ಬೆಂಗಳೂರು : ಸಾಮಾನ್ಯವಾಗಿ ನಿಂಬೆ ಹಣ್ಣಿನ ಜ್ಯೂಸ್ ಇಷ್ಟ ಪಡದವರು ಬಹಳ ಕಡಿಮೆ. ಅದರಲ್ಲೂ ಬೇಸಿಗೆಯಲ್ಲಿ ನಿಂಬೆ ಪಾನಕಕ್ಕೆ ಸ್ವಲ್ಪ ಹೆಚ್ಚಿನ ಮಹತ್ವವಿದೆ.   ನಿಂಬೆ ಶರಬತ್ತನ್ನು ತಯಾರಿಸುವುದು ಕೂಡಾ ಬಹಳ ಸುಲಭ. ಅನೇಕ ಜನರು ಸೋಡಾದೊಂದಿಗೆ ನಿಂಬೆ ಬೆರೆಸಿ ಸೋಡಾ  ಶರಬತ್ತು ಮಾಡಿ ಕುಡಿಯುತ್ತಾರೆ. 


COMMERCIAL BREAK
SCROLL TO CONTINUE READING

ನಿಂಬೆ ಪಾನಕವು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ : 
ನಿಂಬೆ ಶರಬತ್ತನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂಜಾನೆ ಎದ್ದು ಒಂದು ಲೋಟ ನಿಂಬೆ ಪಾನಕವನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಇನ್ನು ಬಹಳ ಬೇಗ ಪರಿಣಾಮ ತಿಳಿಯಬೇಕಾದರೆ, ನಿಂಬೆಹಣ್ಣಿನ ರಸಕ್ಕೆ ಜೇನುತುಪ್ಬವನ್ನು ಕೂಡಾ ಹಾಕುತ್ತಾರೆ.


ಇದನ್ನೂ ಓದಿ : Juice For Diabetes Patients: ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಈ ಗ್ರೀನ್ ಜ್ಯೂಸ್


ನಿಂಬೆ ನೀರು ಕುಡಿಯುವ ಪ್ರಯೋಜನಗಳು :
ನಿಂಬೆಯಲ್ಲಿ ಸಿಟ್ರಿಕ್ ಆಮ್ಲ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ6, ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಫ್ರೀ ರಾಡಿಕಲ್ ಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆಂಟಿಆಕ್ಸಿಡೆಂಟ್‌ಗಳು ನಿಂಬೆಯಲ್ಲಿ ಕಂಡುಬರುತ್ತವೆ. ಇದು ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಂಬೆ ಪಾನಕವನ್ನು ಸೇವಿಸುವುದರಿಂದ, ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಂದರೆ, ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ.


ಹಸಿವು ನಿಯಂತ್ರಣ :
ನಿಂಬೆಯಲ್ಲಿ ಪೆಕ್ಟಿನ್ ಎಂಬ ವಸ್ತುವಿದ್ದು, ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿದ ನಂತರ ಎಣ್ಣೆಯುಕ್ತ ಆಹಾರವನ್ನು ತಿನ್ನುವ ಬಯಕೆಯೂ ಕಡಿಮೆಯಾಗುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ನಿಂಬೆಯಲ್ಲಿರುವ ಪೊಟ್ಯಾಸಿಯಮ್ ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Black Pepper : ತೂಕ ಇಳಿಕೆಗೆ ಮನೆ ಮದ್ದು ಕರಿಮೆಣಸು : ಈ ರೀತಿ ಸೇವಿಸಿ!


 



( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3hEw2hy ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.