ಬೆಂಗಳೂರು : ಅಪಾರ ಸಂಪತ್ತಿನ ಒಡೆಯನಾಗಬೇಕು ಎಂಬ ಆಸೆ ಇದ್ದರೆ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವುದು ಬಹಳ ಮುಖ್ಯ. ಕೆಲವು ಹವ್ಯಾಸಗಳನ್ನು ಮೈಗೂಡಿಸಿಕೊಂಡರೆ  ಲಕ್ಷ್ಮೀ ಬಹಳ ಬೇಗ ದಯೆ ತೋರುತ್ತಾಳೆ (Lakshmi Blessings). ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ವಿದ್ವಾಂಸ ಆಚಾರ್ಯ ಚಾಣಕ್ಯರು ಲಕ್ಷ್ಮೀ ದೇವಿಯನ್ನು ಮೆಚ್ಚಿಸುವ ಬಗ್ಗೆ ಕೆಲವು ವಿಶೇಷ ಮಾರ್ಗಗಳನ್ನು ಹೇಳಿದ್ದಾರೆ (Chanakya Niti). ಅವುಗಳನ್ನು ಅನುಸರಿಸಿದರೆ, ವ್ಯಕ್ತಿಯು ಯಾವುದೇ ಅಡೆತಡೆಯಿಲ್ಲದೆ ಶ್ರೀಮಂತನಾಗಬಹುದು ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ವಿಷಯಗಳನ್ನು ಜೀವನದಲ್ಲಿ ತಕ್ಷಣ ಅಳವಡಿಸಿಕೊಳ್ಳಿ :
ವಿದ್ವಾಂಸರನ್ನು ಗೌರವಿಸಿ : ಆಚಾರ್ಯ ಚಾಣಕ್ಯರ ಪ್ರಕಾರ (Chanakya Niti), ಒಬ್ಬ ವ್ಯಕ್ತಿಯು ಜೀವನದಲ್ಲಿ ಶ್ರೀಮಂತರಾಗಲು ಮತ್ತು ಯಶಸ್ವಿಯಾಗಲು ಬಯಸಿದರೆ, ಯಾವಾಗಲೂ ವಿದ್ವಾಂಸರನ್ನು  ಗೌರವಿಸಬೇಕು. ಅವರನ್ನು ಆಲಿಸಬೇಕು ಮತ್ತು ಅನುಸರಿಸಬೇಕು. ಸಂತರು-ಮಹಾತ್ಮರು ಮತ್ತು ವಿದ್ವಾಂಸರನ್ನು ಅವಮಾನಿಸುವವರ ಮೇಲೆ ಲಕ್ಷ್ಮೀ (Godess Lakshmi)ಬೇಗನೇ ಕೋಪಗೊಳ್ಳುತ್ತಾಳೆ.


ಇದನ್ನೂ  ಓದಿ :  Vastu Shastra: ಅಪ್ಪಿತಪ್ಪಿಯೂ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ, ಇಲ್ಲವೇ ಆರ್ಥಿಕ ನಷ್ಟ


ಸಮಯವನ್ನು ಸದುಪಯೋಗಪಡಿಸಿಕೊಳ್ಳಿ: ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳದ  ಜನರು ತಮ್ಮ ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು  ಸಾಧ್ಯವಿಲ್ಲ. ಜೀವನದಲ್ಲಿ ಯಶಸ್ಸು ಇಲ್ಲ ಎಂದಾದರೆ, ಶ್ರೀಮಂತರಾಗುವುದು ಕೂಡಾ ಸಾಧ್ಯವಿಲ್ಲ (Chanakya Niti for Success).  


ಕೆಟ್ಟ ಸಹವಾಸದಿಂದ ದೂರವಿರಿ : ಅಮಲು, ಜೂಜಾಟದಂತಹ ಕೆಟ್ಟ ಅಭ್ಯಾಸಗಳನ್ನು ಹೊಂದಿರುವವರಿಂದ ದೂರವಿರಿ. ಕೆಟ್ಟ ಕೆಲಸ ಮಾಡುವವರನ್ನು ತಾಯಿ ಲಕ್ಷ್ಮೀ (Godess Lakshmi) ಎಂದಿಗೂ ಇಷ್ಟಪಡುವುದಿಲ್ಲ. ಕೆಟ್ಟ ಸಹವಾಸವಿರುವ ವ್ಯಕ್ತಿ ಎಷ್ಟೇ ಸಂಪತ್ತು ಹೊಂದಿದ್ದರೂ, ತನ್ನ ಸಹವಾಸದಿಂದ ಅದನ್ನು ಹಾಳು ಮಾಡಿಬಿಡುತ್ತಾರೆ.  


ಇದನ್ನೂ ಓದಿ :  ಈ ರಾಶಿಯವರ ಈ ಒಂದು ಅದ್ಭುತ ಗುಣದಿಂದ ಎದುರಿಗಿದ್ದವರ ಹೃದಯವನ್ನು ಸುಲಭವಾಗಿ ಗೆದ್ದು ಬಿಡುತ್ತಾರೆ


ಇತರರಿಗೆ ಕೆಟ್ಟದ್ದನ್ನು ಮಾಡಬೇಡಿ : ಇತರರಿಗೆ ಕೆಟ್ಟದ್ದನ್ನು ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕತೆ ತುಂಬುತ್ತದೆ. ಇತರರ ಬಗ್ಗೆ ಕೆಟ್ಟದಾಗಿ ಯೋಚಿಸುವವರು ತಮ್ಮ ಬಗ್ಗೆಯೂ ಕೆಟ್ಟದಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಅವರ ಈ ನಕಾರಾತ್ಮಕತೆಯು (Negetive)ಅವರನ್ನು ಯಶಸ್ವಿಯಾಗಲು ಅಥವಾ ಶ್ರೀಮಂತರಾಗಲು ಅನುಮತಿಸುವುದಿಲ್ಲ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.