Drying Plants Indication: ಹಿಂದೂ ಧರ್ಮದಲ್ಲಿ ಅನೇಕ ಸಸ್ಯಗಳ ಉಲ್ಲೇಖವಿದ್ದು, ಅವುಗಳಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ಹಲವು ಬಾರಿ ಈ ಗಿಗಗಳ ಬಗ್ಗೆ ಕಾಳಜಿ ವಹಿಸದೆ ಹೋದರೆ ಅಥವಾ ನೀರುಣಿಸದೇ ಇರುವ ಕಾರಣ ಗಿಡಗಳು ಒಣಗುತ್ತವೆ. ಈ ಈ ಸಷ್ಯಗಳ ಒಣಗುವಿಕೆ ಕೆಲವು ಅಹಿತಕರ ಸಂಕೇತಗಳನ್ನು ನೀಡುತ್ತವೆ. ಭವಿಷ್ಯದಲ್ಲಿ ಎದುರಾಗಲಿರುವ ಘಟನೆಗಳ ಬಗ್ಗೆ ಅವು ಸೂಚನೆಯನ್ನು ನೀಡುತ್ತವೆ. ಅಂತಹ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ತುಳಸಿ ಒಣಗುವಿಕೆ- ಮನೆಯಲ್ಲಿ ಸ್ವಲ್ಪ ಮೈಮರೆಗರೂ ಕೂಡ ಮನೆಯಲ್ಲಿನ ಗಿಡಗಳು ಒಣಗುತ್ತವೆ. ಆದರೆ ಕೆಲವೊಮ್ಮೆ ಸಸ್ಯಗಳ ಸಂಪೂರ್ಣ ಆರೈಕೆ ಮಾಡಿದ ನಂತರವೂ ಅವು ಒಣಗುತ್ತವೆ. ತುಳಸಿ ಗಿಡದ ವಿಷಯದಲ್ಲಿ ಹೀಗಾದರೆ, ತಾಯಿ ಲಕ್ಷ್ಮಿ ನಿಮ್ಮ ಮೇಲೆ ಮುನಿಸಿಕೊಳ್ಳಬಹುದು. ಇದು ಹಣದ ನಷ್ಟದ ಸಂಕೇತವಾಗಿದೆ. ತುಳಸಿ ಗಿಡವನ್ನು ತಾಯಿ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ವಿಷ್ಣುವಿಗೆ ತುಂಬಾ ಪ್ರೀಯವಾದ ಸಸ್ಯ. ಹೀಗಾಗಿ ತುಳಸಿ ಗಿಡದ ಬಗ್ಗೆ ವಿಶೇಷ ಕಾಳಜಿ ವಹಿಸಿ.


ಮನಿ ಪ್ಲಾಂಟ್ ಒಣಗುವಿಕೆ- ವಾಸ್ತು ಪ್ರಕಾರ ಮನಿ ಪ್ಲಾಂಟ್‌ನ ಸಸ್ಯವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಶುಭ. ಗಣೇಶ್ ಈ ದಿಕ್ಕಿನಲ್ಲಿ ನೆಲೆಸಿದ್ದಾನೆ ಮತ್ತು ಇದರಿಂದ ಮನೆಯಲ್ಲಿ ಹಣದ ಮುಗ್ಗಟ್ಟು ಎದುರಾಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಆದರೆ ನೀವು ನೆಟ್ಟ ಮನಿ ಪ್ಲಾಂಟ್ ಒಣಗಿ ಹೋದರೆ, ಅದು ಹಣಕಾಸಿನ ವಿಷಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅದು ಮನೆಯಲ್ಲಿ ಹಣದ ಕೊರತೆಯನ್ನು ಸೂಚಿಸುತ್ತದೆ.


ಶಮಿ ಗಿಡದ ಒಣಗುವಿಕೆ- ಶಮಿ ವೃಕ್ಷದ ಒಣಗುವಿಕೆ ಒಂದು ಅಶುಭ ಸಂಕೇತವಾಗಿದೆ. ಶನಿ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಶಮಿ ವೃಕ್ಷವನ್ನು ಪೂಜಿಸಲಾಗುತ್ತದೆ. ಆದರೆ ನಿಮ್ಮ ಹಸಿರು ಶಮಿ ವೃಕ್ಷವು ಹಠಾತ್ತನೆ ಒಣಗಿದರೆ, ಅದು ಶನಿಯ ಕೆಟ್ಟ ಸ್ಥಿತಿ ಮತ್ತು ಶಿವನ ಕೋಪದ ಸಂಕೇತವಾಗಿದೆ. ಹೀಗಾದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗುತ್ತವೆ.


ಅಶೋಕ ವೃಕ್ಷ ಒಣಗುವಿಕೆ- ಸಕಾರಾತ್ಮಕತೆಗಾಗಿ ಮನೆಯ ಅಂಗಳದಲ್ಲಿ ಅಶೋಕ ವೃಕ್ಷವನ್ನು ನೆಡಲಾಗುತ್ತದೆ. ಈ ಮರ ಒಣಗಿ ಹೋದರೆ ಮನೆಯ ನೆಮ್ಮದಿ ಹಾಳಾಗುವ ಲಕ್ಷಣ. ಇಂತಹ ಪರಿಸ್ಥಿತಿಯಲ್ಲಿ, ಅಶೋಕ ವೃಕ್ಷವನ್ನು ಚೆನ್ನಾಗಿ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಅದನ್ನು ಒಣಗಲು ಬಿಡಬೇಡಿ. ಒಂದು ವೇಳೆ ಒಣಗಿದ್ದರೆ, ತಕ್ಷಣ ಅದನ್ನು ಬದಲಾಯಿಸಿ.


ಇದನ್ನೂ ಓದಿ-Neem Remedies: ಬೇವಿನ ಮರದ ಈ ಉಪಾಯಗಳು ನಿಮಗೆ ಕೇತು, ಶನಿ ಹಾಗೂ ಪಿತೃದೋಷದಿಂದ ಮುಕ್ತಿ ನೀಡುತ್ತವೆ


ಮಾವಿನ ಮರ ಒಣಗುವಿಕೆ- ಮಾವಿನ ಮರವನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮಾವಿನ ಎಲೆಗಳನ್ನು ಪೂಜಾ ವಿಧಿಗಳಲ್ಲಿಯೂ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಾವಿನ ಮರ ಒಣಗುವುದು ಭವಿಷ್ಯದಲ್ಲಿ ಬರಲಿರುವ ತೊಂದರೆಗಳ ಮುನ್ಸೂಚನೆಯಾಗಿದೆ. ನಿಮ್ಮ ವಿಷಯದಲ್ಲಿಯೂ ಈ ರೀತಿ ಸಂಭವಿಸಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. 


ಇದನ್ನೂ ಓದಿ-Planet Transit 2022: ಶನಿ-ಬುಧರ ಈ ನಡೆಯಿಂದ 4 ರಾಶಿಗಳ ಜನರಿಗೆ ಜುಲೈ 2ರ ಒಳಗೆ ಹೊಸ ನೌಕರಿ ಹಾಗೂ ಬಡ್ತಿ ಯೋಗ

(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.