ವೃತ್ತಿಜೀವನದಲ್ಲಿ ಯಶಸ್ಸು, ಆರ್ಥಿಕ ಪ್ರಗತಿಗಾಗಿ ಫೆಂಗ್ ಶೂಯಿ ಸಲಹೆಗಳು: ಭಾರತೀಯ ವಾಸ್ತು ಶಾಸ್ತ್ರದಂತೆ ಚೀನಾ ಕೂಡ ವಾಸ್ತು ಶಾಸ್ತ್ರವನ್ನು ಹೊಂದಿದೆ. ಚೀನೀ ವಾಸ್ತುಶಿಲ್ಪವನ್ನು ಫೆಂಗ್ ಶೂಯಿ ಎಂದು ಕರೆಯಲಾಗುತ್ತದೆ. ಫೆಂಗ್ ಶೂಯಿಯಲ್ಲಿ, ಮನೆ, ಕಚೇರಿ, ವ್ಯಾಪಾರ ಸ್ಥಳ ಸೇರಿದಂತೆ ಪ್ರತಿಯೊಂದು ಸ್ಥಳಕ್ಕೂ ಹಲವು ರೀತಿಯ ಪರಿಹಾರಗಳನ್ನು ನೀಡಲಾಗಿದೆ. ಇದರೊಂದಿಗೆ, ಫೆಂಗ್ ಶೂಯಿಯಲ್ಲಿ ಅದೃಷ್ಟವನ್ನು ತರುವ ವಸ್ತುಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳು ಮತ್ತು ಫೆಂಗ್ ಶೂಯಿ ವಸ್ತುಗಳ ಬಳಕೆಯಿಂದ, ವೃತ್ತಿಜೀವನದಲ್ಲಿ ತ್ವರಿತ ಪ್ರಗತಿ ಮತ್ತು ಹಣದ ಹರಿವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಆರ್ಥಿಕ ಪ್ರಗತಿಗಾಗಿ ಫೆಂಗ್ ಶೂಯಿ ಸಲಹೆಗಳು:
ಫೆಂಗ್ ಶೂಯಿ ಪ್ರಕಾರ, ನಿಮ್ಮ ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ ಕನ್ನಡಿಯನ್ನು ಇರಿಸುವುದು ತುಂಬಾ ಒಳ್ಳೆಯದು. ಇದರೊಂದಿಗೆ, ಹಣದ ಒಳಹರಿವು ವೇಗವಾಗಿ ಹೆಚ್ಚಾಗುತ್ತದೆ ಮತ್ತು ನೀವು ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ ಎಂಬ ನಂಬಿಕೆ ಇದೆ. 


ಇದನ್ನೂ ಓದಿ- ನಾಯಿ ಸಾಕುವುದರಿಂದ ದೂರವಾಗುತ್ತೆ ಈ ಮೂರು ಗ್ರಹಗಳ ದೋಷ


ಫೆಂಗ್ ಶೂಯಿ ಪ್ರಕಾರ, ನಿಮ್ಮ ವರ್ಕಿಂಗ್ ಟೇಬಲ್ ಮೇಲೆ ಸ್ಫಟಿಕವನ್ನು ನೇತುಹಾಕಿ, ಇದನ್ನು ಮಾಡುವುದರಿಂದ ಅಲ್ಲಿರುವ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ. ಅಷ್ಟೇ ಅಲ್ಲ, ವೃತ್ತಿ ಜೀವನದಲ್ಲಿ ಪ್ರಗತಿಯೂ ಕಂಡು ಬರುತ್ತದೆ. 


ಫೆಂಗ್ ಶೂಯಿ ಪ್ರಕಾರ, ನೀವು ಕುಳಿತು ಕೆಲಸ ಮಾಡುವ ಸ್ಥಳದ ಹಿಂದೆ ಗೋಡೆಯ ಮೇಲೆ ಕುದುರೆ ಓಡುತ್ತಿರುವ ಚಿತ್ರವನ್ನು ಹಾಕಿ. ಆದರೆ ಕುದುರೆಗೆ ಕಡಿವಾಣವಿಲ್ಲದೆ ಇರಬೇಕು, ಹೀಗೆ ಮಾಡುವುದರಿಂದ ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ- ಈ ದಿನಾಂಕಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು, ನೀವು ಎಷ್ಟು Lucky ಇಲ್ಲಿ ತಿಳಿಯಿರಿ


ಫೆಂಗ್ ಶೂಯಿ ಪ್ರಕಾರ, ಹಣದ ಕೊರತೆಯಿದ್ದರೆ, ಮನೆಯಲ್ಲಿ ಬಿದಿರಿನ ಗಿಡವನ್ನು ನೆಡಿ. ಇದರಿಂದ ಹಣದ ಒಳಹರಿವು ಹೆಚ್ಚಾಗುತ್ತದೆ. 


ಅದೃಷ್ಟಕ್ಕಾಗಿ, ಮನೆಯ ಮುಖ್ಯ ಬಾಗಿಲು ಅಥವಾ ಬಾಲ್ಕನಿಯಲ್ಲಿ ಲೋಹದ ಅಥವಾ ಮರದ ವಿಂಡ್ ಚೈಮ್ ಅನ್ನು ಸ್ಥಾಪಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಂತೋಷವಿರುತ್ತದೆ ಮತ್ತು ಉದ್ಯೋಗ-ವ್ಯವಹಾರದಲ್ಲಿ ಶೀಘ್ರ ಯಶಸ್ಸು ದೊರೆಯುತ್ತದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.