alur | Last Updated : Nov 29, 2021, 07:43 AM IST
  • ಉತ್ಪನ್ನ ಏಕಾದಶಿಯ ಉಪವಾಸವು ದಶಮಿಯ ಸೂರ್ಯಾಸ್ತದ ಒಂದು ದಿನ ಮೊದಲು ಪ್ರಾರಂಭವಾಗುತ್ತದೆ
  • ಉತ್ಪನ್ನ ಏಕಾದಶಿಯ ಉಪವಾಸ ಆಚರಿಸುವುದರಿಂದ ಭಕ್ತನು ಮರಣಾನಂತರ ಮೋಕ್ಷ ಪಡೆಯುತ್ತಾನೆ
  • ಈ ದಿನದಂದು ನೀವು ಮಾಡಿದ ದಾನವು ಲಕ್ಷ ಪಟ್ಟು ಹೆಚ್ಚು ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ
ಈ ಉಪವಾಸ ಆಚರಿಸುವುದರಿಂದ ಅನೇಕ ಪ್ರಯೋಜನಗಳಿವೆ: ಮೋಕ್ಷ ಪ್ರಾಪ್ತಿಗಾಗಿ ಪೂಜೆಯ ವಿಧಾನ ತಿಳಿಯಿರಿ title=
ಉತ್ಪನ್ನ ಏಕಾದಶಿ ಉಪವಾಸ ವಿಧಾನ ತಿಳಿಯಿರಿ

ನವದೆಹಲಿ: ಹಿಂದೂ ಧರ್ಮದಲ್ಲಿ ಕೆಲವು ಉಪವಾಸ ಮತ್ತು ಹಬ್ಬಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಉಪವಾಸವು ವ್ಯಕ್ತಿಯ ಜೀವನವನ್ನು ಸುಧಾರಿಸುವುದಲ್ಲದೆ, ಆತನ ಸಾವಿನ ನಂತರವೂ ಉಪಯುಕ್ತವಾಗಿದೆ. ಈ ಉಪವಾಸವು ಪಾಪಗಳನ್ನು ನಾಶಪಡಿಸುತ್ತದೆ ಮತ್ತು ನರಕಕ್ಕೆ ಹೋಗದಂತೆ ರಕ್ಷಿಸುತ್ತದೆ. ಉತ್ಪನ್ನ ಏಕಾದಶಿ(Utpanna Ekadashi 2021) ಕೂಡ ಇದೇ ರೀತಿಯ ಉಪವಾಸ. ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಎಲ್ಲಾ ಏಕಾದಶಿಗಳಲ್ಲಿ ಉತ್ಪನ್ನ ಏಕಾದಶಿಯನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಉತ್ಪನ ಏಕಾದಶಿಯನ್ನು ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಉತ್ಪನ್ನ ಏಕಾದಶಿಯು ನವೆಂಬರ್ 30ರ ಮಂಗಳವಾರ ಬಂದಿದೆ.  

ಮೋಕ್ಷ ಪ್ರಾಪ್ತಿಯಾಗುತ್ತದೆ

ಉತ್ಪನ್ನ ಏಕಾದಶಿಯ ಉಪವಾಸವನ್ನು ಆಚರಿಸುವುದರಿಂದ ಭಕ್ತನು ಮರಣಾನಂತರ ಮೋಕ್ಷ(Baikunth Dham)ವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ಅವನ ಎಲ್ಲಾ ಪಾಪಗಳು ನಾಶವಾಗುತ್ತವೆ. ಈ ಉಪವಾಸವನ್ನು ಆಚರಿಸುವ ಭಕ್ತರಿಗೆ ಭಗವಾನ್ ವಿಷ್ಣುವು(Lord Vishnu) ವಿಶೇಷ ಅನುಗ್ರಹವನ್ನು ನೀಡುತ್ತಾನೆ. ಇದಲ್ಲದೆ ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಉತ್ಪನ್ನ ಏಕಾದಶಿಯ ವ್ರತವನ್ನು ಆಚರಿಸುವುದರಿಂದ 1000 ವಾಜಪೇಯ ಮತ್ತು ಅಶ್ವಮೇಧ ಯಾಗ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಉಪವಾಸವು ಎಲ್ಲಾ ತೀರ್ಥಯಾತ್ರೆಗಳನ್ನು ಮಾಡಿದಂತೆಯೇ ಸಮಾನ ಫಲಿತಾಂಶವನ್ನು ನೀಡುತ್ತದೆ. ಉತ್ಪನ್ನ ಏಕಾದಶಿಯ ದಿನ ದಾನ ಮಾಡುವುದು ಕೂಡ ಬಹಳ ಮುಖ್ಯ. ಈ ದಿನ ಮಾಡಿದ ದಾನವು ಲಕ್ಷ ಪಟ್ಟು ಹೆಚ್ಚು ಫಲವನ್ನು ನೀಡುತ್ತದೆ.

ಇದನ್ನೂ ಓದಿ: ಡಿಸೆಂಬರ್ ನಲ್ಲಿ ಆರಕ್ಕಿಂತ ಹೆಚ್ಚು ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ, ಈ ರಾಶಿಯವರ ಪಾಲಿಗೆ ಎಲ್ಲವೂ ಶುಭ

ಉತ್ಪನ್ನ ಏಕಾದಶಿ ಉಪವಾಸ ವಿಧಾನ

ಉತ್ಪನ್ನ ಏಕಾದಶಿಯ ಉಪವಾಸ(Utpanna Ekadashi Vrat)ವು ದಶಮಿಯ ಸೂರ್ಯಾಸ್ತದ ಒಂದು ದಿನ ಮೊದಲು ಪ್ರಾರಂಭವಾಗುತ್ತದೆ. ಉಪವಾಸ ಆಚರಿಸುವವರು ಸೂರ್ಯಾಸ್ತದ ನಂತರ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಈ ಉಪವಾಸವನ್ನು ಮಾಡುವುದು ಒಳ್ಳೆಯದು. ಏಕಾದಶಿಯಂದು ನೀರಿಲ್ಲದೆ ಉಳಿದ ನಂತರ ದ್ವಾದಶಿಯಂದು ಉಪವಾಸವನ್ನು ಮುರಿಯಲಾಗುತ್ತದೆ. ಉತ್ಪನ್ನ ಏಕಾದಶಿಯ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು ಸ್ನಾನ ಮಾಡಬೇಕು. ಇದರ ನಂತರ ವಿಷ್ಣು ದೇವರಿಗೆ ನಮನ ಸಲ್ಲಿಸಿದ ನಂತರ ಉಪವಾಸದ ಪ್ರತಿಜ್ಞೆಯನ್ನು ತೆಗೆದುಕಳ್ಳಬೇಕು. ಸೂರ್ಯನಿಗೆ ನೀರನ್ನು ಅರ್ಪಿಸಿ. ಮತ್ತೊಂದೆಡೆ ವಿಷ್ಣುವಿನ ಪೂಜೆಗೆ ಹಳದಿ ಹೂವುಗಳು, ಹಳದಿ ಹಣ್ಣುಗಳು, ಧೂಪದ್ರವ್ಯ, ತುಳಸಿ ದಳಗಳನ್ನು ಅರ್ಪಿಸಬೇಕು. ಸಂಜೆಯೂ ಆರತಿ ಮಾಡಿ ಪೂಜೆ ಮಾಡುವುದರಿಂದ ನಿಮಗೆ ಒಳಿತಾಗಲಿದೆ.

ಇದನ್ನೂ ಓದಿ: ನಾಯಕತ್ವದ ಗುಣದಿಂದಾಗಿ ಬಹಳ ಬೇಗ ಖ್ಯಾತಿ ಪಡೆಯುತ್ತಾರೆ ಈ ರಾಶಿಯವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News