ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿ, ಖಂಡಿತಾ ಕಣ್ಣಲ್ಲಿ ನೀರು ಬರುವುದಿಲ್ಲ.

ಈರುಳ್ಳಿ ಅಡುಗೆಗೆ ಬೇಕೇ ಬೇಕು. ಆದರೆ, ಈರುಳ್ಳಿ ಕತ್ತರಿಸುವ ಕಷ್ಟ ಮಾತ್ರ ಯಾರಿಗೂ ಬೇಡ. ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಖಂಡಿತಾ ಕಣ್ಣೀರು ಬರಿಸುತ್ತದೆ. ನಾವಿಂದು ಒಂದು ಟ್ರಿಕ್ಸ್  ಹೇಳುತ್ತೇವೆ. ಆ ಟ್ರಿಕ್ಸ್ ಬಳಸಿದರೆ ಕಣ್ಣಲ್ಲಿ ನೀರು ಹಾಕದೇ ಈರುಳ್ಳಿ ಕತ್ತರಿಸಬಹುದು.   

Written by - Ranjitha R K | Last Updated : Jun 8, 2021, 01:03 PM IST
  • ಈರುಳ್ಳಿ ಅಡುಗೆಗೆ ಬೇಕೇ ಬೇಕು. ಆದರೆ, ಈರುಳ್ಳಿ ಕತ್ತರಿಸುವ ಕಷ್ಟ ಮಾತ್ರ ಯಾರಿಗೂ ಬೇಡ.
  • ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಖಂಡಿತಾ ಕಣ್ಣೀರು ಬರಿಸುತ್ತದೆ.
  • ಈ ಟ್ರಿಕ್ಸ್ ಬಳಸಿದರೆ ಕಣ್ಣಲ್ಲಿ ನೀರು ಹಾಕದೇ ಈರುಳ್ಳಿ ಕತ್ತರಿಸಬಹುದು.

ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿ, ಖಂಡಿತಾ ಕಣ್ಣಲ್ಲಿ ನೀರು ಬರುವುದಿಲ್ಲ. title=
ಈ ಟ್ರಿಕ್ಸ್ ಬಳಸಿದರೆ ಕಣ್ಣಲ್ಲಿ ನೀರು ಹಾಕದೇ ಈರುಳ್ಳಿ ಕತ್ತರಿಸಬಹುದು. (photo zee news)

ನವದೆಹಲಿ : ಈರುಳ್ಳಿ ಅಡುಗೆಗೆ ಬೇಕೇ ಬೇಕು. ಆದರೆ, ಈರುಳ್ಳಿ (Onion) ಕತ್ತರಿಸುವ ಕಷ್ಟ ಮಾತ್ರ ಯಾರಿಗೂ ಬೇಡ. ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಖಂಡಿತಾ ಕಣ್ಣೀರು ಬರಿಸುತ್ತದೆ.  ನಾಲ್ಕೈದು ಈರುಳ್ಳಿಯಾದರೆ ಪರವಾಗಿಲ್ಲ. ಕೆಲವೊಂದು ರೆಸ್ಟೋರೆಂಟ್ ಗಳಲ್ಲಿ ಮೂಟೆ ಮೂಟೆ ಈರುಳ್ಳಿ ಕತ್ತರಿಸಬೇಕಾಗುತ್ತದೆ. ಆ ಸ್ಥಿತಿ ದೇವರಿಗೆ ಪ್ರೀತಿ. ಆದರೆ, ನಾವಿಂದು ಒಂದು ಟ್ರಿಕ್ಸ್ (Onion cutting tricks) ಹೇಳುತ್ತೇವೆ. ಆ ಟ್ರಿಕ್ಸ್ ಬಳಸಿದರೆ ಕಣ್ಣಲ್ಲಿ ನೀರು ಹಾಕದೇ ಈರುಳ್ಳಿ ಕತ್ತರಿಸಬಹುದು.  ಖುಷಿ ಖುಷಿಯಿಂದ ಚಕಾಚಕ್ ಈರುಳ್ಳಿ ಕತ್ತರಿಸಿಹಾಕಬಹುದು.

ಹಾಗಾದರೆ ಈರುಳ್ಳಿ ಕತ್ತರಿಸುವ ಆ ಹ್ಯಾಕ್ ಯಾವುದು.?
ಈಗ ಇಂಟರ್ನೆಟ್ ಗಳಲ್ಲಿ ಈರುಳ್ಳಿ ಕತ್ತರಿಸುವ (Onion cuting hack) ಸುಲಭ ವಿಧಾನಗಳು ಬೇಕಾದಷ್ಟು ಲಭ್ಯವಿದೆ. ಅದಕ್ಕೊಂದು ಸೇರ್ಪಡೆ ಎನ್ನುವಂತೆ ಕಣ್ಣಲ್ಲಿ ನೀರು ಬರದಂತೆ ಈರುಳ್ಳಿ ಕತ್ತರಿಸುವ ವಿಧಾನ  ಇಲ್ಲಿ ಹೇಳುತ್ತೇವೆ. ನೀವು ಮಾಡಬೇಕಾದ್ದು ಇಷ್ಟೆ. ನಿಮಗೆ   ಅಡುಗೆಗೆ ಬೇಕಾದಷ್ಟು ಈರುಳ್ಳಿಯನ್ನು ತೆಗೆದಿಟ್ಟುಕೊಳ್ಳಿ. ಅದರ ಬುಡ ಮತ್ತು ತುದಿ ಕಟ್ ಮಾಡಿ ಸಿಪ್ಪೆ ತೆಗೆಯಿರಿ. ಅಷ್ಟೂ ಈರುಳ್ಳಿಯನ್ನು ಫ್ರೀಜರ್ (freezer) ಒಳಗೆ ಸುಮಾರು 10 ನಿಮಿಷ ಇಡಿ. ರೆಫ್ರಿಜರೇಟರ್ ನಲ್ಲಿ ಇಡುವುದಾದರೆ ಸುಮಾರು ಅರ್ಧ ಗಂಟೆ ಇಡಿ.  ನಂತರ ಹೊರಗೆ ತೆಗೆದು ಕಟ್ ಮಾಡಿ. ಈರುಳ್ಳಿ ನಿಮ್ಮ ಕಣ್ಣಲ್ಲಿ ನೀರು ತರುವುದಿಲ್ಲ.  ಬದಲಿಗೆ ಸರಸರ ಎಲ್ಲಾ ಈರುಳ್ಳಿ  (Onion) ಕಟ್ ಮಾಡಬಹುದು.

ಇದನ್ನೂ ಓದಿ : Skin Care : ಕುತ್ತಿಗೆ ಸುತ್ತಲಿನ ಕಪ್ಪು ಕಲೆಯನ್ನು ತೊಡೆದುಹಾಕಲು ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ

ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸುವ  ಇನ್ನೊಂದು ವಿಧಾನವಿದೆ.  ಕತ್ತರಿಸಬೇಕಾದ ಈರುಳ್ಳಿಯನ್ನು ಸ್ವಲ ನೀರಲ್ಲಿ (water) ನೆನೆ ಹಾಕಿ. ನಂತರ ತೆಗೆದು ಕಟ್ ಮಾಡಿ. ಆದರೆ ಈರುಳ್ಳಿಯನ್ನು ಫ್ರೀಜರಿನಲ್ಲಿಟ್ಟು (fridge) ಕಟ್ ಮಾಡುವುದು ಸೂಕ್ತ ವಿಧಾನ ಎಂದು ಅಡುಗೆಭಟ್ಟರು ಹೇಳುತ್ತಾರೆ. 

 ನೀವು ಕೂಡಾ ಮನೆಯ ಫ್ರಿಜ್ ನಲ್ಲಿ ಈರುಳ್ಳಿ ಇಟ್ಟು ಕಟ್ ಮಾಡುವ ಅಭ್ಯಾಸ  ಇಟ್ಟುಕೊಳ್ಳಿ.  ನೆನಪಿಡಿ. ಯಾವ ಹ್ಯಾಕ್ ಕೂಡಾ ನೂರಕ್ಕೆ ನೂರು ಪರಿಪೂರ್ಣವಲ್ಲ. ಸ್ವಲ್ಪ ಮಟ್ಟಿಗೆ ನಿಮಗೆ ನೆರವಾಗಬಲ್ಲದು.

ಇದನ್ನೂ ಓದಿ : Kesar kulfi recipe : ಮನೆಯಲ್ಲೇ ಮಾಡಿ ಕೇಸರಿ ಕುಲ್ಫಿ, ತುಂಬಾ ಸಿಂಪಲ್, ಮಕ್ಕಳಿಗೂ ಇಷ್ಟ ಆಗುತ್ತೆ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News