ಬೆಂಗಳೂರು : Janmastami 2022:  ಜನ್ಮಾಷ್ಟಮಿಯನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿಯನ್ನು 18 ಆಗಸ್ಟ್ 2022 ರಂದು  ಆಚರಿಸಲಾಗುವುದು.  ಜನ್ಮಾಷ್ಟಮಿಯ ದಿನದಂದು  ಗೋಪಾಲನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನದಂದು ರಾಶಿಚಕ್ರದ ಪ್ರಕಾರ ವಿಶೇಷ ವಸ್ತುಗಳನ್ನು ದಾನ ಮಾಡಿದರೆ  ಬಹಳಷ್ಟಿ ಪ್ರಯೋಜನವಾಗುವುದು. ಈ ರೀತಿ ಮಾಡಿದರೆ ಶ್ರೀಕೃಷ್ಣನು ಪ್ರಸನ್ನನಾಗಿ,  ಸಂಪತ್ತು ಮತ್ತು ಸಂತೋಷವನ್ನು ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ.  ಹಾಗಿದ್ದರೆ ಈ ದಿನದಂದು ಯಾವ ರಾಶಿಯವರು ಯಾವ ದಾನ ಮಾಡಬೇಕು ನೋಡೋಣ. 


COMMERCIAL BREAK
SCROLL TO CONTINUE READING

ಮೇಷ: ಜನ್ಮಾಷ್ಟಮಿಯ ದಿನದಂದು ಮೇಷ ರಾಶಿಯವರು ಗೋಧಿಯನ್ನು ದಾನ ಮಾಡಬೇಕು. ಹಾಗೆಯೇ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ.


ವೃಷಭ: ಜನ್ಮಾಷ್ಟಮಿಯ ದಿನ ವೃಷಭ ರಾಶಿಯವರು ಸಕ್ಕರೆಯನ್ನು ದಾನ ಮಾಡಬೇಕು. 


ಇದನ್ನೂ ಓದಿ : August 31ರ ವರೆಗೆ ಈ ರಾಶಿಗಳ ಜನರಿಗೆ ಅಪಾರ ಧನಲಾಭ ! ಕಾರಣ ಇಲ್ಲಿದೆ


ಮಿಥುನ: ಜನ್ಮಾಷ್ಟಮಿಯ ದಿನದಂದು ಮಿಥುನ ರಾಶಿಯವರು ಬಡವರು ಮತ್ತು ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. 


ಕರ್ಕ ರಾಶಿ : ಈ ರಾಶಿಯವರು ಜನ್ಮಾಷ್ಟಮಿಯ ದಿನ ಅನ್ನ ದಾನ ಮಾಡಿದರೆ ಜೀವನದಲ್ಲಿ ಸುಖ ಸಂತೋಷ ಬರುತ್ತದೆ. 


ಸಿಂಹ: ಜನ್ಮಾಷ್ಟಮಿಯ ದಿನ ಸಿಂಹ ರಾಶಿಯವರು ಬೆಳಗ್ಗೆಯಿಂದ ಶ್ರೀ ಆದಿತ್ಯ ಹೃದಯ ಶ್ರುತ್ ಪಠಿಸಿ ನಂತರ ಬೆಲ್ಲವನ್ನು ದಾನ ಮಾಡಬೇಕು. 


ಕನ್ಯಾ: ಕೃಷ್ಣ ಜನ್ಮಾಷ್ಟಮಿಯ ದಿನ ಕನ್ಯಾ ರಾಶಿಯವರು ಬಡವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. 


ತುಲಾ : ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ತುಲಾ ರಾಶಿಯವರು ಬಡವರಿಗೆ ಬಟ್ಟೆ ನೀಡಬೇಕು. ಕೃಷ್ಣನಿಗೆ ಪಂಚಾಮೃತ ಅರ್ಪಿಸಬೇಕು. ಹಣ್ಣುಗಳನ್ನು ದಾನ ಮಾಡುವುದರಿಂದಲೂ  ಪ್ರಯೋಜನವಾಗಲಿದೆ. 


ಇದನ್ನೂ ಓದಿ : Gajkesari Yog: ಈ ರಾಶಿಯ ಜಾತಕದಲ್ಲಿ ಆಗಸ್ಟ್ 15 ರಿಂದ ನಿರ್ಮಾಣಗೊಳ್ಳುತ್ತಿದೆ ಗಜ ಕೇಸರಿ ಯೋಗ, ಯಾರಿಗೆ ಲಾಭ?


ವೃಶ್ಚಿಕ: ಜನ್ಮಾಷ್ಟಮಿಯಂದು ವೃಶ್ಚಿಕ ರಾಶಿಯವರು ಗೋಧಿಯನ್ನು ನಿರ್ಗತಿಕರಿಗೆ ದಾನ ಮಾಡಬೇಕು. 


ಧನು ರಾಶಿ : ಜನ್ಮಾಷ್ಟಮಿಯ ದಿನದಂದು ಧನು ರಾಶಿಯವರು ದೇವಸ್ಥಾನಗಳಲ್ಲಿ ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು. ಅಗತ್ಯವಿರುವವರಿಗೆ ಪುಸ್ತಕಗಳನ್ನು ಸಹ ನೀಡಬಹುದು. 


ಮಕರ: ಮಕರ ರಾಶಿಯವರು ಜನ್ಮಾಷ್ಟಮಿಯ ದಿನದಂದು ಎಳ್ಳನ್ನು ದಾನ ಮಾಡಬೇಕು. 


ಕುಂಭ: ಕುಂಭ ರಾಶಿಯವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಅನ್ನ ಅಥವಾ ಎಳ್ಳನ್ನು ದಾನ ಮಾಡಬೇಕು. ಗೀತೆಯ ಐದನೇ ಮತ್ತು ಎಂಟನೇ ಅಧ್ಯಾಯಗಳನ್ನು ಅಧ್ಯಯನ ಮಾಡಿ. 


ಮೀನ: ಮೀನ ರಾಶಿಯವರು ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ನವಿಲು ಗರಿ ಮತ್ತು ಕೊಳಲನ್ನು ಅರ್ಪಿಸಬೇಕು. ಇದರೊಂದಿಗೆ ಮಕ್ಕಳಿಗೆ ಮತ್ತು ಬಡವರಿಗೆ ಬಾಳೆಹಣ್ಣುಗಳನ್ನು ದಾನ ಮಾಡಿ.  


ಇದನ್ನೂ ಓದಿ :  Night Vastu Tips: ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ಮಲಗುವ ಮುನ್ನ ಈ ಸಣ್ಣ ಉಪಾಯ ಅನುಸರಿಸಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.