Diabetes Tips: ನೀವು ಟೈಪ್ 2 ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದರೆ, ಈ ಸುದ್ದಿ ನಿಮಗೆ ನಿಮಗೆ ಕೊಂಚ ನೆಮ್ಮದಿಯನ್ನು ನೀಡಲಿದೆ. ಸಂಶೋಧನೆಯ ಪ್ರಕಾರ, ಮಧುಮೇಹ ಟೈಪ್ 2 ರೋಗಿಗಳು ದಿನಕ್ಕೆ 2-4 ಕಪ್ ಚಹಾ-ಕಾಫಿಯನ್ನು ಸುಲಭವಾಗಿ ಸೇವಿಸಬಹುದು. . ಇತ್ತೀಚೆಗಷ್ಟೇ ಅಮೆರಿಕದ ಬೋಸ್ಟನ್ನಲ್ಲಿರುವ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿರುವ ಒಂದು ವಿಶೇಷ ರೀತಿಯ ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಮಧುಮೇಹ ಟೈಪ್ 2 ರೋಗಿಗಳು ಹೆಚ್ಚು ಚಹಾ ಮತ್ತು ಕಾಫಿಯನ್ನು ಸೇವಿಸಿದರೆ, ಅಕಾಲಿಕವಾಗಿ ಸಾವಿನ ಅಪಾಯವು ಶೇ. 25 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಆದರೆ ಈ ಸಂಶೋಧನೆಯು ಮಧುಮೇಹ ರೋಗಿಗಳು ಯಾವ ರೀತಿಯ ಚಹಾ ಮತ್ತು ಕಾಫಿಯನ್ನು ಕುಡಿಯುತ್ತಾರೆ ಎಂಬುದರ ಮೇಲೆ ಅವಲಂಭಿತವಾಗಿದೆ.
ಶುಗರ್ ಫ್ರೀ ಬಳಕೆ ಹೆಚ್ಚು ಬೇಡ
ಶುಗರ್ ಫ್ರೀ ಬಳಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಅಂಶವೂ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಮಧುಮೇಹ ರೋಗಿಗಳು ಹೆಚ್ಚು ಸಿಹಿಯಾದ ಚಹಾ-ಕಾಫಿಯನ್ನು ಸೇವಿಸಿದರೂ, ಇದು ಹೃದ್ರೋಗದ ಅಪಾಯವನ್ನು 25% ರಷ್ಟು ಹೆಚ್ಚಿಸುತ್ತದೆ ಮತ್ತು ಹೃದಯಾಘಾತ ಅಥವಾ ಇತರ ಯಾವುದೇ ಹೃದಯರಕ್ತನಾಳದ ಘಟನೆಯಿಂದ ಸಾಯುವ ಅಪಾಯವು ಶೇ. 29 ರಷ್ಟು ಹೆಚ್ಚಾಗುತ್ತದೆ ಎಂಬುದು ಈ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಹೃದ್ರೋಗವು ಸಾವಿಗೆ ಸಾಮಾನ್ಯ ಕಾರಣವಾಗಿದೆ ಎಂದು ಸಂಶೋಧನೆ ತೋರಿಸಿದೆ. ಈ ಸಂಶೋಧನೆಯಲ್ಲಿ, ಕಪ್ಪು ಕಾಫಿ, ಸಕ್ಕರೆ ಇಲ್ಲದೆ ಚಹಾದ ಬಗ್ಗೆ ಉಲ್ಲೇಖಿಸಲಾಗಿದೆ . ಬೋಸ್ಟನ್ನಲ್ಲಿರುವ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಹಾರ್ವರ್ಡ್ ಟಿಎಚ್ನಲ್ಲಿ ಪೋಷಣೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಅಧ್ಯಯನ ಲೇಖಕ ಕ್ಯು ಸನ್ ಅವರ ಪ್ರಕಾರ, 'ಕೆಲವು ಪಾನೀಯಗಳು ಇತರರಿಗಿಂತ ಸಂಪೂರ್ಣವಾಗಿ ಹೆಚ್ಚು ಪ್ರಯೋಜನಕಾರಿಯಾಗಿವೆ, ಹೀಗಾಗಿ ನೀವು ಯಾವ ರೀತಿಯ ಪಾನೀಯವನ್ನು ಸೇವಿಸುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದಿದ್ದಾರೆ.
ಹೃದ್ರೋಗದ ಅಪಾಯದಲ್ಲಿರುವ ಮಧುಮೇಹ ರೋಗಿಗಳು
ಈ ಸಂಶೋಧನೆಯಲ್ಲಿ, ಕಡಿಮೆ ಕೊಬ್ಬಿನ ಹಾಲು, ಹಣ್ಣಿನ ರಸಗಳು ಅಥವಾ ಕೃತಕವಾಗಿ ಸಿಹಿಗೊಳಿಸಿದ ಪಾನೀಯಗಳ ಬದಲಿಗೆ, ನಾವು ಕಪ್ಪು ಕಾಫಿ, ಸಕ್ಕರೆ ಇಲ್ಲದ ಚಹಾ ಮತ್ತು ಸರಳ ನೀರು ಶಾಮೀಲಾಗಿವೆ. ಈ ಸಂಶೋಧನೆಯಲ್ಲಿ ತಂಪು ಪಾನೀಯಗಳು, ಹೆಚ್ಚುವರಿ ಸಿಹಿ ಹಣ್ಣಿನ ರಸಗಳು, ಹೆಚ್ಚಿನ ಕೊಬ್ಬಿನ ಹಾಲನ್ನು ಪರಿಗಣಿಸಲಾಗಿಲ್ಲ. ಟೈಪ್ 2 ಡಯಾಬಿಟಿಸ್ ಹೊಂದಿರುವ ರೋಗಿಗಳು ಹೃದ್ರೋಗ ಮತ್ತು ಹೃದಯಾಘಾತದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಇದನ್ನೂ ಓದಿ-Diabetes: ಮಧುಮೇಹ ರೋಗಿಗಳಿಗೆ ವರಕ್ಕೆ ಸಮಾನ ಈ ಬೀಜಗಳು, ಈ ರೀತಿ ಬಳಸಿ!
ಈ ದತ್ತಾಂಶವನ್ನು ಸಂಶೋಧನೆಯಲ್ಲಿ ಪರಿಗಣಿಸಲಾಗಿದೆ
ಬುಧವಾರದಂದು BMJ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು, ಯುನೈಟೆಡ್ ಸ್ಟೇಟ್ಸ್ನಲ್ಲಿ ದಾದಿಯರ ಆರೋಗ್ಯ ಅಧ್ಯಯನ ಮತ್ತು ಆರೋಗ್ಯ ವೃತ್ತಿಪರರ ಅನುಸರಣಾ ಅಧ್ಯಯನದ ಭಾಗವಾಗಿರುವ ಟೈಪ್ 2 ಡಯಾಬಿಟಿಸ್ನಿಂದ ಬಳಲುತ್ತಿರುವ ಸುಮಾರು 15,500 ವಯಸ್ಕರ ಆಹಾರದ ಡೇಟಾವನ್ನು ವಿಶ್ಲೇಷಿಸಿದೆ. ಇಂತಹ ಶೇ. 75 ರಷ್ಟು ಜನರು ಪ್ರಶ್ನೆಗಳಿಗೆ ನಿರಾತಂಕವಾಗಿ ಉತ್ತರಿಸಿದ್ದಾರೆ. ಇದರಲ್ಲಿ ಸರಾಸರಿ 61 ವರ್ಷ ವಯಸ್ಸಿನ ಮಹಿಳೆಯರು ಇದ್ದರು.
ಇದನ್ನೂ ಓದಿ-Lady Finger For Weight Loss: 'ಲೇಡೀಸ್ ಫಿಗರ್' ನಿರ್ವಹಣೆಗೆ ಬಲು ಲಾಭಕಾರಿ ಈ 'ಲೇಡಿ ಫಿಂಗರ್'!
ಟೈಪ್ 2 ಡಯಾಬಿಟಿಸ್ ರೋಗನಿರ್ಣಯ ಮಾಡುವ ಮೊದಲು ಸಕ್ಕರೆ-ಸಿಹಿ ಪಾನೀಯಗಳನ್ನು ಹೆಚ್ಚು ಕುಡಿಯುವ ಜನರಿಗೆ ಒಳ್ಳೆಯ ಸುದ್ದಿ ಪ್ರಕಟಗೊಂಡಿದೆ. ರೋಗನಿರ್ಣಯದ ನಂತರ ಆ ಸಿಹಿಯಾದ ಪಾನೀಯಗಳನ್ನು ಕಾಫಿ ಅಥವಾ ಕೃತಕ ಕ್ಯಾಲೋರಿಗಳಿಲ್ಲದ ಪಾನೀಯಗಳೊಂದಿಗೆ ಬದಲಾಯಿಸಿದಾಗ, ಆರಂಭಿಕ ಸಾವಿನ ಅಪಾಯವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅಧ್ಯಯನವು ಪತ್ತೆಹಚ್ಚಿದೆ. ಸಕ್ಕರೆ-ಸಿಹಿಗೊಳಿಸಿದ ಮತ್ತು ಕೃತಕ ಕ್ಯಾಲೋರಿಗಳಿಲ್ಲದ ಪಾನೀಯಗಳನ್ನು ಕಾಫಿ, ಚಹಾ, ಸರಳ ನೀರು ಮತ್ತು ಕಡಿಮೆ-ಕೊಬ್ಬಿನ ಹಾಲಿನೊಂದಿಗೆ ಬದಲಾಯಿಸಿದಾಗ, ಹೃದ್ರೋಗ ಮತ್ತು ಯಾವುದೇ ಕಾರಣದಿಂದ ಸಾವಿನ ಅಪಾಯವು ಇನ್ನೂ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.