ನವದೆಹಲಿ : ಮುಖದ ಆರೈಕೆಗೆ ಯಾವತ್ತೂ ಹೆಚ್ಚಿನ ತ್ತು ನೀಡಲಾಗುತ್ತದೆ. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ತಮ್ಮ ಮುಖದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕಾಳಜಿ ವಹಿಸುತ್ತಲೇ ಕೆಲ ತಪ್ಪುಗಳನ್ನೂ ಮಾಡುತ್ತಾರೆ. ನಿಮ್ಮ ಮುಖದ ಮೇಲೆ ತಪ್ಪಿಯೂ ಈ ಐದು ವಸ್ತುಗಳನ್ನು ಹಚ್ಚಲು ಹೋಗಬೇಡಿ. 


COMMERCIAL BREAK
SCROLL TO CONTINUE READING

1. ಬಾಡಿ ಲೋಷನ್ :
ಹೆಸರೇ ಸೂಚಿಸುವಂತೆ, ಈ ಲೋಷನ್ (Body lotion) ಅನ್ನು ದೇಹಕ್ಕೆ ಹಚ್ಚಬೇಕು. ಆದರೆ ಅನೇಕರು ಬಾಡಿ ಲೋಷನ್ ಅನ್ನು ಮುಖ
ಕ್ಕೆ ಹಚ್ಚುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಬಾಡಿ ಲೋಷನ್ ದಪ್ಪವಾಗಿರುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ರೋಮ ರಂಧ್ರಗಳು ಮುಚ್ಚಿಕೊಳ್ಳುತ್ತವೆ.  ಇದು ಮೊಡವೆ (Pimple) ಮತ್ತು ಗುಳ್ಳೆಗಳ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಬಾಡಿ ಲೋಷನ್ ಅನ್ನು ಮುಖದ ಮೇಲೆ ಹಚ್ಚುವುದರಿಂದ ಅಲರ್ಜಿ (Allergy) ಕೂಡ ಉಂಟಾಗುತ್ತದೆ.


ಇದನ್ನೂ ಓದಿ :  ಮೂಳೆ ಗಟ್ಟಿ ಇರಬೇಕಾದರೆ ನಿಮ್ಮ ಡಯಟ್ ನಲ್ಲಿರಲಿ ಈ ಆಹಾರ


2. ಟೂತ್‌ಪೇಸ್ಟ್  :
ಮೊಡವೆ ಸಮಸ್ಯೆಗಳನ್ನು ನಿವಾರಿಸಲು ಅನೇಕ ಪರಿಹಾರಗಳಿವೆ.  ಕೆಲವರು ಟೂತ್ ಪೇಸ್ಟನ್ನು (tooth paste) ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಟೂತ್ ಪೇಸ್ಟ್ ನಲ್ಲಿ ರಸಾಯನಿಕ ವಸ್ತುಗಳಿರುತ್ತವೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಸಮಸ್ಯೆ (Skin problem) ಉಂಟಾಗುತ್ತದೆ. ಕಲೆಗಳು ಮತ್ತು ಸುಕ್ಕುಗಳ ಸಮಸ್ಯೆಯೂ ಎದುರಾಗಬಹುದು. 


3. ಬಿಸಿನೀರು :
ಬಿಸಿನೀರಿನಲ್ಲಿ (hot water) ಸ್ನಾನ ಮಾಡುವುದರಿಂದ ಕೂದಲು ಹಾಳಾಗುತ್ತದೆ ಎನ್ನುವುದನ್ನು ಕೇಳಿರುತ್ತೀರಿ. ಹಾಗೆಯೇ ಬಿಸಿ ನೀರಿನಲ್ಲಿ ಮುಖ ತೊಳೆಯುವುದರಿಂದಲೂ ಕೆಲ ಸಮಸ್ಯೆಗಳು ಎದುರಾಗುತ್ತವೆ. ಮುಖ ಡ್ರೈನೆಸ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮುಖವನ್ನು ತೊಳೆಯಲು ಯಾವಾಗಲೂ ತಣ್ಣೀರು, ಅಥವಾ ಉಗುರು ಬೆಚ್ಚಗಿನ ನೀರನ್ನೇ (warm water) ಬಳಸಿ.  


ಇದನ್ನೂ ಓದಿ : ಬರೀ ಆರೋಗ್ಯ ಮಾತ್ರವಲ್ಲ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ ಕಲ್ಲಂಗಡಿ ಹಣ್ಣು


4. ನಿಂಬೆ : 
ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ (lemon) ಆರೋಗ್ಯ ಬಹಳ ಪ್ರಯೋಜನಕಾರಿ.  ಚರ್ಮದ ಆರೈಕೆಗೆ ಸಂಬಂಧಿಸಿದ ಅನೇಕ ಮನೆಮದ್ದುಗಳಲ್ಲಿ ನಿಂಬೆಯನ್ನು ಬಳಸಲಾಗುತ್ತದೆ. ಆದರೆ ನಿಂಬೆ ಅಥವಾ ನಿಂಬೆ ರಸವನ್ನು (lime juice) ನೇರವಾಗಿ ಚರ್ಮದ ಮೇಲೆ ಹಚ್ಚಬಾರದು. ಇದು ಚರ್ಮದ ಉರಿ ಮತ್ತು ತುರಿಕೆಗೆ ಕಾರಣವಾಗಬಹುದು. ಮೊಡವೆಗಳಿದ್ದರೆ ಖಂಡಿತವಾಗಿಯೂ ಮುಖದ ಮೇಲೆ ನಿಂಬೆಯನ್ನು ಹಚ್ಚಲೇ ಬೇಡಿ. 


5. ಸೋಪ್ :
ಇನ್ನು  ಮುಖವನ್ನು ತೊಳೆಯಲು ಸಾಬೂನನ್ನು (Soap) ಬಳಸಬೇಡಿ. ಸಾಬೂನು ಬಳಸುವುದರಿಂದ ಕೂಡಾ ಚರ್ಮದ ಎಣ್ಣೆಯ ಅಂಶ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.  ಇದು ಚರ್ಮದ ಡ್ರೈನೆಸ್ ಗೆ ಕಾರಣವಾಗುತ್ತದೆ. ಮುಖ ತೊಳೆಯಲು ಸಾಬೂನಿನ ಬದಲು ಫೇಸ್ ವಾಶ್ ಬಳಸಿ. 


ಇದನ್ನೂ ಓದಿ : ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿ, ಖಂಡಿತಾ ಕಣ್ಣಲ್ಲಿ ನೀರು ಬರುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ