ತೂಕ ಇಳಿಕೆಗಾಗಿ ಮಾರ್ನಿಂಗ್ ಉಪಹಾರ ಹೀಗಿರಲಿ: ರುಚಿಕರವಾದ ಆಹಾರ ಸೇವನೆ ಎಂದರೆ ಎಲ್ಲರಿಗೂ ಬಲು ಪ್ರಿಯ. ಅದರಲ್ಲೂ ಎಣ್ಣೆಯಲ್ಲಿ ಕರಿದ, ಹೆಚ್ಚು ಬೆಣ್ಣೆ, ತುಪ್ಪ ಬಳಸಿ ತಯಾರಿಸಿದ ಖಾದ್ಯ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ,  ಈ ಹವ್ಯಾಸವು ಕ್ರಮೇಣ ನಮ್ಮನ್ನು ಸ್ಥೂಲಕಾಯತೆಗೆ ಬಲಿಪಶುವಾಗಿಸುತ್ತದೆ. ಹೊಟ್ಟೆ ಮತ್ತು ಸೊಂಟದ ಸುತ್ತಲೂ ಸಂಗ್ರಹವಾಗುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭದ ವಿಷಯವಲ್ಲ. ಕೆಲವರು ತೂಕ ಇಳಿಸಿಕೊಳ್ಳಲು ಆಹಾರ ಮತ್ತು ಪಾನೀಯದ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ, ಆದರೆ ಇದು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರವನ್ನು ಕಡಿಮೆ ಮಾಡುವ ಬದಲು, ಆರೋಗ್ಯಕರ ಆಹಾರವನ್ನು ತಿನ್ನುವ ಆಯ್ಕೆಯನ್ನು ಆರಿಸುವುದು ಹೆಚ್ಚು ಸೂಕ್ತ ಎನ್ನುತ್ತಾರೆ ಪೌಷ್ಠಿಕ ಆಹಾರ ತಜ್ಞರು.


COMMERCIAL BREAK
SCROLL TO CONTINUE READING

ತಜ್ಞರ ಪ್ರಕಾರ, ಬೆಳಗಿನ ಉಪಾಹಾರದಲ್ಲಿ ಕೆಲವು ವಿಶೇಷ ಆರೋಗ್ಯಕಾರ ಆಹಾರವನ್ನು ಸೇವಿಸುವುದರಿಂದ ತ್ವರಿತ ತೂಕ ನಷ್ಟಕ್ಕೆ ಸಹಕಾರಿ ಆಗಿದೆ. ಹಾಗಿದ್ದರೆ, ಬೆಳಗಿನ ಉಪಹಾರದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು. ಯಾವ ಆಹಾರಗಳ ಸೇವನೆಯಿಂದ ಆರೋಗ್ಯಕರ ತೂಕ ನಷ್ಟ ಸಾಧ್ಯ ಎಂದು ತಿಳಿಯೋಣ.


ತೂಕ ನಷ್ಟಕ್ಕಾಗಿ ನಿಮ್ಮ ಬೆಳಗಿನ ಉಪಹಾರದಲ್ಲಿರಲಿ ಈ ಆಹಾರಗಳು : 
* ಓಟ್ಸ್: 

ಓಟ್ಸ್ ಅನ್ನು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನ ಸಮೃದ್ಧ ಮೂಲವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ನೀವು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡುವುದಲ್ಲದೆ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಓಟ್ಸ್ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಬೆಳಗ್ಗೆ ಓಟ್ಸ್ ತಿಂದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದಿಲ್ಲ ಮತ್ತು ತೂಕವೂ ನಿಯಂತ್ರಣದಲ್ಲಿ ಉಳಿಯುತ್ತದೆ ಎನ್ನಲಾಗುತ್ತದೆ.


ಇದನ್ನೂ ಓದಿ- ದೀರ್ಘ ಸಮಯ ಕುಳಿತು ಪಾದಗಳಲ್ಲಿ ಊತ ಉಂಟಾಗುತ್ತಿದೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ


* ಮಲ್ಟಿಗ್ರೇನ್ ಅಟ್ಟಾ:
ನೀವು ನಿಮ್ಮ ಬೆಳಗಿನ ಉಪಹಾರದಲ್ಲಿ ಮಲ್ಟಿಗ್ರೇನ್ ಅಟ್ಟಾದಿಂದ ತಯಾರಿಸಿದ ರೊಟ್ಟಿ ಅಥವಾ ಬ್ರೆಡ್ ತಿನ್ನುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಉತ್ತಮವಾದ ಮಲ್ಟಿಗ್ರೇನ್ ಹಿಟ್ಟಿನ ಉತ್ಪನ್ನಗಳು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ ಮತ್ತು ನೀವು ಇದನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ಫಿಟ್‌ನೆಸ್ ಹಾಗೇ ಉಳಿಯುತ್ತದೆ ಎಂದು ಹೇಳಲಾಗುವುದು.


ಇದನ್ನೂ ಓದಿ- ಬಿಳಿ ಕೂದಲ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಎಣ್ಣೆಗಳನ್ನು ಟ್ರೈ ಮಾಡಿ ನೋಡಿ


*  ದಲಿಯಾ:
ದಲಿಯಾವನ್ನು ಯಾವಾಗಲೂ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ, ಇದು ತೂಕವನ್ನು ನಿಯಂತ್ರಿಸಲು ಸುಲಭವಾಗುತ್ತದೆ. ನೀವು ತರಕಾರಿಗಳೊಂದಿಗೆ ದಲಿಯಾದಿಂದ ತಯಾರಿಸಿದ ಗಂಜಿಯನ್ನು ಕುಡಿಯಬಹುದು. ಇಲ್ಲವೇ, ಹಾಲಿನೊಂದಿಗೆ ಸ್ವಲ್ಪ ಕಲ್ಲು ಸಕ್ಕರೆ ಹಾಕಿ ಸ್ವೀಟ್ ದಲಿಯಾವನ್ನು ಸಹ ಸೇವಿಸಬಹುದು. ದಲಿಯಾ ಫೈಬರ್, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ, ಏಕೆಂದರೆ ಇದು ಸುಲಭವಾಗಿ ಜೀರ್ಣವಾಗುತ್ತದೆ, ಆದ್ದರಿಂದ ಇದು ತೂಕವನ್ನು ಹೆಚ್ಚಿಸುವುದಿಲ್ಲ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.