Flat Tummy Tips: ಫ್ಲಾಟ್ ಟಮ್ಮಿಗಾಗಿ ಮೊಸರನ್ನು ಈ ರೀತಿಯಾಗಿ ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ

ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.   

Written by - Ranjitha R K | Last Updated : Nov 1, 2021, 04:29 PM IST
  • ಮೊಸರು ಚಯಾಪಚಯವನ್ನು ಸುಧಾರಿಸುತ್ತದೆ
  • ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ
  • ಈ ರೀತಿಯಾಗಿ, ಮೊಸರನ್ನು ಆಹಾರದಲ್ಲಿ ಸೇರಿಸಿ
Flat Tummy Tips: ಫ್ಲಾಟ್ ಟಮ್ಮಿಗಾಗಿ ಮೊಸರನ್ನು ಈ ರೀತಿಯಾಗಿ ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ  title=
ಮೊಸರು ಚಯಾಪಚಯವನ್ನು ಸುಧಾರಿಸುತ್ತದೆ (file photo)

ನವದೆಹಲಿ : Flat Tummy Tips : ಪ್ರತಿ ಭಾರತೀಯ ಮನೆಯಲ್ಲೂ ಮೊಸರಿಗೊಂದು (Curd) ಜಾಗ ಇದ್ದೇ ಇರುತ್ತದೆ. ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಇದು ಡಿಹೈಡ್ರೆಟ್ ಆಗದಂತೆ ತಡೆಯುತ್ತದೆ. ಜೀರ್ಣಕ್ರಿಯೆಯನ್ನು (Digestion) ಸುಧಾರಿಸುತ್ತದೆ. ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Benefits of curd). ಆದರೆ, ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 

ಚಯಾಪಚಯವನ್ನು ಸುಧಾರಿಸುತ್ತದೆ :  ಚಯಾಪಚಯ ಕ್ರಿಯೆಯ ಹೆಚ್ಚಳ ಎಂದರೆ ತೂಕ ಇಳಿಸಿಕೊಳ್ಳುವ (Weight loss) ಪ್ರಮುಖ ಹಂತ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. 

ಇದನ್ನೂ ಓದಿ :  Diet: ವೇಗವಾಗಿ ತೂಕ ಕಳೆದುಕೊಳ್ಳಲು ಬಯಸುವಿರಾ? ಈ 3 ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ

ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ : ತೂಕ ಇಳಿಸಿಕೊಳ್ಳಲು ನಿರ್ಧರಿಸಿದ ತಕ್ಷಣ ಹೆಚ್ಚು ಸೇವಿಸಲು ಪ್ರಾರಂಭಿಸುವ ಆಹಾರವೆಂದರೆ ಪ್ರೋಟೀನ್. ಮೊಸರು (Curd) ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರೋಟೀನ್ ಇರುವ ಆಹಾರವಾಗಿದೆ. ಹಾಗಾಗಿ ಇದು ತೂಕ ನಷ್ಟ ಮಾಡಲು ಬಯಸುವವರಿಗೆ ಇದು ಪರಿಪೂರ್ಣವಾಗಿಸುತ್ತದೆ. 

ಈ ರೀತಿಯಾಗಿ, ಮೊಸರನ್ನು ಆಹಾರದಲ್ಲಿ ಸೇರಿಸಿ
1.ಬೆಳಗಿನ ಉಪಾಹಾರದಲ್ಲಿ (Breakfast) ಸ್ಮೂಥಿಯಾಗಿ ತೆಗೆದುಕೊಳ್ಳಿ.
2. ಮೊಸರು ಬಜ್ಜಿ ರೂಪದಲ್ಲಿ ಸೇವಿಸಬಹುದು 
3.ಸಕ್ಕರೆಯೊಂದಿಗೆ ಮೊಸರು ತಿನ್ನುವ ಬದಲು, ಸರಳ ಅಥವಾ ಮಸಾಲೆಯುಕ್ತ ಮೊಸರನ್ನು ತಿನ್ನಿರಿ.
4.ಒಣ ಹಣ್ಣುಗಳನ್ನು ಸೇರಿಸುವ ಮೂಲಕ ಮೊಸರು ತಿನ್ನಬಹುದು.

ಇದನ್ನೂ ಓದಿ : Water: ಎಚ್ಚರ! ನಿಂತು ನೀರು ಕುಡಿಯುವುದು ಈ ಗಂಭೀರ ಸಮಸ್ಯೆಗೆ ಕಾರಣವಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News