ನವದೆಹಲಿ: ದೇಶದಲ್ಲಿ ಕರೋನವೈರಸ್ (Coronavirus) ಸೋಂಕು ಹೆಚ್ಚುತ್ತಿದೆ. ಪ್ರಸ್ತುತ ಪ್ರತಿದಿನ ಸುಮಾರು ಆರು ಸಾವಿರ ಹೊಸ ಪ್ರಕರಣಗಳು ಹೊರಬರುತ್ತಿವೆ. ಈ ಸಮಯದಲ್ಲಿ ಸಾಮಾನ್ಯ ಶೀತ, ಜ್ವರ ಬಂದರೂ ಜನರು ಗಾಬರಿಗೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕರೋನಾ ಭೀತಿ ಹೆಚ್ಚಾಗಿದೆ. ಅದಾಗ್ಯೂ ಜ್ವರ ಬಂದರೂ ಕೆಲವರು ಇದನ್ನು ಸಾಮಾನ್ಯ ಸೋಂಕು ಎಂದು ಆಸ್ಪತ್ರೆಗೆ ಹೋಗುವುದಿಲ್ಲ. ಇನ್ನೂ ಕೆಲವರು ಆಸ್ಪತ್ರೆಗೆ ಹೋದರೆ ಎಲ್ಲಿ ಕರೋನಾವೈರಸ್ ಕೋವಿಡ್ -19 (Covid-19) ಸೋಂಕು ತಾಗುವುದೋ ಎಂಬ ಭಯಕ್ಕೆ ವೈದ್ಯರನ್ನು ಸಂಪರ್ಕಿಸಲು ಹೋಗುವುದಿಲ್ಲ. ಜನರ ಈ ಸಮಸ್ಯೆಯನ್ನು ಹೋಗಲಾಡಿಸಲು, ನೋಯ್ಡಾ ಪ್ರಾಧಿಕಾರವು ಒಂದೇ ಒಂದು ಕರೆಯಲ್ಲಿ ವೈದ್ಯರು ಲಭ್ಯವಾಗುವಂತೆ ಕ್ರಮ ಕೈಗೊಂಡಿದೆ.
ನೋಯ್ಡಾ ಪ್ರಾಧಿಕಾರವು ಟ್ವೀಟ್ ಮಾಡುವ ಮೂಲಕ ಇದರ ಬಗ್ಗೆ ಮಾಹಿತಿ ನೀಡಿದೆ. ನೋಯ್ಡಾ ಪ್ರಾಧಿಕಾರವು ಲಾಕ್ಡೌನ್ (Lockdown) ಸಮಯದಲ್ಲಿ ಪ್ರಾಧಿಕಾರವು ನೋಯ್ಡಾ ನಿವಾಸಿಗಳಿಗೆ ಡಾಕ್ಟರ್-ಆನ್-ಕಾಲ್ ಸೇವೆಯನ್ನು ಪ್ರಾರಂಭಿಸಿದೆ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ 0120-2422317 ಗೆ ಕರೆ ಮಾಡಿ ನಿಮ್ಮ ರೋಗದ ಪ್ರಕಾರ ಕೌನ್ಸೆಲಿಂಗ್ ಪಡೆಯಬಹುದು. ಭಾರತೀಯ ವೈದ್ಯ ಸಂಘದ ಸಹಯೋಗದೊಂದಿಗೆ ಈ ವೈದ್ಯರ ಸಮಾಲೋಚನೆ ಸೇವೆಯನ್ನು ಪ್ರಾರಂಭಿಸಲಾಗಿದೆ.
प्राधिकरण ने #लॉकडाउन के समय नौएडा वासियों के लिए “डॉक्टर-ऑन-कॉल” सेवा आरम्भ की है। आप सुबह 10 बजे से शाम के 6 बजे के बीच 0120-2422317 पर कॉल कर अपनी रोग के अनुसार परामर्श ले सकते हैं। #StayHomeStaySafe#IndiaFightsCorona@CMOfficeUP @PMOIndia @MoHFW_INDIA @mygovindia pic.twitter.com/VTCaeUzBTQ
— NOIDA Authority #StayHomeStaySafe (@noida_authority) May 26, 2020
ಲಾಕ್ ಡೌನ್ ಸಮಯದಲ್ಲಿ ನೋಯ್ಡಾ ಜನರಿಗೆ ಅನುಕೂಲಕ್ಕಾಗಿ ಪ್ರಾಧಿಕಾರವು ಈ ಸೇವೆಯನ್ನು ಪ್ರಾರಂಭಿಸಿದೆ. ನೋಯ್ಡಾ ಜನರು ನೋಯ್ಡಾ ಪ್ರಾಧಿಕಾರವು ಒದಗಿಸಿದ ಸಂಖ್ಯೆ 0120-2422317 ಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಸಂಪರ್ಕಿಸಬಹುದು.