ಬೆಂಗಳೂರು: ನಿತ್ಯ ಅಡುಗೆಯಲ್ಲಿ ಬಳಸುವ ಮಸಾಲೆಗಳು ರುಚಿ ಮತ್ತು ಆರೋಗ್ಯ ಎರಡಕ್ಕೂ ಉತ್ತಮವಾಗಿದೆ. ಅದಕ್ಕಾಗಿಯೇ ಕರಿಮೆಣಸು, ಲವಂಗ, ಏಲಕ್ಕಿ ಮುಂತಾದ ಅನೇಕ ಮಸಾಲೆಗಳನ್ನು ಭಾರತೀಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಬಳಸಲಾಗುತ್ತದೆ. ಅಂತಹ ಮಸಾಲೆ ಪದಾರ್ಥಗಳಲ್ಲೇ ಒಂದು ಕರಿಮೆಣಸು. 


COMMERCIAL BREAK
SCROLL TO CONTINUE READING

ಕರಿಮೆಣಸು (Black Pepper) ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಆಯುರ್ವೇದದಲ್ಲಿ ಇದನ್ನು ಔಷಧಿ ಎಂದು ಬಣ್ಣಿಸಲಾಗಿದೆ. ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಒಂದೆರಡು ಕರಿಮೆಣಸನ್ನು ಸೇವಿಸಿದರೆ ಸಾಕು ಎಂದು ಹೇಳಲಾಗುತ್ತದೆ. ಬನ್ನಿ ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ.


ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ:
ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕರಿಮೆಣಸು ಮದ್ದು ಎಂದು ಹೇಳಲಾಗುತ್ತದೆ. ಕರಿಮೆಣಸು ಮುಖದ ಮೊಡವೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.


ಇದನ್ನೂ ಓದಿ - Cucumber Peel Benefits: ಸೌತೆಕಾಯಿ ಸಿಪ್ಪೆಯನ್ನು ಎಸೆಯುವ ಮುನ್ನ ಇದನ್ನೊಮ್ಮೆ ಓದಿ


ಕರಿಮೆಣಸು ಹಲ್ಲುಗಳ ಸಮಸ್ಯೆಗಳಿಗೆ ರಾಮಬಾಣವಾಗಿದೆ:
ಕರಿಮೆಣಸು ಹಲ್ಲುಗಳಿಗೆ (Teeth) ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದನ್ನು ರಾಕ್ ಉಪ್ಪು ಮತ್ತು ಕಡಲೆಕಾಯಿಯೊಂದಿಗೆ ಪುಡಿಮಾಡಿ ಸಾಸಿವೆ ಎಣ್ಣೆಯ ಒಂದೆರಡು ಹನಿಗಳೊಂದಿಗೆ ಮಿಶ್ರಣ ಮಾಡಿ ಹಲ್ಲು ನೋವಿರುವ ಜಾಗಕ್ಕೆ ಲೇಪಿಸಿದರೆ ಒಸಡುಗಳ ನೋವು ನಿವಾರಣೆಯಾಗುತ್ತದೆ.


ಮೆಣಸು ಒತ್ತಡವನ್ನು ನಿವಾರಿಸುತ್ತದೆ:
ಮೆಣಸಿನಲ್ಲಿ ಪೈಪರೀನ್ ಎಂಬ ಅಂಶವಿದೆ ಎಂದು ಅಧ್ಯಯನಗಳು ಕಂಡುಹಿಡಿದಿದೆ, ಇದು ಖಿನ್ನತೆ-ಶಮನಕಾರಿ ಗುಣಗಳಿಂದ ಕೂಡಿದೆ. ಈ ಕಾರಣಕ್ಕಾಗಿ, ಕರಿಮೆಣಸು ಜನರ ಉದ್ವೇಗ ಮತ್ತು ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ - Onion Benefits: ಪ್ರತಿದಿನ ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗುವುದರಿಂದ ಆಗುವ ಪ್ರಯೋಜನ ತಿಳಿದರೆ ಅಚ್ಚರಿಗೊಳ್ಳುತ್ತೀರಿ


ಚಳಿಗಾಲದ ಆರೋಗ್ಯ ಸಮಸ್ಯೆಗಳಿಂದ ದೂರವಿರಿಸುತ್ತದೆ: 
ಚಳಿಗಾಲದಲ್ಲಿ ಕರಿಮೆಣಸು ತಿನ್ನುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ.  ಬದಲಾಗುವ ಋತುವಿನಲ್ಲಿ ಕರಿಮೆಣಸು ಕೆಮ್ಮು ಮತ್ತು ಶೀತದಿಂದ ಪರಿಹಾರವನ್ನು ನೀಡುತ್ತದೆ. ಇದಲ್ಲದೆ, ಗಂಟಲು ನೋವಿಗೂ ಇದು ಸಹಕಾರಿಯಾಗಿದೆ. ಕರಿಮೆಣಸು ಕೂದಲು ಉದುರುವುದನ್ನು ತಡೆಯಬಹುದು ಎಂದೂ ಕೂಡ ಹೇಳಲಾಗುತ್ತದೆ.


ಅನಿಲ ಮತ್ತು ಆಮ್ಲೀಯತೆ ಸಮಸ್ಯೆ ನಿವಾರಣೆ:
ಇತ್ತೀಚಿನ ಜೀವನಶೈಲಿಯಿಂದಾಗಿ ಕಂಡು ಬರುವ ಹಲವು ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ ಒಂದು ಪ್ರಮುಖ ಸಮಸ್ಯೆಯಾಗಿದೆ. ನಿಂಬೆ ರಸದೊಂದಿಗೆ ಕಪ್ಪು ಉಪ್ಪು ಮತ್ತು ಕರಿಮೆಣಸನ್ನು ಬೆರೆಸಿ ತಿನ್ನುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನಲಾಗಿದೆ.

ಗಮನಿಸಿ: ಈ ಲೇಖನವನ್ನು ಸಾಮಾನ್ಯ ಮಾಹಿತಿಯ ಆಧಾರದ ಮೇಲೆ ಬರೆಯಲಾಗಿದೆ. ಯಾವುದೇ ಮನೆಮದ್ದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯರು ಮತ್ತು ತಜ್ಞರನ್ನು ಸಂಪರ್ಕಿಸಿ. ಜೀ ನ್ಯೂಸ್ ಇದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.