ನವದೆಹಲಿ: ಭಾರತೀಯ ವಾಸ್ತು ಶಾಸ್ತ್ರವು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುವ ಮಾರ್ಗಗಳನ್ನು ವಿವರಿಸುತ್ತದೆ. ಅದೇ ರೀತಿ ಚೀನಾದ ವಾಸ್ತು ಶಾಸ್ತ್ರ ಫೆಂಗ್ ಶೂಯಿ(Feng Shui)ಯಲ್ಲಿ ಹಣ ಪಡೆಯುವ ಮತ್ತು ಪ್ರಗತಿಯ ಮಾರ್ಗಗಳನ್ನು ಹೇಳಲಾಗಿದೆ. ಸಾಮಾನ್ಯವಾಗಿ ಫೆಂಗ್ ಶೂಯಿ ಹೆಸರು ಬಂದ ತಕ್ಷಣ ನೆನಪಿಗೆ ಬರುವುದು ಆಮೆ, ಲಾಫಿಂಗ್ ಬುದ್ಧ, ಕ್ರಿಸ್ಟಲ್. ಆದರೆ ಆಮೆ(Tortoise)ಯನ್ನು ಹೊರತುಪಡಿಸಿ ಫೆಂಗ್ ಶೂಯಿಯಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾದ ಮತ್ತೊಂದು ಪ್ರಾಣಿ ಇದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಪ್ರಯೋಜನಗಳನ್ನು ಪಡೆಯುವಲ್ಲಿ ಈ ಪ್ರಾಣಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ದೇವಿ ದೇವತೆಗಳನ್ನು ಪೂಜಿಸಬೇಡಿ, ಜೀವನ ಪೂರ್ತಿ ಎದುರಿಸಬೇಕಾಗುತ್ತದೆ ಸಮಸ್ಯೆ


ಒಂಟೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ


ಫೆಂಗ್ ಶೂಯಿಯಲ್ಲಿ ಆಮೆಯಂತೆ ಒಂಟೆ(Camel Statue)ಯನ್ನು ಸಹ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಇದು ಆರ್ಥಿಕ ಲಾಭಗಳಿಗೆ, ವ್ಯಾಪಾರವನ್ನು ಹೆಚ್ಚಿಸಲು ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಕೆಲಸದ ಸ್ಥಳದಲ್ಲಿ ಒಂಟೆಯ ಪ್ರತಿಮೆಯನ್ನು ಇಟ್ಟ ತಕ್ಷಣ, ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವ್ಯಾಪಾರ ಸ್ಥಳದಲ್ಲಿ ಒಂಟೆಯ ಪ್ರತಿಮೆ ಇರಿಸಿದರೆ ಉದ್ಯೋಗಿಗಳ ಉತ್ಪಾದಕತೆ ಹೆಚ್ಚಾಗುತ್ತದೆ. ಮತ್ತೊಂದೆಡೆ ಕಚೇರಿಯಲ್ಲಿ ನಿಮ್ಮ ಮೇಜಿನ ಮೇಲೆ ಒಂಟೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದು ಅಥವಾ ಮನೆಯಲ್ಲಿ ಅಧ್ಯಯನ ಮಾಡುವುದು ವೃತ್ತಿಜೀವನದಲ್ಲಿ ಯಶಸ್ಸನ್ನು ನೀಡುತ್ತದೆ.


ಇದನ್ನೂ ಓದಿ: ಈ 4 ರಾಶಿಯ ಜನರು ತುಂಬಾ ಹಠಮಾರಿಗಳು, ಅವರನ್ನು ಗೆಲ್ಲುವುದು ಸುಲಭದ ಮಾತಲ್ಲ


ಆದಾಯ ಹೆಚ್ಚಿಸುತ್ತದೆ, ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುತ್ತದೆ


ಫೆಂಗ್ ಶೂಯಿ ಪ್ರಕಾರ ಒಂಟೆ ವಿಗ್ರಹ(Camel Statue)ವನ್ನು ಇಟ್ಟುಕೊಳ್ಳುವುದು ಕೆಲಸದ ಮೇಲೆ ಗಮನವನ್ನು ಹೆಚ್ಚಿಸುತ್ತದೆ ಮತ್ತು ವೃತ್ತಿಜೀವನವನ್ನು ಸುಧಾರಿಸುತ್ತದೆ. ಮತ್ತೊಂದೆಡೆ ಮನೆಯಲ್ಲಿ ಒಂದು ಜೋಡಿ ಒಂಟೆಗಳನ್ನು ಇಟ್ಟುಕೊಳ್ಳುವುದು ಆದಾಯವನ್ನು ಹೆಚ್ಚಿಸುತ್ತದೆ, ಆರ್ಥಿಕ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಹಣದ ಹರಿವನ್ನು ಹೆಚ್ಚಿಸಲು ಮನೆಯ ವಾಯುವ್ಯ ದಿಕ್ಕಿನಲ್ಲಿ ಜೋಡಿ ಒಂಟೆಗಳ ಚಿತ್ರ ಅಥವಾ ವಿಗ್ರಹವನ್ನು ಇಡುವುದು ಉತ್ತಮ. ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಸಹ ತರುತ್ತದೆ. ಮನೆಯ ಸದಸ್ಯರ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.