Phalguna Amavasya 2022: ಮನೆಯ ಸಂತೋಷ ಮತ್ತು ಶಾಂತಿಗಾಗಿ ಫಾಲ್ಗುಣ ಅಮವಾಸ್ಯೆಯಂದು ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿ ಫಾಲ್ಗುಣ ಅಮಾವಾಸ್ಯೆ ಮಾರ್ಚ್ 2ರ ಬುಧವಾರ ಬಂದಿದೆ. ಪಂಚಾಂಗದ ಪ್ರಕಾರ ಈ ಬಾರಿ ಫಾಲ್ಗುಣ ಅಮಾವಾಸ್ಯೆ(Falgun Amavasya 2022)ಯಂದು ಶಿವ ಮತ್ತು ಸಿದ್ಧಿಯ ಮೊತ್ತವು ರೂಪುಗೊಳ್ಳುತ್ತಿದೆ. ಈ ಎರಡು ವಿಶೇಷ ಯೋಗಗಳಲ್ಲಿ ಮಾಡುವ ಪೂಜೆಯು ದ್ವಿಗುಣ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಪೂರ್ವಜರ ಆತ್ಮಕ್ಕೆ ತರ್ಪಣವನ್ನು ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಫಾಲ್ಗುಣ ಅಮಾವಾಸ್ಯೆಯ ಶುಭ ಮುಹೂರ್ತ ಯಾವುದು ಮತ್ತು ಈ ದಿನ ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಯುವುದು ಮುಖ್ಯ.
ಫಾಲ್ಗುನ ಅಮಾವಾಸ್ಯೆ ಶುಭ ಮುಹೂರ್ತ (Falgun Amavasya 2022 Shubh Muhurat)


COMMERCIAL BREAK
SCROLL TO CONTINUE READING

ಪಂಚಾಂಗದ ಪ್ರಕಾರ ಫಾಲ್ಗುಣ ಅಮಾವಾಸ್ಯೆಯ ಆರಂಭವು ಮಾರ್ಚ್ 2ರ ಮಧ್ಯಾಹ್ನ 1.30 ರಿಂದ ಪ್ರಾರಂಭವಾಗುತ್ತದೆ. ಈ ವೇಳೆಗೆ ಮಹಾಶಿವರಾತ್ರಿ ಮುಗಿಯಲಿದೆ. ಮತ್ತೊಂದೆಡೆ ಫಾಲ್ಗುಣ ಅಮಾವಾಸ್ಯೆ ತಿಥಿ ಮಾರ್ಚ್ 2ರಂದು ರಾತ್ರಿ 11:04ಕ್ಕೆ ಕೊನೆಗೊಳ್ಳಲಿದೆ. ಉದಯ ತಿಥಿಯ ಪ್ರಕಾರ ಮಾರ್ಚ್ 2ರಂದು ಫಾಲ್ಗುಣ ಅಮವಾಸ್ಯೆಯ ಉಪವಾಸ(Falgun Amavasya Puja Vidhi)ವನ್ನು ಆಚರಿಸಲಾಗುತ್ತದೆ.


ಇದನ್ನೂ ಓದಿ: Vijaya Ekadashi 2022 : ಇಂದು ಬಹಳ ವಿಶೇಷವಾದ ದಿನ : ಆದ್ರೆ, ಅಪ್ಪಿತಪ್ಪಿ ಈ ತಪ್ಪುಗಳನ್ನು ಮಾಡಬೇಡಿ!


ಫಾಲ್ಗುಣ ಅಮವಾಸ್ಯೆಯಂದು ಏನು ಮಾಡಬಾರದು?


  • ಫಾಲ್ಗುಣ ಅಮಾವಾಸ್ಯೆಯ ದಿನ ಹಗಲಿನಲ್ಲಿ ಅಪ್ಪಿತಪ್ಪಿಯೂ ಮಲಗಬಾರದು. ಹಾಗೆಯೇ ಹೆಚ್ಚು ಹೊತ್ತು ಕೂಡ ಈ ನಿದ್ರೆ ಮಾಡಬಾರದು, ಸೂರ್ಯೋದಯಕ್ಕೆ ಮುನ್ನವೇ ಏಳಬೇಕು.

  • ಈ ದಿನ ಮನೆಯಲ್ಲಿ ತಾಮಸಿಕ ಆಹಾರವನ್ನು ತಯಾರಿಸಬಾರದು. ಅಲ್ಲದೆ ಬೆಳ್ಳುಳ್ಳಿ, ಈರುಳ್ಳಿ, ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು. ಈ ದಿನ ಸಾತ್ವಿಕ ಆಹಾರವನ್ನು ಸೇವಿಸುವುದು ಒಳ್ಳೆಯದು.

  • ಫಾಲ್ಗುಣ ಅಮವಾಸ್ಯೆಯ ದಿನದಂದು ಉಪವಾಸ ಮಾಡುವವರು ಉಪ್ಪನ್ನು ಸೇವಿಸಬಾರದು. ಸಾಧ್ಯವಾದರೆ ಈ ದಿನ ಉಪವಾಸ ಮಾಡುವುದು ಒಳಿತು. ಇದರೊಂದಿಗೆ ಮನೆಯಲ್ಲಿ ಕತ್ತಲೆ ಇರಬಾರದು. ವಿಶೇಷವಾಗಿ ಸಂಜೆ ಮನೆಯನ್ನು ಬೆಳಗಿಸಲು ಮರೆಯದಿರಿ.

  • ಈ ದಿನ ಮನೆಗೆ ಬರುವ ಯಾವುದೇ ವ್ಯಕ್ತಿಯನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ಅಮವಾಸ್ಯೆಯ ದಿನದಂದು ದಾನ ಮಾಡುವುದು ಒಳ್ಳೆಯದು. ಇದಲ್ಲದೇ ಈ ದಿನದಂದು ಪೂರ್ವಜರಿಗೆ ತರ್ಪಣವನ್ನು ಮಾಡಬೇಕು.  

  • ಫಾಲ್ಗುಣ ಅಮಾವಾಸ್ಯೆ(Phalguna Amavasya)ಯ ದಿನದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಬಳಸಬಾರದು. ತಿಳಿ ಬಣ್ಣದ ಶುಭ್ರವಾದ ಬಟ್ಟೆಗಳನ್ನೇ ಧರಿಸಬೇಕು. ಇದಲ್ಲದೇ ಅಮವಾಸ್ಯೆಯ ದಿನ ಕೋಪಗೊಳ್ಳುವುದನ್ನು ತಪ್ಪಿಸಬೇಕು. ಅಲ್ಲದೆ ಬ್ರಹ್ಮಚರ್ಯವನ್ನು ಅನುಸರಿಸಬೇಕು.


ಇದನ್ನೂ ಓದಿ: ಮಹಾಶಿವರಾತ್ರಿ: ಭಕ್ತಿಯಿಂದ ಈ ಕೆಲಸ ಮಾಡಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.