ಇದು ಆಯುರ್ವೇದ ಸಂಜೀವಿನಿ, ತಿಳಿಯಿರಿ ನೆಲ್ಲಿಯ ಈ ಆರು ಆರೋಗ್ಯ ಮಹಿಮೆ..!

ನೆಲ್ಲಿಯಲ್ಲಿ  ಅಂಟಿ ಅಕ್ಸಿಡೆಂಟ್ ಗುಣಗಳಿವೆ. ಇವು ಕ್ಯಾನ್ಸರ್ ಕಾರಕ ಕೋಶಗಳನ್ನು ಅವುಗಳ ಮೂಲದಲ್ಲೇ ಕೊಲ್ಲುತ್ತದೆ. ಹಾಗಾಗಿ ಇದು ಕ್ಯಾನ್ಸರ್ ಕಿಲ್ಲರ್.

Written by - Ranjitha R K | Last Updated : Apr 13, 2021, 02:29 PM IST
  • ನೆಲ್ಲಿಕಾಯಿ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ. ಆದರೂ, ನೆಲ್ಲಿ ನೋಡಿದರೆ ಏನೋ ಒಂದು ತರಹ ಅಸಡ್ಡೆ
  • ಈ ವರದಿ ಓದಿದ ಮೇಲೆ ನೆಲ್ಲಿಕಾಯಿಯ ಕುರಿತ ನಿಮ್ಮ ನಿಲುವು ಬದಲಾಗುವುದು ಖಚಿತ.
  • ಕ್ಯಾಲ್ಸಿಯಂ, ಫೈಬರ್, ಪಾಸ್ಪರಸ್, ಕಾರ್ಬೋಹೈಡ್ರೇಟ್, ವಿಟಮಿನ್, ಕೆರಾಟಿನ್ ಗಳಿಂದ ಸಮೃದ್ದವಾಗಿದೆ ನೆಲ್ಲಿ
ಇದು ಆಯುರ್ವೇದ ಸಂಜೀವಿನಿ, ತಿಳಿಯಿರಿ ನೆಲ್ಲಿಯ  ಈ ಆರು ಆರೋಗ್ಯ ಮಹಿಮೆ..! title=
ನೆಲ್ಲಿಕಾಯಿಯ 6 ಆರೋಗ್ಯ ಮಹಿಮೆ (file photo)

ಬೆಂಗಳೂರು : ನೆಲ್ಲಿಕಾಯಿ (Goosberry) ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ.  ಆದರೂ, ನೆಲ್ಲಿ ನೋಡಿದರೆ ಏನೋ ಒಂದು ತರಹ ಅಸಡ್ಡೆ. ಈ ವರದಿ ಓದಿದ ಮೇಲೆ ನೆಲ್ಲಿಕಾಯಿಯ ಕುರಿತ ನಿಮ್ಮ ನಿಲುವು ಬದಲಾಗುವುದು ಖಚಿತ.  ಇದು ಆರೋಗ್ಯ ಸಂಜೀವಿನಿ. ಹಲವು ಕಾಯಿಲೆಗಳಿಗೆ ರಾಮಬಾಣ. ಕ್ಯಾಲ್ಸಿಯಂ, ಕಬ್ಬಿಣದಾಂಶ, ಫೈಬರ್, ಪಾಸ್ಪರಸ್, ಕಾರ್ಬೋಹೈಡ್ರೇಟ್,  ವಿಟಮಿನ್, ಕೆರಾಟಿನ್, ಖನಿಜ, ಸತ್ವ, ಫಾಲಿಫೆನೆಲ್ ಗಳಿಂದ ಭರ್ಜರಿಯಾಗಿ ಸಮೃದ್ದವಾಗಿದೆ ನೆಲ್ಲಿಕಾಯಿ. 

1. ಕ್ಯಾನ್ಸರ್ ಕಿಲ್ಲರ್ : 
ನೆಲ್ಲಿಯಲ್ಲಿ (Amla) ಅಂಟಿ ಅಕ್ಸಿಡೆಂಟ್ ಗುಣಗಳಿವೆ. ಇವು ಕ್ಯಾನ್ಸರ್ (Cancer)ಕಾರಕ ಕೋಶಗಳನ್ನು ಅವುಗಳ ಮೂಲದಲ್ಲೇ ಕೊಲ್ಲುತ್ತದೆ. ಹಾಗಾಗಿ ಇದು ಕ್ಯಾನ್ಸರ್ ಕಿಲ್ಲರ್

ಇದನ್ನೂ ಓದಿ: ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?

2. ಜೀರ್ಣ ಕ್ರಿಯೆ ಸರಾಗವಾಗುತ್ತದೆ :
ನೆಲ್ಲಿಯಲ್ಲಿರುವ (Goosberry) ಸತ್ವಗಳು ನಮ್ಮ ಜೀರ್ಣಾಂಗ ವ್ಯೂಹವನ್ನು ಬಲಪಡಿಸುತ್ತದೆ. ಅದರಲ್ಲಿ ಸಾಕಷ್ಟು ಫೈಬರ್ (Fiber)ಇರುವ ಕಾರಣ ನೆಲ್ಲಿ ತಿಂದರೆ ಹೊಟ್ಟೆಯಲ್ಲಿ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸೇರಿದ ಎಲ್ಲಾ ಕಾಯಿಲೆಗಳೂ ಮಾಯವಾಗುತ್ತದೆ. 

3. ತ್ವಚೆಯನ್ನು ಹೊಳಪಾಗಿಡುತ್ತದೆ :
ನೆಲ್ಲಿ ಕಾಯಿ ಚರ್ಮದ ಆರೋಗ್ಯಕ್ಕೆ (Skin care) ಬಹಳಷ್ಟು ಸಹಕಾರಿ. ನೆಲ್ಲಿ ತಿಂದರೆ ಚರ್ಮದ ಹೊಳಪು ಚೆನ್ನಾಗಿ ಬರುತ್ತದೆ. 

4. ಇಮ್ಯೂನಿಟಿ ಬೂಸ್ಟರ್ :
ನೆಲ್ಲಿಯಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ನೆಲ್ಲಿ ತಿಂದರೆ ಸಹಜವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ (Immunity) ಹೆಚ್ಚಾಗುತ್ತದೆ. 

ಇದನ್ನೂ ಓದಿ: Coronavirus Vaccine ಪಡೆಯುವ ಮೊದಲು ಮತ್ತು ನಂತ್ರ ಏನು ತಿನ್ನಬೇಕು, ಏನು ತಿನ್ನಬಾರದು? ಇಲ್ಲಿದೆ ತಜ್ಞರ ಸಲಹೆ!

5. ಕಣ್ಣಿನ  ಆರೋಗ್ಯಕ್ಕೆ ಅತ್ಯುತ್ತಮ:
ನೆಲ್ಲಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆರಾಟಿನ್ ಕಂಡು ಬರುತ್ತದೆ. ಕೆರಾಟಿನ್ ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ಸಹಕಾರಿ. ಇವು ದೃಷ್ಟಿದೋಷ ನಿವಾರಿಸುತ್ತದೆ. 

6. ಹೃದಯ ಮಿತ್ರ: 
ನೆಲ್ಲಿಯಲ್ಲಿ ಫೈಬರ್, ಕಬ್ಬಿಣದಾಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಇದು ಅಕ್ಸಿಕರಣವನ್ನು ನಿಯಂತ್ರಿಸುತ್ತದೆ ಇದರಿಂದ ಧಮನಿಗಳು ಬಲಗೊಳ್ಳುತ್ತವೆ. ಜೊತೆಗೆ ನೆಲ್ಲಿ ರಕ್ತದಲ್ಲಿ ಕೊಲೆಸ್ಟರಾಲ್ (cholesterol)ಪ್ರಮಾಣವನ್ನು ನಿಯಂತ್ರಿಸುತ್ತದೆ.

ನೆಲ್ಲಿಯನ್ನು ಹೀಗೆ ತಿನ್ನಲು ನಿಮಗೆ ಕಷ್ಟವಾಗುವುದಾದರೆ ಬೇರೆ ಬೇರೆ ವಿಧದಲ್ಲಿ ಖಾದ್ಯ ಮಾಡಿ ನೆಲ್ಲಿಯನ್ನು ಸೇವಿಸಬಹುದು. ನೆಲ್ಲಿಯ ಬೀಜ ತೆಗೆದು ಕಟ್ ಮಾಡಿ ಜ್ಯೂಸ್ (Juice) ಮಾಡಿ ಕುಡಿಯಬಹುದು. ಸಲಾದ್ ಮಾಡಿ ಅದರ ಜೊತೆ ನೆಲ್ಲಿ ಸೇರಿಸಿ ತಿನ್ನಬಹುದು. ಚಟ್ನಿ ಮಾಡಿ ಸೇವಿಸಬಹುದು. ನೆಲ್ಲಿಗೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಜಾಮ್ ಮಾಡಿ ತಿನ್ನಬಹುದು. 

ಇದನ್ನೂ ಓದಿ: Onion Benefits: ಪ್ರತಿದಿನ ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗುವುದರಿಂದ ಆಗುವ ಪ್ರಯೋಜನ ತಿಳಿದರೆ ಅಚ್ಚರಿಗೊಳ್ಳುತ್ತೀರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News