Venus And Sun Conjunction: ಪ್ರತಿ ತಿಂಗಳು ಕೆಲ ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸುತ್ತವೆ. ಅದರ ಪ್ರಭಾವ ವ್ಯಕ್ತಿಗಳ ಜೀವನದ ಮೇಲೆ ನೀವು ಕಾಣಬಹುದು. ಆಗಸ್ಟ್ ತಿಂಗಳ ಕೊನೆಯ ದಿನ ಅಂದರೆ, ಆಗಸ್ಟ್ 31ರಂದು ಶುಕ್ರ ಗ್ರಹ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಈ ದಿನ ಶುಕ್ರ ಗ್ರಹ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಆದರೆ, ಈಗಾಗಲೇ ಗ್ರಹಗಳ ರಾಜ ಸೂರ್ಯ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಆತ ಅಲ್ಲಿ ಸೆಪ್ಟೆಂಬರ್ 17ರವರೆಗೆ ಮುಂದುವರೆಯಲಿದ್ದಾನೆ. ಹೀಗಿರುವಾಗ ಶುಕ್ರನ ಸಿಂಹ ಪ್ರವೇಶದಿಂದ ಸಿಂಹ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಜನೆ ನೆರವೇರಲಿದೆ. ಈ ಎರಡೂ ಗ್ರಹಗಳು ಒಂದೇ ವೇದಿಕೆಯ ಮೇಲೆ ಬರುವುದರಿಂದ ಹಲವು ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಉಂಟಾಗಲಿದೆ. ಆದರೆ, ಕೆಲ ರಾಶಿಗಳ ಜಾತಕದವರ ಪಾಲಿಗೆ ಈ ಪ್ರಭಾವ ತುಂಬಾ ವಿಶೇಷವಾಗಿರಲಿದೆ. ಈ ಶುಕ್ರ-ಸೂರ್ಯನ ಸಂಯೋಜನೆ ಸೆ.17ರವರೆಗೆ ಇರಲಿದ್ದು, ಬಳಿಕ ಸೂರ್ಯ ಸಿಂಹ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಈ ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ
ಕರ್ಕ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಶುಕ್ರ ಮತ್ತು ಸೂರ್ಯನ ಸಂಯೋಜನೆಯು ತುಂಬಾ ಫಲಪ್ರದ ಸಾಬೀತಾಗಲಿದೆ. ಈ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಷ್ಟೇ ಅಲ್ಲ ಇವರ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿದೆ. ಕರ್ಕ ರಾಶಿ ಜನರ ಸೌಖ್ಯ ವೃದ್ಧಿಯಾಗಲಿದೆ. ಈ ಸಮಯವು ಓದುವ ಮಕ್ಕಳಿಗೆ ಅನುಕೂಲಕರವಾಗಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.
ಕುಂಭ ರಾಶಿ - ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಈ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ, ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಇರಲಿದೆ. ಸಂಪತ್ತು ಕ್ರೋಢೀಕರಣದಲ್ಲಿ ಯಶಸ್ಸು ಸಿಗಲಿದೆ. ನೀವು ಎಲ್ಲೋ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಉತ್ತಮವಾಗಿರಲಿದೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣ ಪಡೆಯುವ ಅವಕಾಶಗಳಿವೆ.
ವೃಷಭ ರಾಶಿ - ಈ ಸಂಯೋಜನೆಯು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೌಟುಂಬಿಕ ಜೀವನ ಸುಧಾರಿಸಲಿದೆ. ಈ ಸಮಯದಲ್ಲಿ, ವ್ಯಕ್ತಿಯ ಮನಸ್ಸು ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಉನ್ನತ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿರುವ ಜನರು ಈ ಅವಧಿಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ ಸೂರ್ಯ ಮತ್ತು ಶುಕ್ರನ ಸಂಯೋಜನೆಯು ಈ ರಾಶಿಚಕ್ರದ ಜನರಿಗೆ ಪ್ರಯೋಜನಕಾರಿ ಸಾಬೀತಾಗಲಿದೆ.
ಇದನ್ನೂ ಓದಿ-Chanakya Niti: ಜೀವನದಲ್ಲಿ ಯಶಸ್ಸಿಗಾಗಿ ನಿತ್ಯ ಬೆಳಗ್ಗೆ 4 ಕೆಲಸಗಳನ್ನು ತಪ್ಪದೆ ಮಾಡಿ
ಮಿಥುನ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರ ಸಂವಹನ ಕೌಶಲ್ಯ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಆದಾಯ ವೃದ್ಧಿಯ ಸಾಧ್ಯತೆಗಳೂ ಕೂಡ ಗೋಚರಿಸುತ್ತಿವೆ. ವೃತ್ತಿಜೀವನದಲ್ಲಿ ಯಶಸ್ಸು ಇರಲಿದ್ದು, ನೀವು ಉತ್ತಮ ಸ್ಥಾನವನ್ನು ಸಾಧಿಸುವಿರಿ. ನಿಮ್ಮ ಕೆಲಸವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತದೆ ಮತ್ತು ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
ಇದನ್ನೂ ಓದಿ-Shanichari Amavasya 2022: ಇಂದು ಶನಿ ಅಮಾವಾಸ್ಯೆ, ರಾಶಿಗಳಿಗೆ ಅನುಗುಣವಾಗಿ ಈ ಕೆಲಸ ಮಾಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.