ಬೆಳಗ್ಗೆ ಈ ಆಹಾರಗಳನ್ನು ತಿಂದರೆ ಬೊಜ್ಜು ಸುಲಭವಾಗಿ ಕರಗುತ್ತದೆ
ಬೆಳಗಿನ ಉಪಾಹಾರವು ಬಹಳ ಮುಖ್ಯವಾಗಿರುತ್ತದೆ. ಬೆಲ್ಕಗಿನ ಉಪಹಾರವನ್ನು ಯಾವ ಕಾರಣಕ್ಕೂ ಸ್ಕಿಪ್ ಮಾಡಬಾರದು. ಬೆಳಿಗ್ಗೆ ಪೌಷ್ಟಿಕಾಂಶದ ಉಪಹಾರವನ್ನು ಸೇವಿಸಿದರೆ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಬೆಂಗಳೂರು : ಆರೋಗ್ಯಕರ ಮತ್ತು ಪೌಷ್ಟಿಕ ಆಹಾರದೊಂದಿಗೆ ಬೆಳಗಿನ ಉಪಾಹಾರವನ್ನು ಪ್ರಾರಂಭಿಸಿದರೆ ದಿನವಿಡೀ ಶಕ್ತಿಯನ್ನು ನೀಡುತ್ತದೆ (Healthy breakfast). ಬೆಳಗಿನ ಉಪಾಹಾರವು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಕಾರಣಕ್ಕೂ ಬೆಳಗಿನ ಆಪಹಾರವನ್ನು ಸ್ಕಿಪ್ ಮಾಡಬಾರದು. ಬೆಳಗಿನ ಉಪಹಾರ ಸೇವಿಸದಿದ್ದರೆ ಇಡೀ ದಿನವೇ ಹಾಳಾಗಿ ಬಿಡುತ್ತದೆ (Importance of breakfast). ಮಾತ್ರವಲ್ಲ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೆಳಿಗ್ಗೆ ಪೌಷ್ಟಿಕಾಂಶದ ಉಪಹಾರವನ್ನು ಸೇವಿಸಿದರೆ, ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ (weight loss tips). ಹೊಟ್ಟೆಯ ಬೊಜ್ಜು ಕರಗಿಸಬೇಕಾದರೆ ಬೆಳಗಿನ ಉಪಹಾರದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು.
ಮೊಟ್ಟೆಗಳು : ಮೊಟ್ಟೆಗಳು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇದು ನಿಮ್ಮ ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ (benefits of egg). ಬೆಳಗಿನ ಉಪಾಹಾರದಲ್ಲಿ ಮೊಟ್ಟೆಯನ್ನು ಸೇವಿಸಿ. ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಬೆಳಗಿನ ಉಪಹಾರಕ್ಕೆ ಮೊಟ್ಟೆ ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ : Turmeric Milk: ನೀವು ಸಹ ರಾತ್ರಿ ಈ ಹಾಲನ್ನು ಕುಡಿಯಲು ಮರೆಯುತ್ತೀರಾ? ಇದನ್ನು ತಪ್ಪದೇ ಓದಿ
ಮೊಸರು : ಕೆಲವರಿಗೆ ಹಾಲು ಕುಡಿಯುವುದು ಇಷ್ಟವಾಗುವುದಿಲ್ಲ. ಹೀಗಿರುವಾಗ ಹಾಲಿನಲ್ಲಿ ಲಭ್ಯವಿರುವ ಕ್ಯಾಲ್ಸಿಯಂ ಅನ್ನು ಮೊಸರೂ ಪೂರೈಸುತ್ತದೆ (benefits of curd). ಮೊಸರು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್ಸ್ ನಿಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು (curd for weight loss) . ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ಉಪ್ಮಾ : ಉಪ್ಮಾದಲ್ಲಿ ನಾರಿನಂಶ ಅಧಿಕವಾಗಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಉಪ್ಮಾ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ರವೆ ಇರುತ್ತದೆ. ಇದು ನೈಸರ್ಗಿಕವಾಗಿ ಕೊಬ್ಬನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಇದು ಉತ್ತಮ ಕೊಬ್ಬನ್ನು ಒಳಗೊಂಡಿರುವ ಕಾರಣ, ಇದು ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Health Tips: ಮಲಗುವಾಗ ಈ ಕೆಲಸ ಮಾಡಿದರೆ ಸೋಮಾರಿಗಳು ಸಹ ತೂಕ ಕಳೆದುಕೊಳ್ಳುತ್ತಾರೆ
ತೊಗರಿ ಬೇಳೆ : ತೂಕ ನಷ್ಟಕ್ಕೆ ತೊಗರಿಬೇಳೆ ಸಹಾಯ ಮಾಡುತ್ತದೆ. ಇದನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಮತ್ತು ಬೊಜ್ಜು ಕಡಿಮೆ ಮಾಡುವಲ್ಲಿ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ (food to reduce belly fat).
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.