ತೂಕ ನಷ್ಟಕ್ಕೆ ಮೆಂತ್ಯ ಚಹಾ: ಪ್ರಸ್ತುತ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಳ. ತೂಕ ಹೆಚ್ಚಳವು ದೇಹದ ಅಂದವನ್ನು ಕೆಡಿಸುವುದು ಮಾತ್ರವಲ್ಲ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನೂ ಸಹ ಹೆಚ್ಚಿಸುತ್ತದೆ. ಹಾಗಾಗಿ, ಉತ್ತಮ ಆರೋಗ್ಯಕ್ಕಾಗಿ ತೂಕವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಕೆಲವರು ತ್ವರಿತವಾಗಿ ತೂಕ ಕಳೆದುಕೊಳ್ಳಲು ಇಚ್ಚಿಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಕೆಲವು ಚಹಾಗಳು ನಿಮಗೆ ಪ್ರಯೊಜನಕಾರಿ ಎಂದು ಸಾಬೀತು ಪಡಿಸಬಹುದು. ಅವುಗಳಲ್ಲಿ ಮೆಂತ್ಯ ಚಹಾವೂ ಒಂದು.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಮೆಂತ್ಯವು ಆಂಟಾಸಿಡ್‌ಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಆಸಿಡ್ ರಿಫ್ಲೆಕ್ಸ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮೆಂತ್ಯ ಚಹಾವು ಹೊಟ್ಟೆಯ ಹುಣ್ಣುಗಳನ್ನು ತೊಡೆದುಹಾಕಲು ಸಹ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-  Pomegranate Benefits: ಬಿಪಿ ರೋಗಿಗಳಿಗೆ ವರದಾನ ದಾಳಿಂಬೆ.. ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಸಿಗುತ್ತೆ ಅದ್ಭುತ ಪ್ರಯೋಜನ


ಮೆಂತ್ಯ ಚಹಾವನ್ನು ತಯಾರಿಸುವುದು ಹೇಗೆ?
ಮೆಂತ್ಯ ಚಹಾ ತಯಾರಿಸಲು ಬೇಕಾಗಿರುವ ಪದಾರ್ಥಗಳು:-
ಮೆಂತ್ಯ ಪುಡಿ - 1 ಚಮಚ 
ನಿಂಬೆ ರಸ - ಅರ್ಧ ಓಳು
ಬಿಸಿ ನೀರು - ಒಂದು ಲೋಟ
ತುಳಸಿ ಎಲೆ- ಒಂದೆರಡು 
ಜೇನು ತುಪ್ಪ- 1 ಚಮಚ 


ತಯಾರಿಸುವ ವಿಧಾನ: 
ಮೆಂತ್ಯ ಚಹಾ ತಯಾರಿಸಲು ಮೊದಲಿಗೆ ಒಂದು ಚಮಚ ಮೆಂತ್ಯ ಪುಡಿಯನ್ನು ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಬೆರೆಸಿ. ಪಾನೀಯಕ್ಕೆ ನಿಂಬೆ ಸೇರಿಸಿ ಸವಿಯಿರಿ.


ಬೇಕಿದ್ದರೆ ರಾತ್ರಿ ಮೆಂತ್ಯವನ್ನು ನೆನೆಯಲು ಹಾಕಿ ಬೆಳಗ್ಗೆ ತುಳಸಿ ಎಲೆ ಹಾಕಿ ನೀರಿನಲ್ಲಿ ಕುದಿಸಿ. ಚಹಾವನ್ನು ಸೋಸಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ.


ಇದನ್ನೂ ಓದಿ- ನುಗ್ಗೆ ಸೊಪ್ಪಿನ ಸೇವನೆಯಿಂದ ಬಗೆಹರಿಯುತ್ತದೆ ಈ ಎಲ್ಲಾ ಸಮಸ್ಯೆಗಳು


ಮೆಂತ್ಯ ಚಹಾದಿಂದ ಸಕ್ಕರೆಯನ್ನು ನಿಯಂತ್ರಿಸಲಾಗುತ್ತದೆ:
ಮೆಂತ್ಯ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಇದನ್ನು ಬಳಸಬಹುದು. ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವುದನ್ನು ತಡೆಯುತ್ತದೆ. ನಿಮ್ಮ ಸಾಮಾನ್ಯ ಚಹಾ ಅಥವಾ ಕಾಫಿಯ ಬದಲಿಗೆ ನೀವು ಮೆಂತ್ಯ ಚಹಾವನ್ನು ಸೇರಿಸಿಕೊಳ್ಳಬಹುದು. 


ತೂಕ ಇಳಿಕೆಗೆ ಮೆಂತ್ಯ ಚಹಾ:
ಮೆಂತ್ಯದಲ್ಲಿ ನಾರಿನಂಶ ಹೇರಳವಾಗಿದ್ದು ಮಲಬದ್ಧತೆಗೆ ಪರಿಹಾರ ನೀಡುತ್ತದೆ. ಇದಲ್ಲದೇ ಮೆಂತ್ಯ ಚಹಾ ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ದೂರವಾಗುತ್ತದೆ. ಮೆಂತ್ಯವು ಅಂತಹ ಮಸಾಲೆಗಳಲ್ಲಿ ಒಂದಾಗಿದೆ, ಇದನ್ನು ನೀವು ತೂಕ ನಷ್ಟಕ್ಕೆ ಬಳಸಬಹುದು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಮತ್ತು ಫಿಟ್ ಆಗಿರಲು, ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಮೆಂತ್ಯ ಚಹಾವನ್ನು ಸೇರಿಸಿಕೊಳ್ಳಬೇಕು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.