ನವದೆಹಲಿ: ಖಾದ್ಯ ತೈಲ ತಯಾರಕರಿಗೆ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ಡಿ ಮಿಶ್ರಣ ಕಡ್ಡಾಯ ಮಾಡಲು ಆಹಾರ ನಿಯಂತ್ರಕ ಎಫ್‌ಎಸ್‌ಎಸ್‌ಎಐ (FSSAI) ಚಿಂತನೆ ನಡೆಸುತ್ತಿದೆ. ಇದು ದೇಹದ ಪ್ರತಿರಕ್ಷಾ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ಎಫ್‌ಎಸ್‌ಎಸ್‌ಎಐ ಸಿಇಒ ಅರುಣ್ ಸಿಂಘಾಲ್ ಮಾತನಾಡಿ, ಖಾದ್ಯ ತೈಲಗಳಲ್ಲಿ ವಿಟಮಿನ್ ಎ ಮತ್ತು ಡಿ ಸಂಯೋಜನೆಯನ್ನು ಅನಿವಾರ್ಯ ಮಾಡಲು FSSAI ಚಿಂತನೆ ನಡೆಸುತ್ತಿದ್ದು, ಇದರಿಂದ ಭಾರತದ ಜನರು ಉತ್ತಮ ರೋಗನಿರೋಧಕ ಶಕ್ತಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.


ಇದನ್ನು ಓದಿ- ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ


ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ಅಡಿಯಲ್ಲಿ ಆಹಾರ ಪ್ರಚಾರ ಸಂಪನ್ಮೂಲ ಕೇಂದ್ರದ (ಎಫ್‌ಎಫ್‌ಆರ್‌ಸಿ) 'ಗ್ಲೋಬಲ್ ಅಲೈಯನ್ಸ್ ಫಾರ್ ಇಂಪ್ರೂವ್ಡ್ ನ್ಯೂಟ್ರಿಷನ್' (ಗೇನ್) ಸಹಯೋಗದೊಂದಿಗೆ ಆಯೋಜಿಸಲಾದ ಖಾದ್ಯ ತೈಲ ಪ್ರಚಾರದ ಕುರಿತು ರಾಷ್ಟ್ರೀಯ ವೆಬ್‌ನಾರ್‌ನಲ್ಲಿ ಅವರು ಮಾತನಾಡುತ್ತಿದ್ದರು.


ಖಾದ್ಯ ಎಣ್ಣೆಯ ಪೌಷ್ಠಿಕಾಂಶದ ಅಗತ್ಯತೆಗಳನ್ನು ಒಟ್ಟುಗೂಡಿಸುವುದರಿಂದ ವಿವಿಧ ಸಾಮಾಜಿಕ-ಆರ್ಥಿಕ ಕ್ಷೇತ್ರಗಳಿಗೆ ಸೇರಿದ ಜನರಿಗೆ ದೇಶಾದ್ಯಂತ ಖಾದ್ಯ ತೈಲಗಳ ಪೂರೈಕೆಯನ್ನು ಸುನಿಶ್ಚಿತಗೊಳಿಸಲಾಗುವುದು ಎಂದು ಸಿಂಘಾಲ್ ಹೇಳಿದ್ದಾರೆ.


ಇದನ್ನು ಓದಿ- Sweets ಅಂಗಡಿಯವರು ಅಕ್ಟೋಬರ್ 1ರಿಂದ ಈ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು


ಭಾರತದಲ್ಲಿ, ಸೂಕ್ಷ್ಮ ಪೋಷಕಾಂಶಗಳ ಕೊರತೆ ಸೇರಿದಂತೆ ಅಪೌಷ್ಟಿಕತೆಯ ಸಮಸ್ಯೆ ಬಹಳಷ್ಟು ಇದೆ. ನಮ್ಮ ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯು ವಿಟಮಿನ್ ಎ ಮತ್ತು ಡಿ ಕೊರತೆಯಿಂದ ಬಳಲುತ್ತಿದೆ. ನಮ್ಮ ದೇಹದಲ್ಲಿ ಈ ಜೀವಸತ್ವಗಳ ಕೊರತೆಯು ಮರಣ, ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಟಮಿನ್ ಎ ಮತ್ತು ಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಇದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುಖ್ಯವಾಗಿದೆ.


ಶುದ್ಧ ಸಾಸಿವೆ ಎಣ್ಣೆ ಮಾರಾಟ ನಡೆಯಲಿದೆ
ಸಾಸಿವೆ ಎಣ್ಣೆಯಲ್ಲಿ ಯಾವುದೇ ಬ್ರಾಂಡ್ ಇತರೆ ಖಾದ್ಯ ತೈಲದ ಕಲಬೆರಕೆ ಮಾಡಲು ಸಾಧ್ಯವಾಗುವುದಿಲ್ಲ. ಈಗ ಶುದ್ಧ ಸಾಸಿವೆ ಎಣ್ಣೆ ಮಾತ್ರ ಮಾರಾಟವಾಗಲಿದೆ ಎಂದು ಇದೇ ವೇಳೆ ಸಿಂಘಾಲ್ ಹೇಳಿದ್ದಾರೆ.


ಇದನ್ನು ಓದಿ- Health Insurance ಖರೀದಿಸುವ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ


ಇದಕ್ಕಾಗಿ ಸರ್ಕಾರ ಎಫ್‌ಎಸ್‌ಎಸ್‌ಎಐಗೆ ಸೂಚನೆಗಳನ್ನು ಸಹ ನೀಡಿದೆ. ಮತ್ತು ಹೊಸ ಮಾರ್ಗಸೂಚಿಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.


ಪ್ರಸ್ತುತ, ಸಾಸಿವೆ ಎಣ್ಣೆಯಲ್ಲಿ ಶೇಕಡಾ 20 ರಷ್ಟು ಇತರ ಖಾದ್ಯ ತೈಲ ಬೆರೆಸುವ ಅನುಮತಿ ಇದೆ. ಆದರೆ ಈ ನಿಯಮದ ನಂತರ, ಇನ್ಮುಂದೆ ಕಲಬೆರಕೆ ಆಗುವುದಿಲ್ಲ ಮತ್ತು ಶುದ್ಧ ಸಾಸಿವೆ ಎಣ್ಣೆಯನ್ನು ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.