Neem Remedies: ಬೇವಿನ ಮರದ ಈ ಉಪಾಯಗಳು ನಿಮಗೆ ಕೇತು, ಶನಿ ಹಾಗೂ ಪಿತೃದೋಷದಿಂದ ಮುಕ್ತಿ ನೀಡುತ್ತವೆ

Neem Upay - ವ್ಯಕ್ತಿಗಳ ಜಾತಕದಲ್ಲಿರುವ ಶನಿ, ಕೇತು ಹಾಗೂ ಪಿತೃದೋಷದಿಂದ ಮುಕ್ತಿ ಪಡೆಯಲು ಜೋತಿಷ್ಯ ಶಾಸ್ತ್ರದಲ್ಲಿ ಬೇವಿನ ಹಲವು ಉಪಾಯಗಳನ್ನು ಹೇಳಲಾಗಿದೆ. ಬೇವಿನ ಈ ಉಪಾಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jun 10, 2022, 09:21 PM IST
  • ಈ ಉಪಾಯಗಳನ್ನು ಅನುಸರಿಸುವುದರಿಂದ, ವ್ಯಕ್ತಿಯು ದೋಷದಿಂದ ಮುಕ್ತನಾಗುತ್ತಾನೆ.
  • ಇವುಗಳಲ್ಲಿ ಮರಗಳಿಗೆ ಸಂಬಂಧಿಸಿದ ಕೆಲ ಉಪಾಯಗಳನ್ನು ಕೂಡ ಸೂಚಿಸಲಾಗಿದೆ.
  • ಇಂದು ನಾವು ನಿಮಗೆ ಬೇವಿನ ಮರದ ಕೆಲವು ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
Neem Remedies: ಬೇವಿನ ಮರದ ಈ ಉಪಾಯಗಳು ನಿಮಗೆ ಕೇತು, ಶನಿ ಹಾಗೂ ಪಿತೃದೋಷದಿಂದ ಮುಕ್ತಿ ನೀಡುತ್ತವೆ title=
Neem Tree Remedies

Neem Remedies For Shani Dosh: ತಿಳಿದು ಅಥವಾ ತಿಳಿಯದೆ ತಗಲುವ ಕೆಲ ದೋಷಗಳನ್ನು ತೊಡೆದುಹಾಕಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಈ ಉಪಾಯಗಳನ್ನು ಅನುಸರಿಸುವುದರಿಂದ, ವ್ಯಕ್ತಿಯು ದೋಷದಿಂದ ಮುಕ್ತನಾಗುತ್ತಾನೆ. ಇವುಗಳಲ್ಲಿ ಮರಗಳಿಗೆ ಸಂಬಂಧಿಸಿದ ಕೆಲ ಉಪಾಯಗಳನ್ನು ಕೂಡ ಸೂಚಿಸಲಾಗಿದೆ. ಇಂದು ನಾವು ನಿಮಗೆ ಬೇವಿನ ಮರದ ಕೆಲವು ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಸಾಮಾನ್ಯವಾಗಿ ಬೇವಿನ ಮರಕ್ಕೆ ಧಾರ್ಮಿಕ ಮಹತ್ವವೂ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬೇವು ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಇದಲ್ಲದೆ, ಕೇತು ಮತ್ತು ಶನಿಯೊಂದಿಗೂ ಕೂಡ ಅದು ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ನೀವು ಬೇವಿನ ಮರವನ್ನು ನೆಡಲು ಬಯಸಿದರೆ, ಅದನ್ನು ಮನೆಯ ಹೊರಗೆ ದಕ್ಷಿಣ ದಿಕ್ಕಿನಲ್ಲಿ ನೆಡಬೇಕು.

ಇದೇ ವೇಳೆ ಬೇವಿನ ಮರವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಬೇವಿನ ಮರವನ್ನು ನೆಡುವುದರಿಂದ ಅನೇಕ ರೀತಿಯ ದೋಷಗಳು ನಿವಾರಣೆಯಾಗುತ್ತವೆ. ಬೇವಿನ ಮರದ ಉಪಾಯಗಳಿಂದ ಯಾವ ಯಾವ ದೋಷಗಳನ್ನು ಹೋಗಲಾಡಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕೇತು, ಶನಿ ಮತ್ತು ಪಿತ್ರ ದೋಷವನ್ನು ಪರಿಹಾರಕ್ಕೆ ಉಪಾಯಗಳು
ಶನಿ ಮತ್ತು ಕೇತು ಗ್ರಹಗಳ ಶಾಂತಿಗಾಗಿ ಪರಿಹಾರಗಳು

>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇವು ಶನಿ ಮತ್ತು ಕೇತು ಗ್ರಹಗಳಿಗೆ ಸಂಬಂಧಿಸಿದೆ. ಆದ್ದರಿಂದ, ವ್ಯಕ್ತಿಯ ಜಾತಕದಲ್ಲಿ ಶನಿದೋಷ ಅಥವಾ ಕೇತುದೋಷವಿದ್ದರೆ, ಈ ದೋಷಗಳನ್ನು ಶಮನಗೊಳಿಸಲು ಬೇವನ್ನು ಬಳಸಬಹುದು.

>> ಇದಕ್ಕಾಗಿ ಶನಿ ಪೀಡಿತ ಜಾತಕದವರು ಬೇವಿನ ಮರದಿಂದ ಹವನ ಮಾಡಬೇಕು. ಹೀಗೆ ಮಾಡುವುದರಿಂದ ಶನಿ ಗ್ರಹ ಶಾಂತವಾಗುತ್ತದೆ. ವಾರಕ್ಕೊಮ್ಮೆ ಬೇವಿನ ಮರದಿಂದ ಹವನ ಮಾಡಲು ಮರೆಯದಿರಿ.

>> ಇದೇ ವೇಳೆ ಕೇತು ಗ್ರಹದ ಶಾಂತಿಗಾಗಿ ಬೇವಿನ ಸೊಪ್ಪಿನ ರಸವನ್ನು ತೆಗೆದು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ವ್ಯಕ್ತಿಯು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾನೆ.

ಆಂಜನೇಯನನ್ನು ಪ್ರಸನ್ನಗೊಳಿಸಲು ಈ ಕೆಲಸ ಮಾಡಿ
ಆಂಜನೇಯ ಸ್ವಾಮ್ ಬೇವಿನ ಪೂಜೆಯಿಂದ ಸಂತುಷ್ಟನಾಗುತ್ತಾನೆ ಮತ್ತು ತನ್ನ ಭಕ್ತಾದಿಗಳಿಗೆ ಕೃಪಾಶೀರ್ವಾದವನ್ನು ನೀಡುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದ ಬೇವಿಗೆ ನಿಯಮಿತವಾಗಿ ನೀರು ಕೊಡಬೇಕು.

ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಲು ಈ ಉಪಾಯ ಅನುಸರಿಸಿ
ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನಕ್ಕಾಗಿ, ಮನೆಯಲ್ಲಿ ಬೇವಿನ ಮರವನ್ನು ಖಂಡಿತವಾಗಿ ನೆಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಸುತ್ತ ಧನಾತ್ಮಕ ಶಕ್ತಿಯ ಸಂಚಾರವಾಗುತ್ತದೆ. ಬೇವಿನ ಮರವನ್ನು ತಾಯಿ ದುರ್ಗೆಯ ಸಂಕೇತವೆಂದು ಪರಿಗಣಿಸಲಾಗಿದೆ. ಇದೆ ಕಾರಣಕ್ಕೆ ಅದನ್ನು 'ನೀಮರಿ ದೇವಿ' ಎಂದೂ ಕೂಡ ಕರೆಯುತ್ತಾರೆ.
 
ಪಿತೃದೋಷ ಪರಿಹಾರಕ್ಕೆ ಈ ಕೆಲಸ ಮಾಡಿ
ಜಾತಕದಲ್ಲಿ ಪಿತೃದೋಷವಿದ್ದರೆ ಖಂಡಿತವಾಗಿ ಮನೆಯ ದಕ್ಷಿಣ ಅಥವಾ ಪಶ್ಚಿಮ ಕೋನದಲ್ಲಿ ಬೇವಿನ ಮರವನ್ನು ನೆಡಿ. ಇದರಿಂದ ಪಿತ್ರುದೊಶದಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಪೂರ್ವಜರ ಆಶೀರ್ವಾದವೂ ಲಭಿಸುತ್ತದೆ.

ಇದನ್ನೂ ಓದಿ-Garuda Purana Teachings: ಗರುಡ ಪುರಾಣದಲ್ಲಿ ಉಲ್ಲೇಖಿತ ಮನುಷ್ಯ ಮಾಡುವ ಈ ಐದು ತಪ್ಪುಗಳು ವ್ಯಕ್ತಿಯನ್ನು ಬೀದಿಗೆ ತರಬಹುದು

ಶನಿಯ ಮಹಾದೆಸೆ ನಿವಾರಣೆಗೆ ಈ ಉಪಾಯ ಅನುಸರಿಸಿ
ಶನಿ ಮಹಾದೆಸೆಯ ಸಮಯದಲ್ಲಿ ಬೇವಿನ ಮರದಿಂದ ಮಾಡಿದ ಮಾಲೆಯನ್ನು ಧರಿಸುವುದು ಲಾಭದಾಯಕವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಶನಿಯ ಮಹಾದೆಸೆಯಿಂದ ಉಂಟಾಗುವ ಅಶುಭ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ-Planet Transit 2022: ಶನಿ-ಬುಧರ ಈ ನಡೆಯಿಂದ 4 ರಾಶಿಗಳ ಜನರಿಗೆ ಜುಲೈ 2ರ ಒಳಗೆ ಹೊಸ ನೌಕರಿ ಹಾಗೂ ಬಡ್ತಿ ಯೋಗ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News