Eye Shape Spiritual Meaning: ಸಾಮಾನ್ಯವಾಗಿ ನಮ್ಮ ಕಣ್ಣುಗಳು ನಮ್ಮ ಮನಸ್ಸಿನ ಭಾವನೆಗಳಾಗಿರುವ ನಗು, ಖುಷಿ ಹಾಗೂ ದುಃಖ ಎಲ್ಲವನ್ನು ಬಹಿರಂಗಪಡಿಸುತ್ತವೆ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ, ನಮ್ಮ ಕಣ್ಣುಗಳು ನಮ್ಮ ವ್ಯಕ್ತಿತ್ವದ ಕುರಿತಾದ ಹಲವು ರಹಸ್ಯಗಳನ್ನು ಕೂಡ ಬಹಿರಂಗಪಡಿಸುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಯಾವುದೇ ಓರ್ವ ವ್ಯಕಿಯ ಕಣ್ಣುಗಳ ಸಂರಚನೆಯನ್ನು ಓದುವುದನ್ನು ನೀವು ತಿಳಿದುಕೊಂಡರೆ, ಆ ವ್ಯಕ್ತಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕೂಡ ತಿಳಿಯಬಹುದು. ಹಾಗಾದರೆ ಬನ್ನಿ ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕಣ್ಣುಗಳ ಸಂರಚನೆಯ ಮೂಲಕ ಆತನ ವ್ಯಕ್ತಿತ್ವವನ್ನು ಹೇಗೆ ಅರಿಯಬೇಕು ಎಂಬುದನ್ನು ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

ವ್ಯಕ್ತಿಯ ಕಣ್ಣುಗಳು ಮೇಲಕ್ಕೆದ್ದಿದ್ದರೆ ಏನರ್ಥ?
ಸಾಮುದ್ರಿಕ್ ಶಾಸ್ತ್ರದ ಪ್ರಕಾರ, ಕಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಮೇಲಕ್ಕೆ ಇದ್ದಿದ್ದರೆ ಅಂತಹ ಜನರು ಮೃದು ಹೃದಯಿಗಲಾಗಿರುತ್ತಾರೆ. ಅವರೊಂದಿಗೆ ಮಾತನಾಡುವ ಮೂಲಕ ಈ ಜನರು ತುಂಬಾ ಕರುಣಾಮಯಿ ಎಂಬುದನ್ನು ನೀವು ಅರಿತುಕೊಳ್ಳಬಹುದು. ಇವರು ಸ್ವಭಾವದಲ್ಲಿ ಇತರರಿಗಿಂತ ತುಂಬಾ ಉದಾರರಾಗಿರುತ್ತಾರೆ. ಇಂತಹ ಜನರ ಕಣ್ಣುಗಳು ಒಂದು ವೇಳೆ ಹೊಳೆಯುತ್ತಿದ್ದರೆ, ಅವರು ತುಂಬಾ ಬುದ್ಧಿವಂತರಾಗಿರುತ್ತಾರೆ.


ಕಣ್ಣುಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೆ ಏನರ್ಥ
ಒಬ್ಬ ವ್ಯಕ್ತಿಯು ಚಿಕ್ಕ ಕಣ್ಣುಗಳನ್ನು ಹೊಂದಿದ್ದರೆ, ಈ ಜನರು ಕಡಿಮೆ ಧೈರ್ಯಶಾಲಿಗಳಾಗಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಇವರ ಸ್ವಭಾವದಲ್ಲಿ ಕೋಪ ಹೆಚ್ಚಾಗಿ ಕಂಡುಬರುತ್ತದೆ. ಈ ಜನರು ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುತ್ತಾರೆ. ಇವರು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ, ಆದರೆ  ಇವರು ವರ್ತಮಾನದಲ್ಲಿ ಜೀವಿಸಲು ಹೆಚ್ಚು ಇಷ್ಟಪಡುತ್ತಾರೆ.


ಇದನ್ನೂ ಓದಿ-Venus-Sun Conjunction 2022: ಸೂರ್ಯ-ಶುಕ್ರರ ಸಂಯೋಜನೆ, ಈ ರಾಶಿಗಳ ಜನರ ಜೀವನದಲ್ಲಿ ಅಪಾರ ಧನವೃಷ್ಟಿ


ಕಣ್ಣುಗಳು ದುಂಡಾಗಿದ್ದರೆ ಏನರ್ಥ
ಸಮುದ್ರಶಾಸ್ತ್ರದ ಪ್ರಕಾರ, ದುಂಡಗಿನ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ಸುತ್ತಾಡುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಇವರು ಯಾವಾಗಲು ಪ್ರಯಾಣದಲ್ಲಿರಲು ಹೆಚ್ಚು ಇಷ್ಟಪಡುತ್ತಾರೆ. ಈ ಹಣರಿಗೆ ಹೊಸ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿರುತ್ತದೆ. ದೂರದ ಪ್ರಯಾಣವನ್ನು ಇಷ್ಟಪಡುವ ಈ ಜನರು ಜೀವನದಲ್ಲಿ ಅನ್ವೇಷಣೆ ಮಾಡಲು ಹೆಚ್ಚು ಇಷ್ಟಪಡುತ್ತಾರೆ.


ಇದನ್ನೂ ಓದಿ-Chanakya Niti: ಜೀವನದಲ್ಲಿ ಯಶಸ್ಸಿಗಾಗಿ ನಿತ್ಯ ಬೆಳಗ್ಗೆ 4 ಕೆಲಸಗಳನ್ನು ತಪ್ಪದೆ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.