ನಿಮ್ಮ ಜೀವನದ ಈ ವಿಚಾರಗಳ ಬಗ್ಗೆ ಯಾವತ್ತೂ ಇನ್ನೊಬ್ಬರೊಂದಿಗೆ ಚರ್ಚಿಸದಿರಿ
ನಿಮ್ಮ ಕುಟುಂಬ ಮತ್ತು ಕುಟುಂಬದ ವಿಷಯವನ್ನು ನಿಮ್ಮ ಕುಟುಂಬಕಷ್ಟೇ ಸೀಮಿತಗೊಳಿಸಿ. ಸ್ನೇಹಿತರು, ನೆರೆಹೊರೆಯವರು, ಸಂಬಂಧಿಕರು ಅಥವಾ ಇತರರೊಂದಗೆ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ಹೋಗಬಾರದು.
ನವದೆಹಲಿ : ಆಚಾರ್ಯ ಶುಕ್ರಾಚಾರ್ಯರು (Shukracharya) ವ್ಯಕ್ತಿಯ ಕಲ್ಯಾಣ ಮತ್ತು ವ್ಯಕ್ತಿಯ ವರ್ತನೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ. ಶುಕ್ರ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವನದ ಕೆಲವು ವಿಶೇಷ ವಿಷಯಗಳನ್ನು ಗುಪ್ತವಾಗಿಡಬೇಕು. ಕೆಲ ವಿಚಾರಗಳನ್ನು ಸರ್ವರಿಗೂ ಬಹಿರಂಗಪಡಿಸುವುದರಿಂದ ನಷ್ಟ ಎದುರಾಗಬಹುದು. ಹಾಗಿದ್ದರೆ ಶುಕ್ರಾಚಾರ್ಯರ ನೀತಿ (Shukrachaarya Niti) ಪ್ರಕಾರ ಯಾವೆಲ್ಲಾ ವಿಚಾರಗಳನ್ನು ಗೌಪ್ಯವಾಗಿಬೇಕು ತಿಳಿಯೋಣ..
ಮನೆಯವರ ಮಧ್ಯದ ಮತಭೇದ :
ನಿಮ್ಮ ಕುಟುಂಬ (Family) ಮತ್ತು ಕುಟುಂಬದ ವಿಷಯವನ್ನು ನಿಮ್ಮ ಕುಟುಂಬಕಷ್ಟೇ ಸೀಮಿತಗೊಳಿಸಿ. ಸ್ನೇಹಿತರು, ನೆರೆಹೊರೆಯವರು, ಸಂಬಂಧಿಕರು ಅಥವಾ ಇತರರೊಂದಗೆ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ಹೋಗಬಾರದು. ಇದು ನಮ್ಮ ಗೌರವದ ಮೇಲೆಯೇ ಪರಿಣಾಮ ಬೀರಲಿದೆ.
ವಯಸ್ಸು:
ಅಂದ ಹಾಗೆ, ಆ ಸಮಯದಲ್ಲೇ ಶುಕ್ರಾಚಾರ್ಯರು ಅದು ಯಾವ ಕಾರಣಕ್ಕೆ ತಮ್ಮ ವಯಸ್ಸನ್ನು ಗುಪ್ತವಾಗಿಡುವಂತೆ ಸೂಚಿಸಿದ್ದರೋ ಗೊತ್ತಿಲ್ಲ. ಆದರೆ ಇಂದಿನ ಕಾಲಕ್ಕೆ ಅದನ್ನು ಹೋಲಿಸಿ ನೋಡಿದರೆ, ಹೆಚ್ಚುತ್ತಿರುವ ಸೈಬರ್ ಅಪರಾಧ (Cyber crime) ಇತ್ಯಾದಿಗಳಿಂದಾಗಿ, ನಿಮ್ಮ ಜನ್ಮ ದಿನಾಂಕವನ್ನು ಮರೆಮಾಚುವುದೇ ಉತ್ತಮ.
ಹಣ-ಸಂಪತ್ತು:
ಜೀವನವನ್ನು ನಡೆಸಲು ಹಣ (Money) ಮತ್ತು ಆಸ್ತಿ ಬಹಳ ಮುಖ್ಯ. ಆದರೆ ಇದು ಕೆಲವೊಮ್ಮೆ ಇದೇ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಆದ್ದರಿಂದ, ಹಣಕಾಸಿನ ವಿಚಾರಗಳನ್ನು ಗುಪ್ತವಾಗಿಡುವಂತೆ, ಶುಕ್ರ ನೀತಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಬೇಕಾದರೆ ಈ ತಪ್ಪು ಆಗ ಕೂಡದು..
ಔಷಧಿ:
ವೈದ್ಯರ ಬಳಿ ಯಾವ ವಿಷಯವನ್ನೂ ಮುಚ್ಚಿಡಬಾರದು ಎನ್ನುತ್ತಾರೆ. ಯಾಕೆಂದರೆ ವೈದ್ಯರ (Doctor) ಬಳಿ ವಿಷಯಗಳನ್ನು ಮುಚ್ಚಿಟ್ಟರೆ ನಮ್ಮ ಕಾಯಿಲೆಗೆ ಸರಿಯಾಗಿ ಔಷಧೋಪಚಾರ ಸಿಗುವುದಿಲ್ಲ. ಹಾಗಂತೆ ಇದನ್ನು ಎಲ್ಲರೊಂದಿಗೂ ಹೇಳಿಕೊಂಡು ಬರಬಾರದು ಎನ್ನುತ್ತದೆ ಶುಕ್ರಾಚಾರ್ಯ ನೀತಿ. ನಮ್ಮ ವೈಯಕ್ತಿಕ ವಿಚಾರಗಳನ್ನು ಅನ್ಯರಿಂದ ರಹಸ್ಯವಾಗಿಯೇ ಇಡಬೇಕು.
ಮಂತ್ರ:
ಒಬ್ಬನು ತನ್ನ ದಾನ, ಧರ್ಮ ಮತ್ತು ಆರಾಧನೆಯನ್ನು ರಹಸ್ಯವಾಗಿಡಬೇಕು. ದೇವರು ಮತ್ತು ಮನುಷ್ಯನ ನಡುವಿನ ಸಂಬಂಧ ಕೂಡಾ ರಹಸ್ಯವಾಗಿಯೇ ಇರಬೇಕಂತೆ. ಮುಖ್ಯವಾಗಿ ನಿಮಗೆ ಪೂಜೆ ಮಾಡುವ ವೇಳೆ ಹೇಳುವಂತೆ ಗುರುಗಳು ಯಾವುದಾದರೂ ಮಂತ್ರವನ್ನು ಹೇಳಿಕೊಟ್ಟಿದ್ದರೆ ಅದನ್ನು ಇದ್ದ ಬದ್ದವರಿಗೆಲ್ಲಾ ಹೇಳಿಕೊಂಡು ಬರಬಾರದು.
ಇದನ್ನೂ ಓದಿ : Chandra Grahan 2021 : ಬುದ್ದ ಪೂರ್ಣಿಮದ ದಿನವೇ ವರ್ಷದ ಮೊದಲ ಚಂದ್ರಗ್ರಹಣ
ಅವಮಾನ : ಮಾನ, ಅವಮಾನ ಎನ್ನುವುದು ಜೀವನದಲ್ಲಿ ಇದ್ದದ್ದೇ. ಆದರೆ ಅವಮಾನದ ಬಗ್ಗೆ ಯಾರೊಂದಿಗೂ ಚರ್ಚಿಸಲು ಹೋಗಬಾರದಂತೆ. ಯಾಕೆಂದರೆ ತಪ್ಪಾದ ಸ್ಥಳದಲ್ಲಿ ತಪ್ಪಾದ ಸಮಯದಲ್ಲಿ ಈ ವಿಚಾರ ಹೊರ ಬಂದರೆ ಮತ್ತೆ ಅಪಖ್ಯಾತಿಗೆ ಒಳಗಾಗುವ ಸಾಧ್ಯತೆಯಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.