40 ವರ್ಷದ ನಂತರ ಮಹಿಳೆಯರು ದಿನಕ್ಕೊಂದು ಮೊಟ್ಟೆ ಸೇವಿಸಿದರೆ, ಈ ಸಮಸ್ಯೆ ಎದುರಾಗುವುದೇ ಇಲ್ಲ

ಮೊಟ್ಟೆ ಎಲ್ಲಾ ವಯಸ್ಸಿನ ಜನರಿಗೆ ಪ್ರಯೋಜನಕಾರಿಯಾಗಿದ್ದರೂ, 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಇದರ ಪ್ರಯೋಜನಗಳು ಅಧಿಕವಾಗಿರುತ್ತದೆ. 

Written by - Ranjitha R K | Last Updated : Dec 29, 2021, 01:03 PM IST
  • 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮೊಟ್ಟೆಯನ್ನು ನಿತ್ಯ ಸೇವಿಸಬೇಕು
  • ಮೊಟ್ಟೆಯಲ್ಲಿ ವಿಟಮಿನ್ ಹೇರಳವಾಗಿರುತ್ತದೆ
  • ಮೊಟ್ಟೆ ಸ್ನಾಯುಗಳಿಗೆ ಪ್ರಯೋಜನಕಾರಿಯಾಗಿರುತ್ತದೆ
 40 ವರ್ಷದ ನಂತರ ಮಹಿಳೆಯರು ದಿನಕ್ಕೊಂದು ಮೊಟ್ಟೆ ಸೇವಿಸಿದರೆ, ಈ ಸಮಸ್ಯೆ ಎದುರಾಗುವುದೇ ಇಲ್ಲ   title=
40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮೊಟ್ಟೆಯನ್ನು ನಿತ್ಯ ಸೇವಿಸಬೇಕು (file photo)

ನವದೆಹಲಿ : ಮೊಟ್ಟೆಗಳನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Health benefits of egg) ಎಂದು ಪರಿಗಣಿಸಲಾಗುತ್ತದೆ. ವೈದ್ಯರು ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಮೊಟ್ಟೆಗಳಲ್ಲಿ ಪ್ರೋಟೀನ್ ಪ್ರಮಾಣವು ಬಹಳ ಅಧಿಕವಾಗಿರುತ್ತದೆ. ವಿಶೇಷವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ, ಮೊಟ್ಟೆಯನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. ಮೊಟ್ಟೆ ಎಲ್ಲಾ ವಯಸ್ಸಿನ ಜನರಿಗೆ ಪ್ರಯೋಜನಕಾರಿಯಾಗಿದ್ದರೂ, 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಇದರ ಪ್ರಯೋಜನಗಳು ಅಧಿಕವಾಗಿರುತ್ತದೆ. ಇಂದಿನ ಧಾವಂತದ ಬದುಕಿನಲ್ಲಿ ಮಹಿಳೆಯರು ಕಚೇರಿಯ ಜೊತೆಗೆ ಮನೆಯ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಹೀಗಿರುವಾಗ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿರುತ್ತದೆ (egg benefits for women). ಇದರಿಂದ ವೃದ್ಧಾಪ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಆದ್ದರಿಂದ ನೀವು ಸಹ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು. 

ವಿಟಮಿನ್ ಹೇರಳವಾಗಿರುತ್ತದೆ : 
ಮೊಟ್ಟೆಗಳಲ್ಲಿ (Egg) ಜೀವಸತ್ವಗಳು ಸಮೃದ್ಧವಾಗಿರುತ್ತದೆ. ದೇಹದಲ್ಲಿ ವಿಟಮಿನ್ ಗಳ ಕೊರತೆಯಿಂದಾಗಿ, ಮೂಳೆಗಳು ಮತ್ತು ಕೀಲುಗಳಲ್ಲಿ ನೋವು ಕಂಡು ಬರುತ್ತದೆ. ಜೀವಸತ್ವಗಳ ಕೊರತೆಯಿಂದಾಗಿ, ವ್ಯಕ್ತಿಯ ಸ್ನಾಯುಗಳಲ್ಲಿ ನೋವು ಅನುಭವಿಸಬೇಕಾಗುತ್ತದೆ. 40 ವರ್ಷಗಳ ನಂತರ, ಈ ನೋವು ಬಹಳಷ್ಟು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಿನನಿತ್ಯ ಮೊಟ್ಟೆಯನ್ನು (Egg benefits) ಸೇವಿಸುವ ಮೂಲಕ ಇದನ್ನು ಹೋಗಲಾಡಿಸಬಹುದು. 

ಇದನ್ನೂ ಓದಿ : Winter Diet: ಚಳಿಗಾಲದಲ್ಲಿ ಈ ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಿನ್ನದಿದ್ದರೆ ಒಳಿತು

ಸ್ನಾಯುಗಳಿಗೆ ಪ್ರಯೋಜನಕಾರಿ :
ಸ್ನಾಯುಗಳು ಪ್ರೋಟೀನ್ನಿಂದ ರೂಪುಗೊಳ್ಳುತ್ತವೆ. ಮೊಟ್ಟೆಗಳಲ್ಲಿ ಪ್ರೋಟೀನ್ ಹೇರಳವಾಗಿ ಕಂಡುಬರುತ್ತವೆ. ಪ್ರೋಟೀನ್ ಸ್ನಾಯುಗಳನ್ನು ಮೃದು ಮತ್ತು ಹೊಂದಿಕೊಳ್ಳುವಂತೆ ಮಾಡುತ್ತದೆ.  ಈ ಕಾರಣದಿಂದಾಗಿ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ (Exercise) ಮಾಡುವುದು ಕೂಡಾ ಅವಶ್ಯಕವಾಗಿರುತ್ತದೆ. 

ಚಯಾಪಚಯವನ್ನು ಹೆಚ್ಚಿಸುತ್ತದೆ : 
40 ವರ್ಷ ವಯಸ್ಸಿನ ನಂತರ, ದೇಹದಲ್ಲಿ ಚಯಾಪಚಯವು (metabolism) ಕಡಿಮೆಯಾಗಲು ಪ್ರಾರಂಭಿಸುತ್ತದೆ . ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ನಿಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸುವುದು ಮುಖ್ಯ. ವಿಟಮಿನ್ ಡಿ ಮತ್ತು ಬಿ-12 ಕೊರತೆಯನ್ನು ನಿಭಾಯಿಸಲು ಮೊಟ್ಟೆಗಳು ತುಂಬಾ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ : Cardamom Benefits: ಏಲಕ್ಕಿಯನ್ನು ಈ ರೀತಿ ಸೇವಿಸುವುದರಿಂದ ಸಿಗುತ್ತೆ ಹೆಚ್ಚು ಪ್ರಯೋಜನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News