Vastu Shastra Tips For Sleeping: ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗಿಸಿ ಸುಖ ಶಾಂತಿ ನೆಲೆಸಲು ವಾಸ್ತುಶಾಸ್ತ್ರದ ಈ ಸಲಹೆಗಳನ್ನು ಅನುಸರಿಸಿ

Vastu Shastra Tips For Sleeping: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ನಿದ್ರೆಗೆ ಸಂಬಂಧಿಸಿದ ಈ ವಾಸ್ತು ಶಾಸ್ತ್ರದ ಸಲಹೆಗಳ (Sleeping Vastu Tips) ಬಗ್ಗೆ ತಿಳಿದುಕೊಳ್ಳೋಣ.  

Written by - Nitin Tabib | Last Updated : Jul 25, 2021, 08:12 PM IST
  • ವಾಯುವ್ಯ ದಿಕ್ಕಿನೆಡೆಗೆ ಕಾಲು ಚಾಚಿ ಮಲಗುವುದು ಅಶುಭ.
  • ವಿವಾಹಯೋಗ್ಯ ಯುವಕ-ಯುವತಿಯರು ಉತ್ತರ ದಿಕ್ಕಿನೆಡೆಗೆ ತಲೆಯನ್ನಿಟ್ಟು ಮಲಗಿ.
  • ಮನೆಯ ಹಿರಿಯ ಜೀವಿಗಳು ಪಶ್ಚಿಮ ದಿಕ್ಕಿನ ಕಡೆಗೆ ಕಾಲು ಚಾಚಿ ಮಲಗಬೇಕು.
Vastu Shastra Tips For Sleeping: ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗಿಸಿ ಸುಖ ಶಾಂತಿ ನೆಲೆಸಲು ವಾಸ್ತುಶಾಸ್ತ್ರದ ಈ ಸಲಹೆಗಳನ್ನು ಅನುಸರಿಸಿ title=
Vastu Shastra Tips For Sleeping (File Photo)

Vastu Shastra Tips For Sleeping: ವಾಸ್ತು ಶಾಸ್ತ್ರದಲ್ಲಿ (Vastu Shastra) ದಿಕ್ಕುಗಳಿಗೆ (Directions)ಭಾರಿ ಮಹತ್ವ ಕಲ್ಪಿಸಲಾಗಿದೆ. ಇದರಲ್ಲಿ ದಿಕ್ಕುಗಳನ್ನು ಆಧರಿಸಿಯೇ ಶುಭ ಹಾಗೂ ಅಶುಭ, ಮಂಗಳ-ಅಮಂಗಳ ಸಂಗತಿಗಳನ್ನು ನಿರ್ಧರಿಸಲಾಗುತದೆ. ವಾಸ್ತು ಶಾಸ್ತ್ರ ನಿಯಮಗಳನ್ನು ಅನುಸರಿಸಿದರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ. ಇವುಗಳನ್ನು ನಿರ್ಲಕ್ಷಿಸುವುದು ಹಲವು ಬಾರಿ ಸಂಕಷ್ಟವನ್ನು ತಂದೊಡ್ಡುತ್ತವೆ.

ಸಾಮಾನ್ಯವಾಗಿ ಜನರು ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುತ್ತಾರೆ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಕಾಲುಗಳನ್ನು ಹಾಗೂ ಯಾವ ದಿಕ್ಕಿನಲ್ಲಿ ತಲೆ ಮಾಡಿ ಮಲಗಬೇಕು ತಿಳಿಯೋಣ.

ಇದನ್ನೂ ಓದಿ-Astrology: ಗಾಜಿನ ಗ್ಲಾಸಿನಲ್ಲಿ ನೀರು ಕುಡಿಯುವುದು ಕೇವಲ ಆರೋಗ್ಯ ಅಷ್ಟೇ ಅಲ್ಲ, ಸಂಪತ್ತಿನ ಮೇಲೂ ಪ್ರಭಾವ ಬೀರುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸರಿಯಾದ ಪದ್ಧತಿ (Right Sleeping Direction As Per Vastu)
1. ವಾಸ್ತು ಪ್ರಕಾರ, ಎಂದಿಗೂ ಉತ್ತರ ಅಥವಾ ಪಶ್ಚಿಮ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಡಿ. ಈ ರೀತಿ ಮಲಗುವ ನಕಾರಾತ್ಮಕ ಶಕ್ತಿ ಸಂಚಾರಕ್ಕೆ ಕಾರಣ ಹಾಗೂ  ಒತ್ತಡವೂ ಹೆಚ್ಚುತ್ತದೆ. ವಾಸ್ತು ಪ್ರಕಾರ, ಒಬ್ಬರು ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಕು.

2. ವಾಸ್ತು ಪ್ರಕಾರ, ಮದುವೆಗೆ ಅರ್ಹರಾದ ಹುಡುಗ-ಹುಡುಗಿಯರು, ಅವರು ಉತ್ತರದ ಕಡೆಗೆ ಕಾಲು ಹಾಕಿ ಮಲಗಬೇಕು. ಹೀಗೆ ಮಾಡುವುದರಿಂದ ಶೀಘ್ರದಲ್ಲಿಯೇ ಕಂಕಣ ಬಲ ಕೂಡಿ ಬರುತ್ತದೆ.

3. ವಾಸ್ತು ಶಾಸ್ತ್ರದಲ್ಲಿ ಎಂದಿಗೂ ಮದುವೆಯಾಗದ ಮಹಿಳೆಯರು ಮನೆಯ ವಾಯುವ್ಯ ಕೋನದಲ್ಲಿ ಮಲಗಬಾರದು ಎಂದು ಹೇಳಲಾಗಿದೆ. ಈ ರೀತಿ ಮಾಡುವುದರಿಂದ ಅವರ ಮನದಲ್ಲಿ ಪ್ರತ್ಯೇಕ ಮನೆ ಮಾಡಿ ವಾಸಿಸುವ ಯೋಚನೆಗಳು ತುಂಬಿಕೊಳ್ಳುತ್ತವೆ.

ಇದನ್ನೂ ಓದಿ-Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು

4. ವಾಸ್ತು ಪ್ರಕಾರ, ಮನೆಯ ಹಿರಿಯರು ಪಶ್ಚಿಮ ದಿಕ್ಕಿನೆಡೆಗೆ  ಕಾಲು ಚಾಚಿ ಮಲಗಬೇಕು. ಪಶ್ಚಿಮ ದಿಕ್ಕಿನಲ್ಲಿ ಕಾಲು ಚಾಚಿ ಮಲಗುವುದರಿಂದ ಅವರ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ.

5. ವಾಸ್ತುಶಾಸ್ತ್ರದ  (Vastu Shastra)  ಪ್ರಕಾರ ಮನೆಯ ಮಲಗುವ ಕೋಣೆ ಅಥವಾ ಜಾಗದಲ್ಲಿ ಅಪ್ಪಿ-ತಪ್ಪಿಯೂ ಕೂಡ ಪ್ಲಾಸ್ಟಿಕ್ ಹೂವು ಅಥವಾ ಸಸ್ಯಗಳನ್ನು ಇಡಬಾರದು. ಇದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸುತ್ತದೆ.

6. ನಿತ್ಯ ಬೆಳಗ್ಗೆ-ಸಂಜೆ ಹೊತ್ತು ಮನೆಯ ಎಲ್ಲ ಕೋಣೆಗಳಲ್ಲಿ  ಕರ್ಪೂರ ಉರಿಸಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗುತ್ತದೆ.

ಇದನ್ನೂ ಓದಿ-How To Remove Unwanted Facial Hairs: ಮುಖದ ಮೇಲಿನ ಅನಗತ್ಯ ಕೂದಲಿನ ಚಿಂತೆ ಬಿಡಿ, ಇದನ್ನೊಮ್ಮೆ ಟ್ರೈ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News