ಬೆಂಗಳೂರು : Chandra Grahan 2022: ಚಂದ್ರಗ್ರಹಣ, ಸೂರ್ಯಗ್ರಹಣವನ್ನು ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಗ್ರಹಣದ ನಂತರ ಅದರ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸುವ ಸಲುವಾಗಿ ಸ್ನಾನ ಮಾಡುವಂತೆ ಸೂಚಿಸಲಾಗುತ್ತದೆ. ಅಲ್ಲದೆ ಗ್ರಹಣ ಸಮಯದಲ್ಲಿ ಯಾವ ಶುಭ ಕಾರ್ಯಗಳನ್ನು ಕೂಡಾ ಮಾಡುವುದಿಲ್ಲ. ಇಂದು, ಅಂದರೆ ಮೇ 16 ರ ವೈಶಾಖ ಪೂರ್ಣಿಮೆಯ ದಿನದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತದೆ. ಹುಣ್ಣಿಮೆಯ ದಿನದಂದು ದಾನ ಮಾಡುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇಂದು ಗ್ರಹಣ ಮುಗಿದ ನಂತರ ತಮ್ಮ ತಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ.ಇದರಿಂದ ಎದುರಾಗಬಹುದಾದ  ಸಂಕಟ ದೂರವಾಗುತ್ತದೆ. ಪಾಪಗಳು ನಾಶವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. 


COMMERCIAL BREAK
SCROLL TO CONTINUE READING

ಚಂದ್ರಗ್ರಹಣದ ನಂತರ ರಾಶಿಚಕ್ರದ ಪ್ರಕಾರ ದಾನ ಮಾಡಿ :
ಮೇಷ ರಾಶಿ - ಮೇಷ ರಾಶಿಯವರು ಚಂದ್ರಗ್ರಹಣ ಮುಗಿದ ನಂತರ ಅಕ್ಕಿಯನ್ನು ದಾನ ಮಾಡಬೇಕು. 


ವೃಷಭ ರಾಶಿ - ವೃಷಭ ರಾಶಿಯವರು ಹಾಲು-ಮೊಸರು, ಪಾಯಸ ದಾನ ಮಾಡಬೇಕು. 


ಮಿಥುನ - ಮಿಥುನ ರಾಶಿಯವರೂ ಹಸುವಿಗೆ ಮೇವು ತಿನ್ನಿಸಿ. ಹಾಗೆಯೇ ಸಾಧ್ಯವಾದರೆ ಹಸುವಿನ ಸೇವೆ ಮಾಡಿ. 


ಕರ್ಕಾಟಕ ರಾಶಿ - ಕರ್ಕಾಟಕ ರಾಶಿಯವರು ಬಡವರಿಗೆ ಅನ್ನದಾನ ಮಾಡುವುದರಿಂದ ಶುಭ ಫಲ ದೊರೆಯುತ್ತದೆ. 


ಸಿಂಹ - ಸಿಂಹ ರಾಶಿಯ ಜನರು ಸಕ್ಕರೆಯನ್ನು ದಾನ ಮಾಡಿದರೆ ಒಳ್ಳೆಯದು.  


ಇದನ್ನೂ ಓದಿ:  Vaishakh Purnima 2022: ತುಂಬಾ ವಿಶಿಷ್ಠವಾಗಿದೆ ಈ ಬಾರಿಯ ಹುಣ್ಣಿಮೆ, ಈ ಒಂದು ಕೆಲಸ ಹಣದ ಸುರಿಮಳೆಗೆ ಕಾರಣವಾಗಲಿದೆ


ಕನ್ಯಾ ರಾಶಿ - ಚಂದ್ರಗ್ರಹಣದ ನಂತರ ಕನ್ಯಾ ರಾಶಿಯವರು ಗೋಧಿ ಹಿಟ್ಟನ್ನು ಬಡವರಿಗೆ ದಾನ ಮಾಡಬೇಕು. 


ತುಲಾ - ತುಲಾ ರಾಶಿಯ ಗ್ರಹಣದ ನಂತರ, ಹಾಲು ಅಥವಾ ಸಕ್ಕರೆಯನ್ನು ದಾನ ಮಾಡಿ. ಗ್ರಹಣದ ಸಮಯದಲ್ಲಿ 'ಓಂ ಕ್ರೀಂ ಕಾಲಿಕೆ ಸ್ವಾಹಾ ಮಂತ್ರ' ಪಠಿಸುವುದರಿಂದ ಈ ರಾಶಿಯವರಿಗೆ ಲಾಭವೂ ಸಿಗುತ್ತದೆ. 


ವೃಶ್ಚಿಕ ರಾಶಿ- ವೃಶ್ಚಿಕ ರಾಶಿಯ ಜನರು ಬಡವರಿಗೆ ಹಣವನ್ನು ದಾನ ಮಾಡಬಹುದು. ಗಾಯತ್ರಿ ಮಂತ್ರವನ್ನೂ ಪಠಿಸಿದರೆ ಶುಭ ಫಲ ಸಿಗುತ್ತದೆ.  


ಧನು ರಾಶಿ - ಧನು ರಾಶಿಯ ಜನರು ಹಳದಿ ಬಟ್ಟೆ ಅಥವಾ ಆಹಾರವನ್ನು ದಾನ ಮಾಡಿದರೆ ಉತ್ತಮ , ಇದರೊಂದಿಗೆ ವಿಷ್ಣು ಸಹಸ್ರನಾಮವನ್ನೂ ಪಠಿಸಿ. 


ಮಕರ ರಾಶಿ - ಈ ರಾಶಿಯ ಜನರು ಹಾಲು ಮತ್ತು ತುಪ್ಪವನ್ನು ದಾನ ಮಾಡಬಹುದು. ನೀರು ದಾನ ಮಾಡುವುದೂ ಒಳ್ಳೆಯದು. 


ಕುಂಭ - ಕುಂಭ ರಾಶಿಯವರಿಗೆ ಕಪ್ಪು ಎಳ್ಳು, ಕಪ್ಪು ಬಟ್ಟೆಗಳನ್ನು ದಾನ ಮಾಡಿ. 


ಇದನ್ನೂ ಓದಿ:  Palm Reading : ಅಂಗೈಯಲ್ಲಿ ರಾಜಯೋಗ ನೋಡುವುದು ಹೇಗೆ? ಇಲ್ಲಿದೆ ನೋಡಿ


ಮೀನ - ಮೀನ ರಾಶಿಯವರು ಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಲು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಬಡವರಿಗೆ ಅನ್ನದಾನ ಮಾಡಿ . 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.