Naraka Chaturdashi 2022 : ನರಕ ಚತುರ್ದಶಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ.  ಧನ ತ್ರಯೋದಶಿಯ ಮಾರನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.  ನರಕ ಚತುರ್ದಶಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಚೋಟಿ ದೀಪಾವಳಿ, ರೂಪ್ ಚೌದಾಸ್,  ನರಕ್ ಚೌದಾಸ್, ಹೀಗೆ ನಾನ ಹೆಸರುಗಳಲ್ಲಿ ಕರೆಯಲಾಗುತ್ತದೆ. ಈ ದಿನ ಯಮರಾಜನನ್ನು ಪೂಜಿಸುವ ಪದ್ದತಿಯೂ ಇದೆ.  


COMMERCIAL BREAK
SCROLL TO CONTINUE READING

ಶ್ರೀಕೃಷ್ಣನು ಈ ದಿನ ನರಕಾಸುರನನ್ನು ವಧಿಸಿದ್ದ ಎಂದು ಹೇಳಲಾಗುತ್ತದೆ.  ಆ ಕಾರಣದಿಂದಲೇ ಈ ದಿನವನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ಶ್ರೀಕೃಷ್ಣನನ್ನೂ ಪೂಜಿಸಲಾಗುತ್ತದೆ. ನರಕ ಚತುರ್ದಶಿಯ ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ತಪ್ಪಿಯೂ ಕೂಡಾ ಈ ದಿನದಂದು ಕೆಲವು ಕೆಲಸಗಳನ್ನು ಮಾಡಬಾರದು.  


ಇದನ್ನೂ ಓದಿ : ದೀಪಾವಳಿ ದಿನ ಲಕ್ಷ್ಮೀ ಯಂತ್ರವನ್ನು ಈ ರೀತಿ ಪೂಜಿಸಿದರೆ ಮನೆಯಲ್ಲಿ ತುಂಬಿ ತುಳುಕುವುದು ಅಷ್ಟೈಶ್ವರ್ಯ


ನರಕ ಚತುರ್ದಶಿ 2022 ತಿಥಿ ಮತ್ತು ಶುಭ ಮುಹೂರ್ತ : 
ಪಂಚಾಂಗದ ಪ್ರಕಾರ, ಕಾರ್ತಿಕ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಅಕ್ಟೋಬರ್ 23 ರಂದು ಸಂಜೆ 06.03 ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 24 ರಂದು ಸಂಜೆ 5:27 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ನರಕ ಚತುರ್ದಶಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. 


 ಇಂದಿನ ದಿನ ಈ ಕೆಲಸಗಳು ನಿಷಿದ್ದ :  
1. ನರಕ ಚತುರ್ದಶಿಯ ದಿನದಂದು  ತಪ್ಪಿಯೂ ಮನೆಯನ್ನು ಖಾಲಿ ಬಿಡಬಾರದು. ಯಾವುದೋ ಮುಖ್ಯ ಕೆಲಸಕ್ಕೆ ಹೊರ ಹೋಗಬೇಕಾಗಿ ಬಂದರೂ, ಮನೆಯಲ್ಲಿ ಒಬ್ಬ ಸದಸ್ಯನನ್ನಾದರೂ ಇರಿಸಬೇಕು. 
2. ಮನೆಯಲ್ಲಿ ಸಮೃದ್ಧಿಯ ನೆಲೆಯನ್ನು ಕಾಪಾಡಿಕೊಳ್ಳಲು ಮತ್ತು ಅಕಾಲಿಕ ಮೃತ್ಯುವನ್ನು ತಪ್ಪಿಸಲು ನರಕ ಚತುರ್ದಶಿಯಂದು, ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸುವ ದೀಪದಲ್ಲಿ ಕವಡೆ ಮತ್ತು 1 ರೂಪಾಯಿಯ ನಾಣ್ಯವನ್ನು ಇಟ್ಟು  ದೀಪ ಬೆಳಗಬೇಕು. ಈ ಸಮಯದಲ್ಲಿ ಅಕಾಲಿಕ ಮೃತ್ಯು ಬಾರದೇ ಇರಲಿ ಎಂದು ಯಮರಾಜನನ್ನು ಪ್ರಾರ್ಥಿಸಬೇಕು. 


ಇದನ್ನೂ ಓದಿ : 2000 ವರ್ಷಗಳ ಬಳಿಕ ದೀಪಾವಳಿ ದಿನವೇ ರೂಪುಗೊಳ್ಳುತ್ತಿದೆ ಈ ಐದು ಯೋಗ, ಬೆಳಕಿನ ಹಬ್ಬ ಬೆಳಗಲಿದೆ ಈ ರಾಶಿಯವರ ಜೀವನ


3. ನರಕ ಚತುರ್ದಶಿಯಂದು ಮಾಂಸಾಹಾರ ಸೇವಿಸಬೇಡಿ. ಈ ದಿನ  ಮಾಂಸಾಹಾರ ಮಾಡಿದರೆ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.   
4. ನರಕ ಚತುರ್ದಶಿಯ ದಿನದಂದು ಪೊರಕೆಯ ಮೇಲೆ ಕಾಲಿಡಬಾರದು. 
5. ಈ ದಿನ ಜಗಳ ಮಾಡಬೇಡಿ. 
6. ಈ ದಿನ ಮನೆಯ ದಕ್ಷಿಣ ದಿಕ್ಕಿನಲ್ಲಿ ಕಸ ಹಾಕಬೇಡಿ. ಇದನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಶುಚಿತ್ವ ಕಾಪಾಡದಿದ್ದರೆ ಯಮರಾಜ  ಕೋಪಗೊಳ್ಳುತ್ತಾನೆ.
7. ನರಕ ಚತುರ್ದಶಿಯಂದು ಎಣ್ಣೆಯನ್ನು ದಾನ ಮಾಡಬೇಡಿ. ಇದರಿಂದ ಲಕ್ಷ್ಮೀ  ಕೋಪಗೊಳ್ಳುತ್ತಾಳೆ.  



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.