Planet Transit 2022: ಶನಿ-ಬುಧರ ಈ ನಡೆಯಿಂದ 4 ರಾಶಿಗಳ ಜನರಿಗೆ ಜುಲೈ 2ರ ಒಳಗೆ ಹೊಸ ನೌಕರಿ ಹಾಗೂ ಬಡ್ತಿ ಯೋಗ

Planet Transit June 2022: ಜೂನ್ 2022 ರಲ್ಲಿ ಗ್ರಹ-ನಕ್ಷತ್ರಗಳ ಸ್ಥಿತಿಯಲ್ಲಿ ಭಾರಿ ಬದಲಾವಣೆಯಾಗಿದೆ. ಈ ಬದಲಾವಣೆಯ ಪ್ರಭಾವ 4 ರಾಶಿಗಳ ಜನರಿಗಾಗಿ ತುಂಬಾ ಲಾಭಕಾರಿ ಸಾಬೀತಾಗಲಿದೆ. ಈ ನಾಲ್ಕೂ ರಾಶಿಗಳ ಜನರಿಗೆ ವಕ್ರನಾದ ಶನಿ ಮತ್ತು ತನ್ನ ಸರಿಯಾದ ನಡೆ ಅನುಸರಿಸಿದ ಬುಧ ಭಾರಿ ಯಶಸ್ಸನ್ನು ನೀಡಲಿದ್ದಾರೆ.   

Written by - Nitin Tabib | Last Updated : Jun 10, 2022, 05:08 PM IST

    ಎರಡು ಮಹತ್ವದ ಬದಲಾವಣೆಗಳ ಮೂಲಕ ಜೂನ್ ತಿಂಗಳು ಆರಂಭಗೊಂಡಿದೆ.

    ಜೂನ್ ತಿಂಗಳ ಮೊದಲ ವಾರದಲ್ಲಿಯೇ ಎರಡು ಮಹತ್ವದ ಗ್ರಹಗಳು ತನ್ನ ನಡೆಯನ್ನು ಬದಲಾಯಿಸಿವೆ.

    ಜೂನ್ 3 ರಂದು ಬುಧ ವೃಷಭ ರಾಶಿಯಲ್ಲಿ ತನ್ನ ನೇರ ನಡೆಯನ್ನು ಅನುಸರಿಸಿದ್ದರೆ, ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ನಡೆಯನ್ನು ಅನುಸರಿಸಿದ್ದಾನೆ

Planet Transit 2022: ಶನಿ-ಬುಧರ ಈ ನಡೆಯಿಂದ 4 ರಾಶಿಗಳ ಜನರಿಗೆ ಜುಲೈ 2ರ ಒಳಗೆ ಹೊಸ ನೌಕರಿ ಹಾಗೂ ಬಡ್ತಿ ಯೋಗ title=
Planetary Transit 2022

Planet Transit Effect - ಎರಡು ಮಹತ್ವದ ಬದಲಾವಣೆಗಳ ಮೂಲಕ ಜೂನ್ ತಿಂಗಳು ಆರಂಭಗೊಂಡಿದೆ. ಜೂನ್ ತಿಂಗಳ ಮೊದಲ ವಾರದಲ್ಲಿಯೇ ಎರಡು ಮಹತ್ವದ ಗ್ರಹಗಳು ತನ್ನ ನಡೆಯನ್ನು ಬದಲಾಯಿಸಿವೆ. ಜೂನ್ 3 ರಂದು ಬುಧ ವೃಷಭ ರಾಶಿಯಲ್ಲಿ ತನ್ನ ನೇರ ನಡೆಯನ್ನು ಅನುಸರಿಸಿದ್ದರೆ, ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ವಕ್ರ ನಡೆಯನ್ನು ಅನುಸರಿಸಿದ್ದಾನೆ. ಶನಿ ಹಾಗೂ ಬುಧಗಳ ಈ ಬದಲಾಗಿರುವ ನಡೆ, ಎಲ್ಲಾ ರಾಶಿಗಳ ಜನರ ಮೇಲೆ ಮಹತ್ವದ ಪ್ರಭಾವ ಬೀರಲಿದೆ. ಬುಧ ಮುಂದಿನ ತಿಂಗಳವರೆಗೆ ಇದೆ ಸ್ಥಿತಿಯಲ್ಲಿರಲಿದ್ದು, ಶನಿ ಅಕ್ಟೋಬರ್ ವರೆಗೆ ವಕ್ರ ನಡೆ ಅನುಸರಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡೂ ಗ್ರಹಗಳ ಬದಲಾಗಿರುವ ನಡೆ 4 ರಾಶಿಗಳ ಜನರ ಭಾಗ್ಯವನ್ನು ಬೆಳಗಲಿವೆ.

ಈ ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ
ಮೇಷ ರಾಶಿ- ಶನಿ ಹಾಗೂ ಬುಧಗಳ ಈ ನಡೆ ಬದಲಾವಣೆ ಮೇಷ ರಾಶಿಯ ಜಾತಕದವರ ದಿನಗಳನ್ನೇ ಬದಲಾಯಿಸಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಈ ಜನರಿಗೆ ಭಾರಿ ಲಾಭ ಸಿಗಲಿದೆ. ಕೆಲವರಿಗೆ ಹೊಸ ನೌಕರಿ ಅಥವಾ ಪ್ರಮೋಶನ್ ಸಿಗುವ ಸಾಧ್ಯತೆ ಇದೆ. ಧನಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಹೊಸ ಮನೆ-ವಾಹನ ಖರೀದಿಯ ಪ್ರಬಲ ಯೋಗ ನಿರ್ಮಾಣಗೊಳ್ಳುತ್ತಿದೆ. ಹೊಸ ಕೆಲಸ ಆರಂಭಿಸಲು ಈ ಸಮಯ ಉತ್ತಮವಾಗಿರಲಿದೆ. 

ವೃಷಭ ರಾಶಿ- ಬುಧ ವೃಷಭ ರಾಶಿಯಲ್ಲಿಯೇ ತನ್ನ ನೇರನಡೆಯನ್ನು ಅನುಸರಿಸಿರುವ ಕಾರಣ ಈ ರಾಶಿಯ ಜನರಿಗೆ ಅದು ಅತ್ಯಂತ ಶುಭ ಫಲಿತಾಂಶಗಳನ್ನು ನೀಡಲಿದೆ. ಹೊಸ ನೌಕರಿಯ ಅವಕಾಶ ಒದಗಿಬರಲಿದೆ. ಆದಾಯ ಹೆಚ್ಚಾಗಲಿದೆ. ಪ್ರಮೋಶನ್ ಹಾಗೂ ವೇತನ ಹೆಚ್ಚಳದ ನಿರೀಕ್ಷೆಯಲ್ಲಿವವರ ನಿರೀಕ್ಷೆಗೆ ತೆರೆಬೀಳಲಿದೆ. ಸಾಕಷ್ಟು ಪ್ರಮಾಣದ ಹಣ ಕೈಸೇರುವುದರಿಂದ ಖುಷಿ ಸಿಗಲಿದೆ. ನಿಂತು ಹೋದ ಹಣ ವಾಪಸ್ ಬರಲಿದೆ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. 

ಮಿಥುನ ರಾಶಿ- ಶನಿ ಹಾಗೂ ಬುಧಗ್ರಹಗಳ ನಡೆಯಲ್ಲಿನ ಈ ಬದಲಾವಣೆ ಮಿಥುನ ರಾಶಿಯ ಜಾತಕದವರ ನಿಂದು ಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ನೌಕರಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಯಾತ್ರೆಯನ್ನು ಕೈಗೊಳ್ಳುವಿರಿ. ವ್ಯಾಪಾರಿಗಳ ವ್ಯಾಪಾರ ಉತ್ತಮವಾಗಿರಲಿದೆ. ಅವರ ಲಾಭ ಕೂಡ ಹೆಚ್ಚಾಗಲಿದೆ ಮತ್ತು ವ್ಯಾಪಾರ ವಿಸ್ತರಣೆಯಾಗಲಿದೆ. 

ಇದನ್ನೂ ಓದಿ-Garuda Purana Teachings: ಗರುಡ ಪುರಾಣದಲ್ಲಿ ಉಲ್ಲೇಖಿತ ಮನುಷ್ಯ ಮಾಡುವ ಈ ಐದು ತಪ್ಪುಗಳು ವ್ಯಕ್ತಿಯನ್ನು ಬೀದಿಗೆ ತರಬಹುದು

ಧನು ರಾಶಿ- ನೇರನಡೆಯ ಬುಧ ಹಾಗೂ ವಕ್ರನಡೆಯ ಶನಿ ಧನು ಜಾತಕದವರಿಗೆ ಲಾಭ ನೀಡಲಿದೆ. ಇದುವರೆಗೆ ನಿಂತುಹೋಗಿದ್ದ ನಿಮ್ಮ ಬಡ್ತಿ ನಿಮಗೆ ಸಿಗುವ ಸಾಧ್ಯತೆ ಇದೆ. ಸರ್ಕಾರಿ ನೌಕರಿಯ ಸಿದ್ಧತೆಯಲ್ಲಿರುವವರಿಗೆ ನೌಕರಿ ಸಿಗಲಿದೆ. ಧನಲಾಭದ ಜೊತೆಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ-Sun Transit 2022: ಜೂನ್ 15ರ ನಂತರ ಸೂರ್ಯನಂತೆ ಬೆಳಗಲಿದೆ ಈ ರಾಶಿಯವರ ಭವಿಷ್ಯ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News