ನವದೆಹಲಿ : Daily Routine Tips for Happiness : ನಮ್ಮ ದಿನದ ಆರಂಭ ಚೆನ್ನಾಗಿದ್ದರೆ ಇಡೀ ದಿನ ಉಲ್ಲಾಸಭರಿತವಾಗಿರುತ್ತದೆ. ಹಾಗಾಗಿ ದಿನದ ಆರಂಭವನ್ನು ಯಾವಾಗಲೂ ಉತ್ತಮವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಹಾಗೆ ಆಗಬೇಕಾದರೆ ನಮ್ಮಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ (tips for happiness). ಜೀವನದಲ್ಲಿ ಶಾಂತಿ ಇರುತ್ತದೆ. ಯಾವಾಗಲೂ ಸೂರ್ಯೋದಯಕ್ಕೂ ಮುನ್ನವೇ ಏಳುವ ಅಭ್ಯಾಸ ಮಾಡಿಕೊಳ್ಳಿ. ಬ್ರಾಹ್ಮೀ ಮುಹೂರ್ತದಲ್ಲಿ ಸೂರ್ಯದೇವನ ದರ್ಶನ ಮಾಡಲು ಪ್ರಯತ್ನಿಸಿ.
ಇದರೊಂದಿಗೆ, ಇನ್ನೂ ಅನೇಕ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಜೀವನ ಸುಖ ಸಮೃದ್ಧಿಯಿಂದ ಕೂಡಿರುವಂತೆ ಮಾಡಬಹುದು. ಅದು ಹೇಗೆ ನೋಡೋಣ..
ಇದನ್ನೂ ಓದಿ : Avoid Doing These Works On Sunday: ಭಾನುವಾರ ಈ ಕೆಲಸ ಮಾಡುವುದರಿಂದ ದೂರವಿರಿ
1. ಬೆಳಿಗ್ಗೆ ಎದ್ದು ಅಂಗೈ ನೋಡಿದರೆ ಮಹಾಲಕ್ಷ್ಮಿ (Godess lakshmi), ಸರಸ್ವತಿ ಮತ್ತು ವಿಷ್ಣುವಿನ (Lord Vishnu) ಆಶೀರ್ವಾದ ಸಿಗುತ್ತದೆಯಂತೆ. ನಮ್ಮ ಅಂಗೈಯಲ್ಲಿ ಈ ದೇವತೆಗಳು ನೆಲೆಯಾಗಿರುತ್ತಾರೆ ಎನ್ನುವುದು ನಂಬಿಕೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಅಂಗೈ ದರ್ಶನ ಮಾಡಿದರೆ ಈ ದೇವತೆಗಳ ದರ್ಶನ ಮಾಡಿದ ಪುಣ್ಯವೇ ಪ್ರಾಪ್ತಿಯಾಗುತ್ತದೆಯಂತೆ.
2. ಹಾಸಿಗೆಯಿಂದ ನೆಲಕ್ಕೆ ಕಾಲಿಡುವ ಮೊದಲು ತಲೆಬಾಗಿ ಭೂಮಿಗೆ ನಮಸ್ಕರಿಸಬೇಕು. ಯಾಕಂದರೆ ನಾವು ನಡೆದಾಡುವಾಗ ದಿನವಿಡೀ ಭೂಮಿ ತಾಯಿಯ ಮೇಲೆ ನಮ್ಮ ಪಾದವಿರುತ್ತದೆ. ಹಾಗಾಗಿ ಭೂಮಿಗೆ ನಮಸ್ಕರಿಸುವ ಮೂಲಕ ನಮ್ಮ ತಪ್ಪಿಗೆ ಕ್ಷಮೆ ಕೇಳುವ ರೀತಿ ಇದಾಗಿರುತ್ತದೆ.
ಇದನ್ನೂ ಓದಿ : Lizard Interpretation: ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದು ಏನು ಸೂಚಿಸುತ್ತೆ, ಅದರ ಪರಿಣಾಮವೇನು
3. ಇದರ ನಂತರ, ದೇಹದ ಕಲ್ಮಶಗಳನ್ನು ದೇಹದಿಂದ ಹೊರ ಹಾಕಬೇಕು. ಅಂದರೆ ಮಲ ಮೂತ್ರ ವಿಸರ್ಜನೆ. ದೇಹದ ಕಲ್ಮಶಗಳು ದೇಹದಲ್ಲೇ ಉಳಿದರೆ ಅದು ಹಾನಿಕಾರಕ. ಹಾಗಾಗಿ ಅವುಗಳನ್ನು ಹೊರ ಹಾಕುವುದು ಬಹಳ ಮುಖ್ಯ.
4. ಬೆಳಿಗ್ಗೆ ಸ್ನಾನ (Taking bath) ಮಾಡಿದ ನಂತರ ನಿತ್ಯ ಪೂಜೆ ಮಾಡಬೇಕು. ಪೂಜಾ ಸ್ಥಳವನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು.
5.ಸ್ನಾನ ಮುಗಿಸಿದ ನಂತರ, ಪ್ರತಿದಿನ ಸೂರ್ಯನಿಗೆ (Sun god) ಜಲ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ದೋಷಗಳು ಪರಿಹಾರವಾಗುತ್ತದೆಯಂತೆ.
6.ಗೋವು ಮಾತೆಗೆ ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಹಾಗಾಗಿ ಬೆಳಿಗ್ಗೆ ಉಪಹಾರ ಸೇವನೆ ಮೊದಲು ಗೋವಿಗೆ ತಿಂಡಿ ತಿನ್ನಿಸುವುದು ಕೂಡಾ ಬಹಳ ಮುಖ್ಯ.
ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಾ ಬಂದರೆ ಜೀವನದಲ್ಲಿ ಶಾಂತಿ ನೆಲೆಯಾಗುತ್ತದೆಯಂತೆ.
ಇದನ್ನೂ ಓದಿ : Planetary Transits: ಸೂರ್ಯನ ರಾಶಿ ಪರಿವರ್ತನೆಯಿಂದ ಈ ಮೂರು ರಾಶಿಯವರಿಗೆ ಭಾರೀ ನಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.