ನವದೆಹಲಿ :  ತುಳಸಿ (Tulsi) ಎಂದರೆ ಪವಿತ್ರ. ಮನೆಯಂಗಳದಲ್ಲಿ ತುಳಸಿ ಇದ್ದರೆ ಆ ಮನೆಯಲ್ಲಿ ಸಂತೋಷ, ಶಾಂತಿ ನೆಲೆಯಾಗಿರುತ್ತದೆ. ತುಳಸೀಗೆ ನಿತ್ಯ ಪೂಜೆ ಸಲ್ಲಿಸಬೇಕು. ಆದರೆ ತುಳಸಿ ಪೂಜೆ (Tulsi pooja) ನಡೆಸಲು ಕೂಡಾ ನೀತಿ ನಿಯಮಗಳಿವೆ. ವಿಧಿವತ್ತಾಗಿ ತುಳಸಿಯನ್ನು ಪೂಜಿಸಿದರೆ ಮನಸ್ಸಿನ ಇಚ್ಛೆ ಈಡೇರುತ್ತದೆ. ತುಳಸಿಯಲ್ಲಿ ಔಷಧೀಯ ಗುಣಗಳಿವೆ. ಆಯುರ್ವೇದದಲ್ಲೂ ತುಳಸಿಗೆ ಪ್ರಾಮುಖ್ಯತೆ (Importance of Tulsi) ಇದೆ. 


COMMERCIAL BREAK
SCROLL TO CONTINUE READING

ಮನೆಯಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೆ, ತುಳಸಿ ಅದಕ್ಕೆ ಪರಿಹಾರ ನೀಡುತ್ತಾಳಂತೆ. ಆದರೆ ತುಳಸಿಯ ಕೃಪೆಗೆ ಪಾತ್ರವಾಗಬೇಕಾದಾರೆ ಏನು ಮಾಡಬೇಕು ಎನ್ನುವುದು ತಿಳಿದಿರಬೇಕು. ಹಾಗಿದ್ದರೆ ತುಳಸಿ ಪೂಜೆ ಹೇಗೆ ಮಾಡಬೇಕು ನೋಡೋಣ.. 


ಇದನ್ನೂ ಓದಿ : Tuesday: ಮಂಗಳವಾರದಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ


ತುಳಸಿ ಪೂಜೆ ವೆಳೆ ಈ ಕೆಳಗಿನ ವಿಚಾರಗಳು ನೆನಪಿರಲಿ : 
1.ಭಾನುವಾರ ತುಳಸಿಗೆ ನೀರು ಅರ್ಪಿಸುವ ಬದಲಿಗೆ ಹಾಲನ್ನು (Milk) ಅರ್ಪಿಸಬೇಕು. ತುಪ್ಪ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಲಕ್ಷ್ಮೀ (Godess Lakshmi) ನೆಲೆಯಾಗುತ್ತಾಳೆ ಎನ್ನುವುದು ನಂಬಿಕೆ.  
2.ಮನೆಯಲ್ಲಿ ವಾಸ್ತು ದೋಷವಿದ್ದರೆ (Vastu Dosha), ಮನೆಯ ಆಗ್ನೇಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡಬೇಕು. ಮತ್ತು ಆ ಗಿಡಕ್ಕೆ ನಿತ್ಯವೂ ನೀರು ಹಾಕುತ್ತಿರಬೇಕು. ತುಪ್ಪ ದೀಪವನ್ನು ಕೂಡಾ ಬೆಳಗಿಸಬೇಕು.


ಇದನ್ನೂ ಓದಿ : Age Line : ಕೈಯಲ್ಲಿರುವ ಆಯುಷ ರೇಖೆಯ ಜೊತೆಗೆ, ವಯಸ್ಸನ್ನು ತಿಳಿಯುವುದು ಹೇಗೆ? ಇಲ್ಲಿದೆ ನೋಡಿ


3.ಮನೆ ಮಗಳ ಮದುವೆ ವಿಳಂಬವಾಗುತ್ತಿದ್ದರೆ, ನಿತ್ಯವೂ ತುಳಸಿ ಗಿಡಕ್ಕೆ (Tusli Plant) ನೀರು ಹಾಕುವ ಕಾರ್ಯ ಆರಂಭಿಸಿ. ನೀರು ಹಾಕಿದ ಮೇಲೆ ತುಳಸಿ ಮಾತೆಯ ಬಳಿ ತನ್ನ ಮನಸ್ಸಿನ ಇಚ್ಛೆಯನ್ನು ಹೇಳಿಕೊಳ್ಳಬೇಕಂತೆ.  


4.ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸುತ್ತಿದ್ದರೆ, ಪ್ರತಿ ಶುಕ್ರವಾರ ತುಳಸಿಗೆ (Tulsi) ಹಸಿ ಹಾಳನ್ನು ಅರ್ಪಿಸಬೇಕು. ನಂತರ ಏನಾದರೂ ಸಿಹಿ ಮಾಡಿ ಪ್ರಸಾದ ಅರ್ಪಿಸಬೇಕು. ಈ ಪ್ರಸಾದವನ್ನು ಮಜುತ್ತೈದೆಯರಿಗೆ ಹಂಚಬೇಕು. 


5.ಹಿತ್ತಾಳೆಯ ಲೋಟದಲ್ಲಿ ನೀರು (water) ತೆಗೆದುಕೊಳ್ಳಿ. ಅದಕ್ಕೆ  ತುಳಸಿಯ 4 ಅಥವಾ 5 ಎಲೆಗಳನ್ನುಹಾಕಿ. 24 ಗಂಟೆಗಳ ಕಾಲ ನೀರನ್ನು ಹಾಗೇ ಇಡಿ. ಮಾರನೇಯ ದಿನ ಸ್ನಾನ ಮುಗಿಸಿದ ನಂತರ  ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿ. ಹೀಗೆ ಮಾಡಿದರಾಶಯಗಳು ಈಡೇರುತ್ತದೆಯಂತೆ.  


ಇದನ್ನೂ ಓದಿ : ಜುಲೈನಲ್ಲಿ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದಾಳೆ ಮಹಾಲಕ್ಷ್ಮೀ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.