ನವದೆಹಲಿ : ಜಾತಕದಲ್ಲಿನ ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದರ ಪ್ರಕಾರ ಒಳಿತು ಕೆಡುಕು ಗಳು ಸಂಭವಿಸುತ್ತವೆ ಎನುವುದು ನಂಬಿಕೆ. ಆದರೆ, ನಮ್ಮ ಕೆಲ ಅಭ್ಯಾಸಗಳು ಕೂಡಾ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ.   ನಮ್ಮ ಅಭ್ಯಾಸಗಳು ಗ್ರಹಗಳ ಶುಭ ಮತ್ತು ಅಶುಭ ಪರಿಣಾಮಗಳನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಅದಕ್ಕಾಗಿಯೇ ಜ್ಯೋತಿಷ್ಯ ಶಾಸ್ತ್ರ (Jyotishya shastra),  ಸಾಮುದ್ರಿಕ ಶಾಸ್ತ್ರಗಳಲ್ಲಿ ಉತ್ತಮ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.   ನಾವು ನಡೆದಾದುವ ವೇಳೆ ಮಾಡುವ ತಪ್ಪುಗಳಿಂದ ರಾಹು-ಶನಿಯಂತಹ (Rahu Shani) ಗ್ರಹಗಳ ಕೋಪಕ್ಕೆ ಕಾರಣವಾಗಬಹುದು.  ಇದಲ್ಲದೆ, ಇನ್ನೂ ಕೆಲವು ಅಭ್ಯಾಸಗಳಿಂದ, ಒಬ್ಬ ವ್ಯಕ್ತಿಯು ಗ್ರಹಗಳ ಅಶುಭ ಫಲವನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಈ ಅಭ್ಯಾಸಗಳು ದುರಾದೃಷ್ಟಕ್ಕೆ ಕಾರಣವಾಗಬಹುದು : 
ಊಟ ಮುಗಿಸಿದ ನಂತರ, ಪ್ಲೇಟ್ ಅಥವಾ ಇತರ ಪಾತ್ರೆಗಳನ್ನು ಹಾಗೇ ಬಿಟ್ಟರೆ ಶನಿ ಮತ್ತು ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಅಭ್ಯಾಸ ಹೊಂದಿರುವ ಜನರು, ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಶ್ರಮಕ್ಕೆ ತಕ್ಕ ಫಲಿತಾಂಶಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಮತ್ತೊಂದೆಡೆ, ಅಡುಗೆ ಮನೆಯಲ್ಲಿ ಕೊಳಕು ತುಂಬಿಕೊಂಡಿದ್ದರೆ,  ಮಂಗಳ ಗ್ರಹದ ಕೋಪವನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ : Vastu Shastra Tips For Sleeping: ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗಿಸಿ ಸುಖ ಶಾಂತಿ ನೆಲೆಸಲು ವಾಸ್ತುಶಾಸ್ತ್ರದ ಈ ಸಲಹೆಗಳನ್ನು ಅನುಸರಿಸಿ


ಇನ್ನು ಕೊಳಕು ಬಾತ್ ರೂಮ್ ವಾಸ್ತು ದೋಷವನ್ನು (Vastu Dosha) ಉಲ್ಬಣಗೊಳಿಸುತ್ತದೆ. ಮತ್ತೊಂದೆಡೆ, ಸ್ನಾನ ಮಾಡಿದ ನಂತರ ಸ್ನಾನಗೃಹವನ್ನು ಹಾಗೇ ಕೊಳಕಾಗಿ ಬಿಡುವವರು, ಚಂದ್ರನಿಂದ ಅಶುಭ ಫಲವನ್ನು ಪಡೆಯುತ್ತಾರೆಯಂತೆ. ಆದ್ದರಿಂದ ಸ್ನಾನಗೃಹದಿಂದ ಹೊರಡುವ ಮೊದಲು ಸ್ವಚ್ಛ ಗೊಳಿಸುವುದನ್ನು ಮರೆಯಬೇಡಿ. 


ಇನ್ನು ನಡೆಯುವಾಗ ಪಾದಗಳನ್ನು ಎಳೆದು ಎಳೆದು ವಿಚಿತ್ರ ಸದ್ದು ಮಾಡಿಕೊಂಡು ನಡೆಯುವುದು, ಕೂಡಾ  ಜ್ಯೋತಿಷ್ಯದ  ಪ್ರಕಾರ (Jyotishya shastra) ಒಳ್ಳೆಯದಲ್ಲ  ಎನ್ನಲಾಗಿದೆ. ಹೀಗೆ ಮಾಡುವುದರಿಂದ ರಾಹು ಮತ್ತು ಶನಿ ಅಶುಭ ಫಲಗಳನ್ನು ನೀಡುತ್ತಾರೆ.


ಮನೆಯ ದೇವರ ಕೋಣೆಯನ್ನು ಪ್ರತಿದಿನ ಸ್ವಚ್ಛಗೊಳಿಸದಿದ್ದರೆ, ಅದು ವಾಸ್ತು ದೋಷಕ್ಕೂ ಕಾರಣವಾಗುತ್ತದೆ. ಪ್ರತಿದಿನ ದೇವಾಲಯವನ್ನು ಸ್ವಚ್ಛಗೊಳಿಸುವ ಮೂಲಕ, ಎಲ್ಲಾ ಗ್ರಹಗಳು ಶುಭ ಫಲಿತಾಂಶಗಳನ್ನು ನೀಡುತ್ತವೆ.


ಇದನ್ನೂ ಓದಿ : Astrology: ಗಾಜಿನ ಗ್ಲಾಸಿನಲ್ಲಿ ನೀರು ಕುಡಿಯುವುದು ಕೇವಲ ಆರೋಗ್ಯ ಅಷ್ಟೇ ಅಲ್ಲ, ಸಂಪತ್ತಿನ ಮೇಲೂ ಪ್ರಭಾವ ಬೀರುತ್ತದೆ


ವಿನಾ ಕಾರಣ ತಡರಾತ್ರಿಯವರೆಗೆ ಎಚ್ಚರವಾಗಿರುವುದು ಕೂಡಾ ವಾಸ್ತು ಪ್ರಕಾರ (Vastu tips) ಒಳ್ಳೆಯದಲ್ಲ. ಇದರಿಂದ ಚಂದ್ರನು ಕೆಟ್ಟ ಫಲ ಕೊಡುತ್ತಾನೆಯಂತೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.