ನಾಯಿ ಸಾಕುವುದರಿಂದ ದೂರವಾಗುತ್ತೆ ಈ ಮೂರು ಗ್ರಹಗಳ ದೋಷ

Shani-Rahu-Ketu Parihara: ಜಾತಕದಲ್ಲಿ ಗ್ರಹ ದೋಷಗಳು ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಅದರಲ್ಲೂ ಕರ್ಮಫಲ ದಾತ ಶನಿ, ಪಾಪ ಗ್ರಹಗಳೂ ಎಂದೇ ಕರೆಯಲ್ಪಡುವ ರಾಹು-ಕೇತು ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಇರುತ್ತದೆ. ಆದರೆ, ಒಂದು ಸಣ್ಣ ಕೆಲಸ ಮಾಡುವುದರಿಂದ ಈ ಮೂರೂ ಗ್ರಹಗಳ ದೋಷದಿಂದ ಪರಿಹಾರ ಪಡೆಯಬಹುದು. ಅಂತಹ ಪರಿಹಾರದ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ.

Written by - Yashaswini V | Last Updated : Aug 30, 2022, 09:42 AM IST
  • ಶನಿ ಮತ್ತು ರಾಹು, ಕೇತುಗಳನ್ನು ಶಾಂತಗೊಳಿಸಲು ಮನೆಯಲ್ಲಿ ನಾಯಿ ಸಾಕುವುದು ಉತ್ತಮ ಪರಿಹಾರ ಎಂದು ನಂಬಲಾಗಿದೆ.
  • ಅದರಲ್ಲೂ ಕಪ್ಪು ಬಣ್ಣದ ನಾಯಿ ಸಾಕುವುದು ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ.
  • ನಾಯಿಯನ್ನು ಸಾಕಲು ಶಕ್ತಿ ಇಲ್ಲದಿದ್ದರೆ ಈ ರೀತಿಯೂ ಗ್ರಹದೋಷದಿಂದ ಪರಿಹಾರ ಪಡೆಯಬಹುದು
ನಾಯಿ ಸಾಕುವುದರಿಂದ ದೂರವಾಗುತ್ತೆ ಈ ಮೂರು ಗ್ರಹಗಳ ದೋಷ  title=
Shani-Rahu-Ketu Parihara

ಶನಿ-ರಾಹು-ಕೇತು ಪರಿಹಾರ: ನವಗ್ರಹಗಳಲ್ಲಿ ಕೆಲವು ಗ್ರಹಗಳ ಹೆಸರನ್ನು ಕೇಳಿದರೆ ಸಾಕು ಜನರ ಮನಸ್ಸಿನಲ್ಲಿ ಒಂದು ರೀತಿಯ ಭಯದ ಭಾವನೆ ಕಾಡುತ್ತದೆ. ಅದರಲ್ಲೂ ಕರ್ಮಫಲ ದಾತ ಶನಿ, ಪಾಪ ಗ್ರಹಗಳೂ ಎಂದೇ ಕರೆಯಲ್ಪಡುವ ರಾಹು-ಕೇತು ಅಶುಭ ಸ್ಥಾನದಲ್ಲಿದ್ದರೆ ಜೀವನವೇ ಕಷ್ಟ ಎಂಬ ಮನಸ್ಥಿತಿ ಕೆಲವರದ್ದು.ಹಾಗಾಗಿಯೇ, ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಜಾತಕದಲ್ಲಿ ಶನಿ ದೋಷ ಅಥವಾ ರಾಹು-ಕೇತುಗಳಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೆ ಅದನ್ನು ತಕ್ಷಣವೇ ನಿವಾರಿಸಬೇಕು ಎಂದು ನಂಬುತ್ತಾರೆ. ಈ ಗ್ರಹಗಳು ಜೀವನದ ಗಳಿಕೆ, ಗೌರವ, ಸಂಬಂಧಗಳನ್ನು ಕ್ಷಣಮಾತ್ರದಲ್ಲಿ ಕೊನೆಗೊಳಿಸುವ ಶಕ್ತಿ ಹೊಂದಿವೆ ಎಂಬುದೇ ಇದಕ್ಕೆ ಮುಖ್ಯ ಕಾರಣ. 

ನಿಮ್ಮ ಜಾತಕದಲ್ಲೂ ಶನಿ-ರಾಹು-ಕೇತು ಗ್ರಹಗಳ ದೋಷವಿದ್ದರೆ ನೀವು ಈ ಗ್ರಹಗಳ ಶಾಂತಿ ಮಾಡಲು ಬಯಸಿದರೆ ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಒಂದೇ ಒಂದು ಸಣ್ಣ ಕೆಲಸ ಮಾದುವುದರಿಂದ ಈ ಗ್ರಹಗಳ ದೋಷದಿಂದ ಪರಿಹಾರ ಪಡೆಯಬಹುದು. 

ನಾಯಿ ಸಾಕುವುದರಿಂದ ದೂರವಾಗುತ್ತೆ ಈ ಮೂರು ಗ್ರಹಗಳ ದೋಷ :
ಶನಿ ಮತ್ತು ರಾಹು, ಕೇತುಗಳನ್ನು ಶಾಂತಗೊಳಿಸಲು ಮನೆಯಲ್ಲಿ ನಾಯಿ ಸಾಕುವುದು ಉತ್ತಮ ಪರಿಹಾರ ಎಂದು ನಂಬಲಾಗಿದೆ. ಅದರಲ್ಲೂ ಕಪ್ಪು ಬಣ್ಣದ ನಾಯಿ ಸಾಕುವುದು ಇನ್ನೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕಪ್ಪು ನಾಯಿ ಸಾಕುವುದು ಶನಿ ಮತ್ತು ರಾಹು, ಕೇತುಗಳನ್ನು ಶಾಂತಗೊಳಿಸಬಹುದು ಮತ್ತು ಉತ್ತಮ ಫಲಿತಾಂಶಗಳನ್ನು ಪದೆಯಬಹ್ದುದು. ಕಪ್ಪು ನಾಯಿಯು ಮನೆಯ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ಮತ್ತು ದುಷ್ಟ ಕಣ್ಣಿನಿಂದ ಮನೆಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- History of Ganesh Chaturthi: ದೇಶದೆಲ್ಲೆಡೆ ಗಣೇಶ ಚತುರ್ಥಿ ಬೆಳೆದು ಬಂದ ಬಗೆ...

ನಾಯಿಯನ್ನು ಸಾಕಲು ಶಕ್ತಿ ಇಲ್ಲದಿದ್ದರೆ ಈ ರೀತಿಯೂ ಗ್ರಹದೋಷದಿಂದ ಪರಿಹಾರ ಪಡೆಯಬಹುದು:
ಎಲ್ಲರಿಗೂ ನಾಯಿಯನ್ನು ಸಾಕಲು ಸಾಧ್ಯವಾಗುವುದಿಲ್ಲ. ಅಂತಹವರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಾಯಿಯನ್ನು ಸಾಕಲು ಶಕ್ತಿ ಇಲ್ಲದಿದ್ದರೆ ಹಸಿದ ನಾಯಿಗೆ, ಬೀದಿ ನಾಯಿಗೆ ಆಹಾರ ತಿನ್ನಿಸಿ. ಹಸಿದ ನಾಯಿಗಳಿಗೆ ಆಹಾರ ನೀಡಿ ಉಪಚರಿಸುವುದರಿಂದ ಶನಿದೇವನು ಸಂತುಷ್ಟನಾಗುತ್ತಾನೆ. ವಿಶೇಷವಾಗಿ ನಿಮ್ಮ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ಅಥವಾ ನಿಮ್ಮ ಜಾತಕದಲ್ಲಿ ಸಾಡೇ ಸಾತಿ ಶನಿ ಅಥವಾ ಶನಿ ಧೈಯಾ ನಡೆಯುತ್ತಿರುವವರು ನಾಯಿಗೆ ಆಹಾರ ನೀಡುವುದರಿಂದ ಪರಿಹಾರವನ್ನು ಪಡೆಯಬಹುದು. 

ಇದನ್ನೂ ಓದಿ- ಮಂಗಳ ಗೋಚಾರ: ಈ ರಾಶಿಯವರಿಗೆ ಅಕ್ಟೋಬರ್ 16ರವರೆಗೂ ರಾಜಯೋಗ 

ಇದಲ್ಲದೆ,  ನಾಯಿಯ ಸೇವೆ ಮಾಡುವುದರಿಂದ ಶನಿಯಿಂದ ಉಂಟಾಗುವ ತೊಂದರೆಗಳಿಂದ ಪರಿಹಾರ ಪಡೆಯುವುದು ಮಾತ್ರವಲ್ಲದೆ, ಕಾಲಭೈರವನೂ ಸಂತುಷ್ಟನಾಗುತ್ತಾನೆ. ಕಾಲಭೈರವನ ಕೃಪೆಯು ದೊಡ್ಡ ಬಿಕ್ಕಟ್ಟನ್ನು ತಪ್ಪಿಸುತ್ತದೆ. ಜೀವನದಲ್ಲಿ ಹಣದ ಕೊರತೆ ಇರುವವರು, ಸಂತಾನ ಸುಖವಿಲ್ಲದೇ ಇರುವವರು ಕಾಲ ಭೈರವನ ಕೃಪೆಗೆ ಪಾತ್ರರಾಗಲು ಈ ಪರಿಹಾರವನ್ನು ಕೈಗೊಳ್ಳಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News