ಮನೆಯಲ್ಲಿ ತಪ್ಪಿಯೂ ಈ ದೇವಿ ದೇವತೆಗಳನ್ನು ಪೂಜಿಸಬೇಡಿ, ಜೀವನ ಪೂರ್ತಿ ಎದುರಿಸಬೇಕಾಗುತ್ತದೆ ಸಮಸ್ಯೆ

ಮನೆಯಾಗಿರಲಿ, ದೇವಸ್ಥಾನವಿರಲಿ ಮೂರ್ತಿ ಪೂಜೆಯಲ್ಲಿ ಹಲವು ರೀತಿಯ ನಿಯಮಗಳನ್ನು ಪಾಲಿಸುವುದು ಅಗತ್ಯ. 

Written by - Ranjitha R K | Last Updated : Dec 28, 2021, 02:47 PM IST
  • ದೇವತೆಗಳನ್ನು ಪೂಜಿಸುವ ವೇಳೆ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ.
  • ದೇವಸ್ಥಾನವಿರಲಿ ಮೂರ್ತಿ ಪೂಜೆಯಲ್ಲಿ ಹಲವು ರೀತಿಯ ನಿಯಮಗಳನ್ನು ಪಾಲಿಸುವುದು ಅಗತ್ಯ.
  • ಕೆಲವು ದೇವತೆಗಳ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಬಾರದು.
ಮನೆಯಲ್ಲಿ ತಪ್ಪಿಯೂ ಈ ದೇವಿ ದೇವತೆಗಳನ್ನು ಪೂಜಿಸಬೇಡಿ, ಜೀವನ ಪೂರ್ತಿ ಎದುರಿಸಬೇಕಾಗುತ್ತದೆ ಸಮಸ್ಯೆ  title=
ದೇವತೆಗಳನ್ನು ಪೂಜಿಸುವ ವೇಳೆ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ (file photo)

ನವದೆಹಲಿ : ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ದೇವತೆಗಳನ್ನು ಪೂಜಿಸುವ ವೇಳೆ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹ ಪೂಜಿಸುವ ಬಗ್ಗೆ ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ಧರ್ಮಗ್ರಂಥಗಳಲ್ಲಿ ನೀಡಲಾಗಿದೆ. ಮನೆಯಾಗಿರಲಿ, ದೇವಸ್ಥಾನವಿರಲಿ ಮೂರ್ತಿ ಪೂಜೆಯಲ್ಲಿ ಹಲವು ರೀತಿಯ ನಿಯಮಗಳನ್ನು (Worship Method In Home) ಪಾಲಿಸುವುದು ಅಗತ್ಯ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ದೇವತೆಗಳ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಬಾರದು. ಕೆಲವರು ಕಡಿಮೆ ತಿಳುವಳಿಕೆಯ ಕಾರಣದಿಂದ ಈ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅನೇಕ ರೀತಿಯ ನಷ್ಟವನ್ನು ಎದುರಿಸಬೇಕಾಗುತ್ತದೆ. 

ಕಾಳಿ ದೇವಿ (Goddess Kali) : 
ಧರ್ಮಗ್ರಂಥಗಳಲ್ಲಿ, ಕಾಳಿ ಮಾತೆಯನ್ನು (Goddess Kali) ಭಗವತಿಯ ರುದ್ರ ರೂಪವೆಂದು ಪರಿಗಣಿಸಲಾಗಿದೆ. ರಾಕ್ಷಸರ ದಮನಕ್ಕೆ ಕಾಳಿ ಮಾತೆಯ ರುದ್ರನ ರೂಪವನ್ನು ತೆಗೆದುಕೊಂಡಳು ಎಂದು ಹೇಳಲಾಗುತ್ತದೆ. ಶಿವನು (Lord Shiva) ಕಾಳಿ ಮಾತೆಯ ಕೋಪವನ್ನು ಶಮನಗೊಳಿಸಿದ ನಂತರ ಮಾತೆಯ ವಿಗ್ರಹವನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಕಾಳಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬಾರದು. 

ಇದನ್ನೂ ಓದಿ : 2022ರ unlucky ರಾಶಿಗಳಿವು ಯಾವ ಕೆಲಸ ಮಾಡಿದರೂ ಕೈಗೂಡುವುದೇ ಇಲ್ಲ

ಬಾಬಾ ಭೈರವ್ (Bhairav) :
ಭೈರವ ಬಾಬಾನ  (Bhairav)  ವಿಗ್ರಹವನ್ನು ಸಹ ಮನೆಯಲ್ಲಿ ಪ್ರತಿಷ್ಠಾಪಿಸಬಾರದು. ಧಾರ್ಮಿಕ ಗ್ರಂಥಗಳ ಪ್ರಕಾರ, ಭೈರವ ದೇವನು ಶಿವನ ಕೋಪದಿಂದ ಜನಿಸಿದವನು. ಭೈರವನ ಮೂರ್ತಿಯನ್ನು ಮನೆಯಲ್ಲಿ ಪೂಜಿಸದಿರಲು ಇದೇ ಕಾರಣ. ಭೈರವನ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಕ್ಲೇಶದ ವಾತಾವರಣ ಉಂಟಾಗುತ್ತದೆ ಎನ್ನಲಾಗಿದೆ. ಸಂತೋಷ ಮತ್ತು ಶಾಂತಿ ಮನೆಯಿಂದ ದೂರ ಉಳಿಯುತ್ತದೆ.   

ಶನಿ ದೇವ  (Shani Dev) :
ಅಂದಹಾಗೆ, ಶನಿದೇವನ (Shani Dev) ಸರಿಯಾದ ಆರಾಧನೆಯು ಹಾನಿ ಮಾಡುವುದಿಲ್ಲ. ಆದರೆ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಶನಿದೇವನ ವಿಗ್ರಹವನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ಶನಿದೇವನನ್ನು ಪೂಜಿಸುವಾಗ ಆತನನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಹಾಗೆ ಮಾಡುವುದರಿಂದ ಹಾನಿಯಾಗುತ್ತದೆ. 

ಇದನ್ನೂ ಓದಿ : New Year: ಜನವರಿ 1ರಂದು ವಿಶೇಷ ಸಂಯೋಗ, 2022ರ ಮೊದಲ ದಿನ ಈ ಕೆಲಸ ಮಾಡಿ ಶನಿ-ಶಿವನ ಕೃಪೆಗೆ ಪಾತ್ರರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News