Hotel booking tips : ಹಲವಾರು ಬಾರಿ ಬೇರೆ ಊರಿಗೆ ಪ್ರಯಾಣ ಮಾಡಿದಾಗ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಹೋಟೆಲ್‌ಗಳಲ್ಲಿ ಆಹಾರ ಪದ್ದತಿ ವಿಭಿನ್ನವಾದರೂ ಸಹ ಹಾಸಿಗೆ ವಿನ್ಯಾಸ ಹೆಚ್ಚಾಗಿ ಒಂದೇ ಶೈಲಿಯಲ್ಲಿ ಇರುತ್ತದೆ. ನೀವು ಗಮನಿಸಿರಬೇಕು ಹೆಚ್ಚಿನ ಹೋಟೆಲ್‌ಗಳಲ್ಲಿ ಬೆಡ್‌ ಮೇಲೆ ನಾಲ್ಕು ಅಥಾವಾ ಹೆಚ್ಚಿಗೆ ದಿಂಬುಗಳು ಇರುತ್ತವೆ.. ಇದರ ಹಿನ್ನೆಲೆ ತಿಳಿಯೋಣ ಬನ್ನಿ.


COMMERCIAL BREAK
SCROLL TO CONTINUE READING

ಹೋಟೆಲ್ ಮ್ಯಾನೇಜ್‌ಮೆಂಟ್ ರೂಮ್‌ಗಳ ಸ್ವಚ್ಛತೆ ಮತ್ತು ಹಾಸಿಗೆಗಳ ಆಯೋಜನೆ ಮಾಡುತ್ತದೆ. ಅತಿಥಿಗಳು ಕೋಣೆಗೆ ಪ್ರವೇಶಿಸಿದಾಗ ಐಷಾರಾಮಿ ಅನುಭವವನ್ನು ಪಡೆಯುವಂತೆ ವಸ್ತುಗಳನ್ನು ಜೋಡಿಸಿಟ್ಟಿರುತ್ತಾರೆ. ಅಲ್ಲದೆ ಉತ್ತಮ ಗುಣಮಟ್ಟದ ಹಾಸಿಗೆ ವ್ಯವಸ್ಥೆ ಮಾಡಿರುತ್ತಾರೆ. ಬೆಡ್‌ ಮೇಲೆ ಅತಿಥಿಗೆ ಹೆಚ್ಚುವರಿ ಸೌಕರ್ಯವನ್ನು ನೀಡುವ ದೃಷ್ಟಿಯಿಂದ ಮತ್ತು ಉತ್ತಮ ನಿದ್ರೆಗೆ ಸಹಾಯವಾಗಲಿ ಎಂದು ನಾಲ್ಕು ದಿಂಬುಗಳನ್ನು ಇಟ್ಟಿರುತ್ತಾರೆ.


ಇದನ್ನೂ ಓದಿ: ʼರುದ್ರಾಕ್ಷಿʼ ಧರಿಸುವ ಮುನ್ನ ಅದರ ನಿಗೂಢ ರಹಸ್ಯ ಮತ್ತು ಹಿನ್ನೆಲೆ ತಿಳಿಯಿರಿ..! ಏಕೆ ಗೊತ್ತೆ..?


ಹೋಟೆಲ್ ಹಾಸಿಗೆಯನ್ನು ಬಳಸುವ ಮೊದಲು, ಈ ವಿಷಯಗಳನ್ನು ನೆನಪಿನಲ್ಲಿಡಿ


  • ಬೆಡ್ ಶೀಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅದರ ಮೇಲೆ ಕೊಳಕು ಅಥವಾ ಯಾವುದೇ ಕಲೆಗಳು ಇರಬಾರದು. ಹಾಗಿದ್ದಲ್ಲಿ, ಅದನ್ನು ತಕ್ಷಣ ಬದಲಾಯಿಸಿ. ಕುಶನ್‌ಗಳ ಕೆಳಗೆ ಏನಾದರೂ ಬಿದ್ದಿದೆಯೇ ಎಂದು ಪರಿಶೀಲಿಸಿ

  • ಆನ್‌ಲೈನ್‌ನಲ್ಲಿ ಹೋಟೆಲ್ ರೂಮ್ ಬುಕ್ ಮಾಡುವಾಗ ನೆನಪಿನಲ್ಲಿಡಬೇಕಾದ ವಿಷಯಗಳು

  • ವೆಬ್‌ಸೈಟ್ ನೋಡಿ ಹೋಟೆಲ್‌ ಅನ್ನು ಬುಕ್ ಮಾಡಬೇಡಿ. ಹೋಟೆಲ್‌ಗೆ ಕರೆ ಮಾಡಿ ಮತ್ತು ಪ್ರತಿ ವಿವರವನ್ನು ಒಮ್ಮೆ ಕೇಳಿ. ಕೋಣೆಯ ಗಾತ್ರವು ಉಲ್ಲೇಖಿಸಿರುವಂತೆಯೇ ಇದೆಯೋ ಇಲ್ಲವೋ. ಎಂಬುವುದನ್ನು ಖಚಿತಪಡಿಸಿಕೊಳ್ಳಿ.

  • ಚೆಕ್ ಇನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಓದಿ ಮತ್ತು ಎಚ್ಚರಿಕೆಯಿಂದ ಪರಿಶೀಲಿಸಿ. ಸಾಮಾನ್ಯವಾಗಿ ವೆಬ್‌ಸೈಟ್‌ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

  • ಬುಕಿಂಗ್ ಮಾಡುವಾಗ ಹೋಟೆಲ್ ವಿಮರ್ಶೆಗಳನ್ನು ಓದಿ, ಇದರಿಂದ ನೀವು ಸಾಕಷ್ಟು ಮಾಹಿತಿಯನ್ನು ಪಡೆಯುತ್ತೀರಿ. ಅಲ್ಲದೆ, ಆನ್‌ಲೈನ್‌ನಲ್ಲಿ ಬುಕ್ ಮಾಡುವಾಗ ಹೋಲಿಕೆ ಮಾಡಿ. ಬಹುಶಃ ನೀವು ಇನ್ನೊಂದು ಹೋಟೆಲ್‌ನಲ್ಲಿ ಉತ್ತಮ ಕೊಡುಗೆಯನ್ನು ಪಡೆಯುತ್ತೀರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.