ದೀರ್ಘ ಸಮಯ ಕುಳಿತು ಪಾದಗಳಲ್ಲಿ ಊತ ಉಂಟಾಗುತ್ತಿದೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಕೆಲವರಿಗೆ ಅದರಲ್ಲಿಯೂ ಮುಖ್ಯವಾಗಿ ಕಚೇರಿಯಲ್ಲಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಿಗೆ ಪಾದಗಳಲ್ಲಿ ಊತ ಒಂದು ಸಾಮಾನ್ಯ ಸಮಸ್ಯೆ ಆಗಿದೆ. 

Natural home remedies for Swelling in Legs: ಕೆಲವರಿಗೆ ಅದರಲ್ಲಿಯೂ ಮುಖ್ಯವಾಗಿ ಕಚೇರಿಯಲ್ಲಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಿಗೆ ಪಾದಗಳಲ್ಲಿ ಊತ ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಈ ಸಮಸ್ಯೆಯು ಭವಿಷ್ಯದಲ್ಲಿ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ನೀವು ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅಡುಗೆ ಸೋಡಾ: ಪಾದಗಳ ಊತವನ್ನು ಕಡಿಮೆ ಮಾಡಲು ಅಡುಗೆ ಸೋಡಾ ಸಹ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ಎರಡು ಚಮಚ ಅಕ್ಕಿಯನ್ನು ನೀರಿನಲ್ಲಿ ಕುದಿಸಿ. ಬಳಿಕ ಆ ನೀರಿಗೆ ಅಡುಗೆ ಸೋಡಾವನ್ನು ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಪಾದಗಳಿಗೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ಅಡುಗೆ ಸೋಡಾದ ಈ ಪರಿಹಾರವು ಪಾದಗಳ ಊತದಿಂದ ಪರಿಹಾರ ನೀಡುವುದರ ಜೊತೆಗೆ ರಕ್ತ ಪರಿಚಲೆಯನ್ನೂ ಸುಧಾರಿಸುತ್ತದೆ. 

2 /5

ಅರಿಶಿನ: ಆಯುರ್ವೇದದಲ್ಲಿ ಅರಿಶಿನವನ್ನು ಉತ್ತಮ ಔಷಧೀಯ ಮೂಲ ಎಂದು ಹೇಳಲಾಗಿದೆ. ಪಾದಗಳಲ್ಲಿನ ಊತದ ಸಮಸ್ಯೆಯಲ್ಲಿ ಪರಿಹಾರ ಪಡೆಯಲು ಸಹ ನೀವು ಅರಿಶಿನವನ್ನು ಬಳಸಬಹುದು. ಇದಕ್ಕಾಗಿ ಒಂದು ಚಮಚ ಅರಿಶಿನಕ್ಕೆ ಒಂದು ಚಮಚ ತೆಂಗಿನೆಣ್ಣೆ ಬೆರೆಸಿ ಪೇಸ್ಟ್ ತಯಾರಿಸಿ ಊತವಿರುವ ಜಾಗಕ್ಕೆ ಹಚ್ಚಿ. ಈ ಪೇಸ್ಟ್ ಒಣಗಿದಾಗ, ಉಗುರು ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ.

3 /5

ತೆಂಗಿನ ಎಣ್ಣೆ ಮಸಾಜ್ : ನಿಮಗೆ ಆಗಾಗ್ಗೆ ಪಾದಗಳಲ್ಲಿ ಊತ ಕಂಡುಬರುತ್ತಿದ್ದರೆ ಕೊಬ್ಬರಿ ಎಣ್ಣೆಯ ಮಸಾಜ್ ನಿಮಗೆ ಪರಿಹಾರವನ್ನು ನೀಡಬಹುದು. ಇದಕ್ಕಾಗಿ, ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ಬಳಿಕ,  ಎಣ್ಣೆಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಸಹ ಫ್ರೈ ಮಾಡಬಹುದು. ಬೆಳ್ಳುಳ್ಳಿಯಿಂದ ತಯಾರಿಸಿದ ಈ ಎಣ್ಣೆಯನ್ನು ಪಾದಗಳಿಗೆ ಹಚ್ಚಿ ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಊತ ಕಡಿಮೆ ಆಗುವುದರ ಜೊತೆಗೆ ನೋವಿನಿಂದಲೂ ಪರಿಹಾರ ಸಿಗಲಿದೆ.

4 /5

ಐಸ್ ಪ್ಯಾಕ್: ನಿಮ್ಮ ಪಾದಗಳು ಊದಿಕೊಂಡಿದ್ದರೆ, ಮನೆಯಲ್ಲಿ ಇಟ್ಟಿರುವ ಐಸ್ ಪ್ಯಾಕ್‌ಗಳನ್ನು ಸಹ ಇದಕ್ಕಾಗಿ ಬಳಸಬಹುದು. ಊತ ಪ್ರದೇಶವನ್ನು ಐಸ್ ಪ್ಯಾಕ್ನೊಂದಿಗೆ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ನೀವು ವಿಶ್ರಾಂತಿಯನ್ನು ಅನುಭವಿಸುವಿರಿ.  

5 /5

ಕಲ್ಲು ಉಪ್ಪು : ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಕಲ್ಲು ಉಪ್ಪು ಕಂಡು ಬರುತ್ತದೆ. ಅಡುಗೆ ರುಚಿಯನ್ನು ಹೆಚ್ಚಿಸುವ ಕಲ್ಲು ಉಪ್ಪು ಪಾದಗಳ ಊತವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಇದಕ್ಕಾಗಿ, ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ ಮತ್ತು ನಿಮ್ಮ ಪಾದಗಳನ್ನು ಅದರಲ್ಲಿ ನೆನೆಸಿ. ಇದು ನಿಮಗೆ ಪಾದದಲ್ಲಿ ಊತದಲ್ಲಿ ಪರಿಹಾರವನ್ನು ನೀಡುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.