Side Effects Of Eating Triphala: ತ್ರಿಫಲಾ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭ ಸಿಗುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದು ಅಥವಾ ತಪ್ಪಾದ ರೀತಿಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಕೂಡ ಉಂಟಾಗುತ್ತದೆ. ಯಾವುದೇ ಪದಾರ್ಥವನ್ನು ಸೇವಿಸುವ ಪ್ರಮಾಣ ಮತ್ತು ಅದರ ವಿಧಾನ ತಿಳಿದಿರುವುದು ತುಂಬಾ ಮುಖ್ಯ, ಆದರೆ ಅದನ್ನು ಸರಿಯಾಗಿ ಬಳಸದಿದ್ದಾಗ ಅದು ದೇಹಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಇಂದು ನಾವು ನಿಮಗೆ ತ್ರಿಫಲಾವನ್ನು ಅತಿಯಾಗಿ ಸೇವಿಸುವುದರಿಂದ ಅಥವಾ ಅದನ್ನು ಸರಿಯಾಗಿ ಸೇವಿಸದೆ ಇರುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗಾದರೆ ಬನ್ನಿ ತ್ರಿಫಲಾ ಸೇವನೆಯಿಂದಾಗುವ ಅಡ್ಡಪರಿಣಾಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ತೂಕ ಇಳಿಕೆಗೆ ಪ್ರಯೋಜನಕಾರಿ
ನೀವು ತ್ರಿಫಲಾವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಅದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ವರದಿಗಳ ಪ್ರಕಾರ, ಸ್ಥೂಲಕಾಯ ಹೊಂದಿರುವ ವ್ಯಕ್ತಿಗಳು ನಿತ್ಯ 10 ಗ್ರಾಂ ತ್ರಿಫಲಾ ಸೇವಿಸುವುದರಿಂದ ಅವರ ತೂಕ, ಸೊಂಟದ ಭಾಗದ ಕೊಬ್ಬು ಹಾಗೂ ಪೃಷ್ಠ ಭಾಗದ ಕೊಬ್ಬು ಗಣನೀಯವಾಗಿ ಇಳಿಕೆಯಾಗುತ್ತದೆ ಎನ್ನಲಾಗುತ್ತದೆ.


ತ್ರಿಫಲಾದ ಅಡ್ಡಪರಿಣಾಮಗಳು
ತ್ರಿಫಲಾ ತಿಂದಾಗ ಅನೇಕರಿಗೆ ಅತಿಸಾರ, ಹೊಟ್ಟೆನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮತ್ತೊಂದೆಡೆ, ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ತ್ರಿಫಲಾವನ್ನು ಸೇವಿಸುವುದು ಸರಿಯಲ್ಲ. ವ್ಯಕ್ತಿಯು ಯಾವುದೇ ಒಂದು ದೀರ್ಘಕಾಲದ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ತ್ರಿಫಲಾವನ್ನು ತೆಗೆದುಕೊಳ್ಳಬಾರದು. ಏಕೆಂದರೆ ಇದು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇನ್ನೊಂದೆಡೆ ಯಾರಾದರೂ ಹುಳಿ ಪದಾರ್ಥಗಳಿಂದ ಅಲರ್ಜಿಯನ್ನು ಹೊಂದಿದ್ದರೆ ಅಥವಾ ಚರ್ಮದ ಅಲರ್ಜಿಯನ್ನು ಹೊಂದಿದ್ದರೆ, ಅವರು ತ್ರಿಫಲಾ ಸೇವನೆಯನ್ನು ತಪ್ಪಿಸಬೇಕು ಎನ್ನಲಾಗಿದೆ.


ಇದನ್ನೂ ಓದಿ-Cholesterol: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಉಗುರಿನಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ!


ತ್ರಿಫಲಾವನ್ನು ಹೇಗೆ ಬಳಸಬೇಕು
ತ್ರಿಫಲಾ ಕ್ಯಾಪ್ಸುಲ್, ಚೂರ್ಣ, ಜ್ಯೂಸ್ ಅಥವಾ ಟ್ಯಾಬ್ಲೆಟ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆಹಾರವನ್ನು ತಿನ್ನುವ ಮೊದಲು ಬೆಚ್ಚಗಿನ ನೀರಿನಲ್ಲಿ ಬೆರೆಸಿ ನೀವು ಖಾಲಿ ಹೊಟ್ಟೆಯಲ್ಲಿ ತ್ರಿಫಲಾವನ್ನು ತೆಗೆದುಕೊಳ್ಳಬಹುದು.


ಇದನ್ನೂ ಓದಿ-Diabetes ಕಾಯಿಲೆ ಇರುವವರು ಈ ರೀತಿ ಟೀ-ಕಾಫಿ ಸೇವಿಸಿ, ಸಮಸ್ಯೆಗಳಿಂದ ದೂರ ಉಳಿಯುವಿರಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.