Correct Way Of Making Tea: ನಮ್ಮಲ್ಲಿ ಅನೇಕರು ದಿನವನ್ನು 'ಬೆಡ್ ಟೀ' ಯೊಂದಿಗೆ ಪ್ರಾರಂಭಿಸುತ್ತಾರೆ ಮತ್ತು ದಿನವಿಡೀ ಅನೇಕ ಕಪ್ ಚಹಾವನ್ನು ಕುಡಿಯುತ್ತಾರೆ. ಭಾರತದಲ್ಲಿ ಕೋಟಿಗಟ್ಟಲೆ ಜನರು ಚಹಾ ಕುಡಿಯಲು ಹಂಬಲಿಸುತ್ತಾರೆ, ನಮ್ಮ ದೇಶದಲ್ಲಿ ಇದು ನೀರಿನ ನಂತರ ಎರಡನೇ ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ. ಶುಂಠಿ, ಕರಿಮೆಣಸು, ತುಳಸಿ ಮತ್ತು ಏಲಕ್ಕಿ ಮುಂತಾದವುಗಳನ್ನು ಚಹಾಕ್ಕೆ ಪರಿಮಳಕ್ಕಾಗಿ ಸೇರಿಸಲಾಗುತ್ತದೆ. ಆದರೆ ಚಹಾ ಅತಿಯಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಮಾಡುವಾಗಲೂ ಕೆಲವು ತಪ್ಪುಗಳನ್ನು ನಾವು ಮಾಡುತ್ತೇವೆ ಅದು ಸಹ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬಾಳೆಹಣ್ಣಿನ ಜೊತೆ ಮೊಸರು ಸೇವಿಸಿದ್ರೆ ಈ ರೋಗಗಳು ಹತ್ತಿರವೂ ಸುಳಿಯುವುದಿಲ್ಲ


ಚಹಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ : 


- ಹಲವು ಜನರು ಮೊದಲು ಹಾಲನ್ನು ಕುದಿಸಿ ಬಳಿಕ ಅದರಲ್ಲಿ ನೀರು, ಸಕ್ಕರೆ ಮತ್ತು ಚಹಾ ಪುಡಿ ಬೆರೆಸುತ್ತಾರೆ, ಈ ವಿಧಾನವು ತಪ್ಪು.


- ಕೆಲವರಿಗೆ ಸ್ಟ್ರಾಂಗ್ ಟೀ ಕುಡಿಯುವ ಹಂಬಲವಿರುತ್ತದೆ. ಅದಕ್ಕಾಗಿ ಚಹಾವನ್ನು ಅತಿಯಾಗಿ ಕುದಿಸುತ್ತಾರೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.


- ಚಹಾದ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮತ್ತು ದೀರ್ಘಕಾಲದವರೆಗೆ ಕುದಿಸಿದರೆ, ಅದು ಹೊಟ್ಟೆಯಲ್ಲಿ ಅಸಿಡಿಟಿ ಸಮಸ್ಯೆಯನ್ನು ಉಂಟುಮಾಡಬಹುದು.


- ಚಹಾಕ್ಕೆ ಹೆಚ್ಚು ಸಕ್ಕರೆ ಸೇರಿಸುವ ಜನರು, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದು ಭವಿಷ್ಯದಲ್ಲಿ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು.


ಇದನ್ನೂ ಓದಿ : Kidney Health: ನೀವು ಸೇವಿಸುವ ಈ ಆಹಾರಗಳೇ ಕಿಡ್ನಿ ಆರೋಗ್ಯವನ್ನು ಕೆಡಿಸುತ್ತದೆ


ಚಹಾ ಮಾಡಲು ಸರಿಯಾದ ವಿಧಾನ :


ಬ್ರಿಟಿಷ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಷನ್ ಪ್ರಕಾರ, ಚಹಾ ಮಾಡಲು, ಮೊದಲನೆಯದಾಗಿ 2 ಪಾತ್ರೆಗಳನ್ನು ತೆಗೆದುಕೊಳ್ಳಿ. ಒಂದರಲ್ಲಿ ಹಾಲನ್ನು ಕುದಿಸಿ ಮತ್ತು ಇನ್ನೊಂದರಲ್ಲಿ ನೀರನ್ನು ಕುದಿಸಿ. ಚಮಚದ ಸಹಾಯದಿಂದ ಹಾಲಿಗೆ ಆಗಾಗ ಕೈಯಾಡಿಸಿ. ಈಗ ಚಹಾ ಎಲೆಗಳು ಮತ್ತು ಸಕ್ಕರೆಯನ್ನು ಕುದಿಯುವ ನೀರಿಗೆ ಹಾಕಿ ಮತ್ತು ನಿಮ್ಮ ನೆಚ್ಚಿನ ಮಸಾಲೆಗಳನ್ನು ಸೇರಿಸಿ. ನೀರು ಮತ್ತು ಚಹಾ ಪುಡಿಯನ್ನು ಹೊಂದಿರುವ ಮಿಶ್ರಣದಲ್ಲಿ ಕುದಿಸಿದ ಹಾಲನ್ನು ಹಾಕಿ, ಮಿಶ್ರಣ ಮಾಡಿ. ಅದನ್ನು ಮತ್ತೆ ಕುದಿಸಿ ಮತ್ತು ನಂತರ ಅದನ್ನು ಗ್ಯಾಸ್‌ನಿಂದ ಕೆಳಗಿಳಿಸಿ. ಅದನ್ನು ಒಂದು ಕಪ್‌ನಲ್ಲಿ ಫಿಲ್ಟರ್ ಮಾಡಿ, ಕುಡಿಯಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.