ನವದೆಹಲಿ : ವಾಸ್ತು ಶಾಸ್ತ್ರದಲ್ಲಿ (Vastu shastra) ಎಲ್ಲಾ ವಿಷಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿದಿನ ನಮ್ಮ ಕಣ್ಣಿಗೆ ಬೀಳುವ ವಸ್ತುಗಳು ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಸುಳಿವು ನೀಡುತ್ತದೆ. ಇದರಲ್ಲಿ ಕೆಲವು ಶುಭಾವಾಗಿದ್ದರೆ, ಕೆಲವು ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಯಾವ ವಸ್ತುಗಳು ಕಣ್ಣಿಗೆ ಬಿದ್ದರೆ, ಶುಭ ನೋಡೋಣ.
ನೀವು ಮನೆಯಿಂದ ಹೊರಬಂದ ಕೂಡಲೇ, ನೀರಿನಿಂದ (Water) ತುಂಬಿದ ಪಾತ್ರೆ ಕಂಡರೆ ಅದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ನೀವು ಮನೆಯಿಂದ ಹೊರಬಂದ ಕೂಡಲೇ ಹಾಲನ್ನು (Milk) ನೋಡಿದರೆ ಅದನ್ನು ಕೂಡಾ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಶುಭ ಕಾರ್ಯಕ್ಕೆ ಹೊರಟಾಗ ಹಸು ತನ್ನ ಕರುವಿಗೆ ಹಾಲು ಕುಡಿಸುತ್ತಿರುವುದು ಕಂಡು ಬಂದರೆ ಅದು ಬಹಳ ಶುಭವಂತೆ. ಯಾವ ಕೆಲಸಕ್ಕಾಗಿ ಹೊರಟಿದ್ದೇವೆಯೋ, ಆ ಕೆಲಸ ಸಂಪೂರ್ಣ ಯಶಸು ಕಾಣುತ್ತದೆಯಂತೆ.
ಇದನ್ನೂ ಓದಿ : Guru Purnima 2021 : ಗುರು ಪೂರ್ಣಿಮೆಯಂದು 5 ರಾಶಿಯವರು ಈ ಉಪಾಯ ಮಾಡಿ ಶನಿ ಕಾಟದಿಂದ ಪರಿಹಾರ ಸಿಗುತ್ತೆ
ಇನ್ನು ಮನೆಯಿಂದ ಹೊರಡುವಾಗ ಸೀನುವುದು (sneezing) ಅಶುಭ ಎಂದು ನಂಬಲಾಗಿದೆ. ಆದರೆ, ಎರಡು ಬಾರಿ ಸೀನಿದರೆ, ಅಂದರೆ ಒಟ್ಟಿಗೆ ಎರಡು ಬಾರಿ ಸೀನಿದರೆ ಅದು ಶುಭವಂತೆ.
ನೀವು ಮನೆಯಿಂದ ಹೊರಬಂದ ಕೂಡಲೇ ದೇವಾಲಯದ ಗಂಟೆಗಳ (Temple bell) ಸದ್ದು ಕಿವಿಗೆ ಬಿದ್ದರೆ, ನೀವು ಹೊರಟಿರುವ ಕಾರ್ಯ ಪೂರ್ಣವಾಗುತ್ತದೆ ಎಂದೇ ಅರ್ಥ. ಅಂದರೆ ಹೋರಾಟ ಕೆಲಸದಲ್ಲಿ ಯಶಸ್ಸು ಸಿಗಲಿದೆ ಎಂದರ್ಥ.
ಇನ್ನು ಮನೆಯಿಂದ ಹೊರಡುವಾಗ ಹೂವುಗಳು (Flower) ಅಥವಾ ಹೂವಿನ ಹಾರಗಳನ್ನು ನೋಡುವುದು ಕೂಡಾ ಒಳ್ಳೆಯದು. ಹೂವು ಕಣ್ಣಿಗೆ ಬಿದ್ದರೆ, ನಿಮ್ಮ ಜೀವನದಲ್ಲಿ ಕೆಲವು ಉತ್ತಮ ಅವಕಾಶಗಳು ಸಿಗಲಿವೆ ಎಂದರ್ಥ.
ನೀವು ಮನೆಯಿಂದ ಹೊರಬಂದ ಕೂಡಲೇ ಪಾರಿವಾಳವು ನಿಮ್ಮ ಮೇಲೆ ಗಲೀಜು ಮಾಡಿದರೂ ಕೂಡ ಅದು ತುಂಬಾ ಶುಭವಂತೆ . ಇದು ಸಂಪತ್ತು ಹೊಂದುವ ಸಂಕೇತ ಎಂದೇ ಹೇಳಲಾಗುತ್ತದೆ.
ಇದನ್ನೂ ಓದಿ : ಅಡುಗೆ ಮನೆಯ ಬೆಳ್ಳುಳ್ಳಿ ಕೂಡಾ ಅದೃಷ್ಟ ಬದಲಿಸಿಬಿಡಬಹುದು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ