ಬೆಂಗಳೂರು : Chanakya Niti for Couples: ಶ್ರೇಷ್ಠ ಅರ್ಥಶಾಸ್ತ್ರಜ್ಞ, ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ದಂಪತಿಗಳಿಗಾಗಿ ಅನೇಕ ವಿಷಯಗಳನ್ನು ಹೇಳಿದ್ದಾರೆ. ನೆಮ್ಮದಿಯ ದಾಂಪತ್ಯ ಜೀವನಕ್ಕಾಗಿ ಪತಿ-ಪತ್ನಿಯರು ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಪತಿ ಪತ್ನಿಯರಲ್ಲಿ ಯಾರಾದರೂ ಗಲಾಟೆ ಮಾಡಿಕೊಂಡರೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮನೆಯ ಶಾಂತಿ ಕದಡುತ್ತದೆ. ಚಾಣಕ್ಯ ನೀತಿಯಲ್ಲಿ ಹೇಳಲಾಗಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಪತಿ-ಪತ್ನಿಯರ ನಡುವಿನ  ಅಳವಡಿಸಿಕೊಂಡರೆ ಅವರ ನಡುವಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಗಂಡ ಮತ್ತು ಹೆಂಡತಿ  ಅನುಸರಿಸಬೇಕಾದ ಅಂಶಗಳು :  
ಪ್ರೀತಿ ಅಷ್ಟೇ ಅಲ್ಲ, ಗೌರವ ಕೂಡಾ ಮುಖ್ಯ : ಗಂಡ ಹೆಂಡತಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಬೇಕು. ಸಂಸಾರದಲ್ಲಿ ಪ್ರೀತಿ ಬಹಳ ಮುಖ್ಯ. ಆದರೆ ಪ್ರೀತಿಯಷ್ಟೇ ಪರಸ್ಪರ ಗೌರವಿಸುವುದು ಕೂಡಾ ಮುಖ್ಯ. ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಗೌರವವಿಲ್ಲದಿದ್ದರೆ, ದಂಪತಿ ಮಧ್ಯೆ ಬಿರುಕು ಮೂಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪರಸ್ಪರ ಗೌರವ ಪತಿ  ಪತ್ನಿಯರ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. 


ಇದನ್ನೂ ಓದಿ : ಶನಿ ಸಂಕ್ರಮಣದಿಂದ ಬದಲಾಗುತ್ತೆ ಈ ಮೂರು ರಾಶಿಗಳ ಭವಿಷ್ಯ!


ಅಹಂಕಾರ ಸಲ್ಲದು : ಅಹಂಕಾರ ಎನ್ನುವುದು ಪತಿ-ಪತ್ನಿಯರ ಸಂಬಂಧವನ್ನು ಹಾಳು ಮಾಡಿ ಬಿಡುತ್ತದೆ. ಪತಿ-ಪತ್ನಿಯರಿಬ್ಬರಿಗೂ ಸಮಾನ ಸ್ಥಾನಮಾನ ದೊರೆತು, ಇಬ್ಬರೂ ಪ್ರತಿಸ್ಪರ್ಧಿಗಳಾಗದೆ, ಒಟ್ಟಿಗೆ ಜೀವನದಲ್ಲಿ ಮುನ್ನಡೆದಾಗ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ಸಾಗುತ್ತದೆ. ಯಾವಾಗ ಮೇಲೂ ಕೀಳು ಎನ್ನುವ ಭಾವ ಮೂಡುತ್ತದೆಯೋ ಅಲ್ಲಿ ದಾಂಪತ್ಯ ಹಾಳಾಗುತ್ತದೆ.  


ತಾಳ್ಮೆ: ಪತಿ-ಪತ್ನಿ ಸುಖ-ದುಃಖದ ಸಂಗಾತಿಗಳು. ಜೀವನದ ಎಲ್ಲಾ ಏರಿಳಿತಗಳನ್ನು ಒಟ್ಟಿಗೆ ಎದುರಿಸುತ್ತಾರೆ. ಆದ್ದರಿಂದ ಜೀವನದಲ್ಲಿ ಏನೇ ಬರಲಿ ತಾಳ್ಮೆ ಕಳೆದುಕೊಳ್ಳಬಾರದು. ಜೀವನದಲ್ಲಿ ಕೆಟ್ಟ ಸ್ಥಿತಿ ಎದುರಾದಾಗ ತಾಳ್ಮೆ ಕಳೆದುಕೊಂಡರೆ  ಎಲ್ಲವೂ ಕೆಡುತ್ತದೆ. ತಾಳ್ಮೆ ಒಂದಿದ್ದರೆ ಎಂಥ ಪರಿಸ್ಥಿತಿ ಬಂದರೂ ಜಯಿಸಿಬಿಡಬಹುದು.  


ಇದನ್ನೂ ಓದಿ : ಕಲೆ ರಹಿತ ತ್ವಚೆಗಾಗಿ ನಿತ್ಯ ರಾತ್ರಿ ಮಲಗುವ ಮೊದಲು ಇದನ್ನು ಮುಖಕ್ಕೆ ಹಚ್ಚಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.