People Born In This Nakshatra Are Lucky: 27 ನಕ್ಷತ್ರಗಳ ಪೈಕಿ ಎಂಟನೆ ನಕ್ಷತ್ರ ಅಂದರೆ ಪುಷ್ಯ ನಕ್ಷತ್ರವನ್ನು ಶುಭಾವೆಂದು ಹೇಳಲಾಗುತ್ತದೆ. ಇದನ್ನು ನಕ್ಷತ್ರಗಳ ರಾಜ ಎಂದು ಹೇಳಲಾಗುತ್ತದೆ. ಶನಿ (Shani Dev) ಹಾಗೂ ದೇವಗುರು ಬೃಹಸ್ಪತಿ ಈ ನಕ್ಷತ್ರದ ಅಧಿಪತಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಕ್ಷತ್ರದಲ್ಲಿ ಜನಿಸಿದವರ ಜಾತಕರು ಸಂಪನ್ನ ಹಾಗೂ ಭಾಗ್ಯಶಾಲಿಗಳಗಿರುತ್ತಾರೆ (Luckiest Nakshatra). ಇವರು ನಿಯಮಗಳ ಪಾಲಕರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದ ಜಾತಕದವರು ಸುಖ-ಸೌಕರ್ಯಗಳ ಲಾಭ ಪಡೆಯುತ್ತಾರೆ. ಬೇರೆಯವರ ಸೇವೆ ಸಲ್ಲಿಸುವುದು ಇವರಿಗೆ ಇಷ್ಟ.
ಪುಷ್ಯ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವ ಹಾಗೂ ವ್ಯಕ್ತಿತ್ವ
ಪುಷ್ಯ ನಕ್ಷತ್ರ (Pushya Nakshtra) ಜಾತಕದ ವ್ಯಕ್ತಿಗಳು ಪರಿಶ್ರಮಜೀವಿಗಳು. ಇವರು ತಮ್ಮ ಕಠಿಣ ಪರಿಶ್ರಮದ ಮೂಲಕ ಯಶಸ್ಸಿನ ಶಿಖರವನ್ನು ತಲುಪುವಲ್ಲಿ ವಿಶ್ವಾಸವಿಡುತ್ತಾರೆ. ಆಧ್ಯಾತ್ಮದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ತುಂಬಾ ಯೋಚಿಸಿ ಇವರು ಹಣ ವೆಚ್ಚ ಮಾಡುತ್ತಾರೆ. ಇತರರೊಂದಿಗೆ ಬೇಗನೆ ಬೆರೆಯುವುದು ಇವರ ಸ್ವಭಾವದಲ್ಲಿದೆ. ವಿವಿಧ ಕಲೆಗಳಲ್ಲಿ ನಿಪುಣರಾಗಿರುವ ಇವರು ತುಂಬಾ ದಯಾಳು ಹಾಗೂ ಶಕ್ತಿಶಾಲಿಗಳಾಗಿರುತ್ತಾರೆ.
ನಕ್ಷತ್ರದಲ್ಲಿ ಜನಿಸಿದವರು ತುಂಬಾ ಪ್ರಾಕ್ಟಿಕಲ್ ಹಾಗೂ ಸ್ಪಷ್ಟವಾದಿಗಳಾಗಿರುತ್ತಾರೆ. ಇವರು ತುಂಬಾ ಬುದ್ಧಿಶಾಲಿಗಳಾಗಿದ್ದು, ಮಾತೃ-ಪಿತೃ ಭಕ್ತಿಯುಳ್ಳವರಾಗಿರುತ್ತಾರೆ. ಈ ನಕ್ಷತ್ರದ ಅಧಿಪತಿಯಾಗಿರುವ ದೇವಗುರು ಬೃಹಸ್ಪತಿಯ (Guru Brihaspati) ವಿಶೇಷ ಅನುಗ್ರಹ ಇವರ ಮೇಲಿರುತ್ತದೆ. ಈ ಕಾರಣದಿಂದ ಇವರಿಗೆ ಜೀವನದಲ್ಲಿ ಮಾನ ಸನ್ಮಾನದ ಜೊತೆಗೆ ಪ್ರಶಂಸೆ ಕೂಡ ಲಭಿಸುತ್ತಾದೆ. ಇವರು ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ.
ಇದನ್ನೂ ಓದಿ- ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಬೇಕಾದರೆ ಈ ತಪ್ಪು ಆಗ ಕೂಡದು..
ಇವರು ಸ್ವಭಾವತಃ ಗಂಭೀರ ಹಾಗೂ ಸೂಕ್ಷ್ಮ ಜೀವಿಗಳಾಗಿರುತ್ತಾರೆ. ಯಾವುದೇ ಒಂದು ಕೆಲಸ ಅರ್ಧಕ್ಕೆ ನಿಲ್ಲಿಸುವುದು ಇವರಿಗೆ ಇಷ್ಟವಿಲ್ಲದ ಕೆಲಸ. ಇವರು ಓರ್ವ ಉತ್ತಮ ಬಿಸಿನೆಸ್ ಮನ್ ಎಂದೂ ಕೂಡ ಸಾಬೀತಾಗಬಹುದು. ಕೇವಲ ತಮ್ಮ ಮಾತುಗಳ ಮೂಲಕ ಇವರು ಎಲ್ಲರ ಹೃದಯದಲ್ಲಿ ಬಹುಬೇಗನೆ ಜಾಗ ಸಂಪಾದಿಸುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದ ಜನರು ಲೇಖಕರು, ಕವಿಗಳು, ಸಾಹಿತ್ಯಕಾರರು ಅಥವಾ ಭವಿಷ್ಯದ ವಕ್ತಾರರಾಗಿರುತ್ತಾರೆ.
ಇದನ್ನೂ ಓದಿ-Astrology Prediction: ನಿಜ ಸಾಬೀತಾದ ಜೋತಿಷಿಗಳ ಭವಿಷ್ಯವಾಣಿ
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)
ಇದನ್ನೂ ಓದಿ-Palmistry: ನಿಮ್ಮ ಕೈಯಲ್ಲಿಯೂ ಕೂಡ ಈ ರೇಖೆ ಇದೆಯಾ? ಹಾಗಾದರೆ ನಿಮಗಿದೆ ಸರ್ಕಾರಿ ನೌಕರಿಯ ಯೋಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.