2022ರ unlucky ರಾಶಿಗಳಿವು ಯಾವ ಕೆಲಸ ಮಾಡಿದರೂ ಕೈಗೂಡುವುದೇ ಇಲ್ಲ

ಹೊಸ ವರ್ಷವು ಕೆಲವರ ಪಾಲಿಗೆ ಸಂತೋಷವನ್ನು ಹೊತ್ತು ತಂದರೆ, ಇನ್ನು ಕೆಲವರ ಅನೇಕ ಭರವಸೆಗಳನ್ನು ಹಾಳು ಮಾಡಬಹುದು.

Written by - Ranjitha R K | Last Updated : Dec 28, 2021, 09:10 AM IST
  • 5 ರಾಶಿಯ ಜನರು 2022 ರಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು
  • ಆರೋಗ್ಯ, ಹಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿರುತ್ತವೆ
  • ಎಚ್ಚರಿಕೆಯಿಂದ ಇರುವುದು ಉತ್ತಮ
2022ರ unlucky ರಾಶಿಗಳಿವು ಯಾವ ಕೆಲಸ ಮಾಡಿದರೂ ಕೈಗೂಡುವುದೇ ಇಲ್ಲ  title=
5 ರಾಶಿಯ ಜನರು 2022 ರಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು (file photo)

ನವದೆಹಲಿ : 2022 ವರ್ಷ ಪ್ರಾರಂಭವಾಗಲು ಇನ್ನೇನು ಕೇವಲ 3 ದಿನಗಳು ಮಾತ್ರ ಉಳಿದಿವೆ. ಹೊಸ ವರ್ಷದ ಸ್ವಾಗತಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷವು ಕೆಲವರ ಪಾಲಿಗೆ ಸಂತೋಷವನ್ನು ಹೊತ್ತು ತಂದರೆ, ಇನ್ನು ಕೆಲವರ ಅನೇಕ ಭರವಸೆಗಳನ್ನು ಹಾಳು ಮಾಡಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಿತಿಗಳು 5 ರಾಶಿಚಕ್ರ ಚಿಹ್ನೆಗಳ ಜನರಿಗೆ ಅಶುಭವೆಂದು ಹೇಳುತ್ತದೆ. 

ಮೇಷ ರಾಶಿ : ಮೇಷ ರಾಶಿಯ  (Aries) ಜನರ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಾಣಬಹುದು. ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರೋಗ್ಯ ಸಮಸ್ಯೆಗಳನ್ನು  ಎದುರಿಸಬೇಕಾಗಬಹುದು.  ವರ್ಷದ ಉಳಿದ ಭಾಗದಲ್ಲೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. 

ಇದನ್ನೂ ಓದಿ : New Year: ಜನವರಿ 1ರಂದು ವಿಶೇಷ ಸಂಯೋಗ, 2022ರ ಮೊದಲ ದಿನ ಈ ಕೆಲಸ ಮಾಡಿ ಶನಿ-ಶಿವನ ಕೃಪೆಗೆ ಪಾತ್ರರಾಗಿ

ಮಿಥುನ ರಾಶಿ : ಮಿಥುನ ರಾಶಿಯ (Gemini) ಜನರು ವರ್ಷದ ಮೊದಲ ಭಾಗದಲ್ಲಿ ತಮ್ಮ ವೃತ್ತಿಜೀವನದಲ್ಲಿ ನಷ್ಟವನ್ನು ಅನುಭವಿಸುತ್ತಾರೆ. ನಂತರದ ಭಾಗದಲ್ಲಿ ಲಾಭ ಪಡೆಯುತ್ತಾರೆ. ಹಣ ನಷ್ಟವಾಗುವ ಸಂಭವವಿದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದ ಬಗ್ಗೆ ಜಾಗರೂಕರಾಗಿರಿ. ಆರೋಗ್ಯ ಸಂಬಂಧಿ ಸಮಸ್ಯೆಗಳು ಕೂಡಾ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು

ಕರ್ಕಾಟಕ ರಾಶಿ  : 2022 ಕರ್ಕಾಟಕ ರಾಶಿಯ (Cancer) ಜನರಿಗೆ ಸವಾಲಾಗಿರಬಹುದು. ಏಪ್ರಿಲ್‌ನಲ್ಲಿ ಶನಿಯ ರಾಶಿ (Shani deva) ಬದಲಾವಣೆಯು ಇವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಹಣಕಾಸಿನ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಒಳ್ಳೆಯ ಸಮಯಕ್ಕಾಗಿ ತಾಳ್ಮೆಯಿಂದ ಕಾಯುವುದು ಜಾಣತನ. 

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ (Virgo) 2022 ರ ವರ್ಷವು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ನಿರ್ಲಕ್ಷಿಸಬೇಡಿ. ಜೀವನದ ವಿವಿಧ ರಂಗಗಳಲ್ಲಿ ಸಣ್ಣ ಮತ್ತು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : ಈ 3 ರಾಶಿಗಳ ಅದೃಷ್ಟ 2 ದಿನಗಳ ನಂತರ ಬದಲಾಗಲಿದೆ: ಬಡ್ತಿಯೊಂದಿಗೆ ಧನಲಾಭವಿದೆ

ಧನು ರಾಶಿ : ಈ ವರ್ಷ ಧನು ರಾಶಿಯವರ (Sagittarius) ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಮಾತನಾಡುವಾಗ ಜಾಗರೂಕತೆ ವಹಿಸುವುದು ಅಗತ್ಯ. ಇಲ್ಲವಾದರೆ ಜೀವನದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಕುಟುಂಬದಲ್ಲಿ ಯಾರೊಂದಿಗೂ ಕಹಿಯಾಗಿ ಮಾತನಾಡದಿರುವುದು ಉತ್ತಮ. ವಿಶೇಷವಾಗಿ ಜೀವನ ಸಂಗಾತಿಯೊಂದಿಗೆ, ಈ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News