Diwali Lakshmi Yantra Pooja : ದೀಪಾವಳಿ ಪೂಜೆಯಲ್ಲಿ ಲಕ್ಷ್ಮೀಗೆ ವಿಶೇ ಷ ಸ್ಥಾನವನ್ನು ನೀಡಲಾಗಿದೆ. ಈ ದಿನವನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವ ಸಲುವಾಗಿ, ಈ ದಿನ ಲಕ್ಷ್ಮೀ ಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುಗಳನ್ನು ಪೂಜೆಯಲ್ಲಿ ಸೇರಿಸಲಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ದಿನ, ಲಕ್ಷ್ಮೀ -ಗಣೇಶನ ಪೂಜೆಯ ಸಮಯದಲ್ಲಿ ಧನ ಲಕ್ಷ್ಮೀಯ ಯಂತ್ರವನ್ನು ಸ್ಥಾಪಿಸಲಾಗುತ್ತದೆ. ದೀಪಾವಳಿಯ ಪೂಜೆಯಲ್ಲಿ ಧನ ಲಕ್ಷ್ಮೀಯ ಯಂತ್ರವನ್ನು ಸ್ಥಾಪಿಸಿದರೆ ಸಂಪತ್ತಿನ ದೇವತೆ ಸಂತೋಷದಿಂದ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿ ಹರಿಸುತ್ತಾಳೆ ಎಂದು ಹೇಳಲಾಗುತ್ತದೆ.
ಧನಲಕ್ಷ್ಮೀ ಯಂತ್ರದ ಪ್ರಯೋಜನಗಳು :
- ಈ ಯಂತ್ರವನ್ನು ಪೂಜೆಯಲ್ಲಿ ಸ್ಥಾಪಿಸುವುದರಿಂದ ಲಕ್ಷ್ಮೀ ಕೃಪೆ ಮನೆಯಲ್ಲಿ ನೆಲೆಯಾಗುತ್ತದೆ.
-ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. ಸದಾ ಸಂತೋಷ ಮತ್ತು ಶಾಂತಿ ಇರುತ್ತದೆ.
ಎಲ್ಲಾ ರೀತಿಯ ಆರ್ಥಿಕ ತೊಂದರೆಗಳನ್ನು ತಪ್ಪಿಸಲು ಈ ಯಂತ್ರವು ಅದ್ಭುತವಾಗಿದೆ ಎಂದು ನಂಬಲಾಗಿದೆ.
- ಕುಟುಂಬದ ಸದಸ್ಯರು ದೀರ್ಘಕಾಲದದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ವಿಧಿವತ್ತಾಗಿ ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ.
- ಈ ಯಂತ್ರವನ್ನು ಪೂಜಿಸುವುದರಿಂದ ಬಾಕಿ ಉಳಿದಿರುವ ಹಣ ಕೂಡಾ ಕೈ ಸೇರುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಸಾಲದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ.
-ಈ ಯಂತ್ರವನ್ನು ನಿಯಮಿತವಾಗಿ ಪೂಜಿಸಿದರೆ, ಹಣ ಸಂಪಾದಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.
ಇದನ್ನೂ ಓದಿ : 2000 ವರ್ಷಗಳ ಬಳಿಕ ದೀಪಾವಳಿ ದಿನವೇ ರೂಪುಗೊಳ್ಳುತ್ತಿದೆ ಈ ಐದು ಯೋಗ, ಬೆಳಕಿನ ಹಬ್ಬ ಬೆಳಗಲಿದೆ ಈ ರಾಶಿಯವರ ಜೀವನ
ಧನಲಕ್ಷ್ಮೀ ಯಂತ್ರವನ್ನು ಈ ರೀತಿ ಸ್ಥಾಪಿಸಿ :
ಸಂತೋಷ, ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯಲು ವಿಧಿವತ್ತಾಗಿ ಧನ ಲಕ್ಷ್ಮೀ ಯಂತ್ರವನ್ನು ಸ್ಥಾಪಿಸಬೇಕು. ಸ್ನಾನ ಮಾಡಿ ಮಡಿಯುಟ್ಟು ಯಂತ್ರವನ್ನು ಪಂಚಾಮೃತ ಮತ್ತು ಗಂಗಾಜಲದಿಂದ ಸ್ವಚ್ಛಗೊಳಿಸಬೇಕು. ನಂತರ ಈಶಾನ್ಯ ಮೂಲೆಯಲ್ಲಿ ಕೆಂಪು ಬಣ್ಣದ ಬಟ್ಟೆಯ ಮೇಲೆ ಈ ಯಂತ್ರವನ್ನು ಸ್ಥಾಪಿಸಬೇಕು. ಪೂಜೆಯ ವೇಳೆ ಓಂ ಶ್ರೀ ಹ್ರೀಂ ಶ್ರೀ ನಮಃ ಅಥವಾ ಓಂ ಶ್ರೀ ಹ್ರೀಂ ಶ್ರೀ ಮಂತ್ರವನ್ನು ಪಠಿಸಬೇಕು.
ಧನ ಲಕ್ಷ್ಮೀ ಯಂತ್ರದ ಪೂಜಾ ವಿಧಾನ :
- ಲಕ್ಷ್ಮೀ ಯಂತ್ರದ ಪೂಜಾ ವಿಧಾನವು ಬೆಳಿಗ್ಗೆಯಿಂದಲೇ ಪ್ರಾರಂಭವಾಗುತ್ತದೆ. ಇದಕ್ಕಾಗಿ ಮುಂಜಾನೆ ಸ್ನಾನ ಮಾಡಿ ಹಳದಿ ಬಟ್ಟೆಯನ್ನು ಧರಿಸಿ.
-ಪೂಜೆಗೂ ಮುನ್ನ ಶ್ರೀ ಯಂತ್ರವನ್ನು ಪಂಚಾಮೃತದಲ್ಲಿ ಇರಿಸಲಾಗುತ್ತದೆ.
-ನಂತರ ಅದರ ಮೇಲೆ ಕೆಂಪು ಚಂದನವನ್ನು ಸಿಂಪಡಿಸಿ.
-ಈಗ ಕೆಂಪು ಗುಲಾಬಿ ಹೂವುಗಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ಯಂತ್ರದ ಮೇಲೆ ಹಾಕಿ
-ತುಪ್ಪದ ದೀಪವನ್ನು ಹಚ್ಚಿ ಯಂತ್ರದ ಆರತಿ ಮಾಡಿ. ಈ ದಿನ ದುರ್ಗಾ ಸಪ್ತಮಿಯನ್ನು ಕೂಡಾ ಪಠಿಸಬಹುದು.
- ಓಂ ಶ್ರೀ ಹ್ರೀಂ ಶ್ರೀ ಕಮಲೇ ಕಮಲಯೇ ಪ್ರಸೀದ್ ಪ್ರಸೀದ್, ಓಂ ಶ್ರೀ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ನಮಃ. ಈ ಯಂತ್ರವನ್ನು ಪಠಿಸಿ.
ಶಾಸ್ತ್ರ ಬದ್ದವಾಗಿ ಈ ಯಂತ್ರವನ್ನು ಪೂಜಿಸುವುದರಿಂದ ಶೀಘ್ರವೇ ಪೂಜಾ ಫಲ ಕೂಡಾ ಲಭಿಸುವುದು.
ಇದನ್ನೂ ಓದಿ : Diwali 2022: ತಾಯಿ ಲಕ್ಷ್ಮಿಯ ವಿಶೇಷ ದೇವಾಲಯ, ದೀಪಾವಳಿಯಂದು ಭಕ್ತರಿಗೆ ಹಣ, ಚಿನ್ನ, ಬೆಳ್ಳಿಯೇ ಪ್ರಸಾದ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.