ಮನೆಯಲ್ಲಿ ಲಕ್ಷ್ಮೀ ನೆಲೆಯಾಗಬೇಕಾದರೆ ಇಂದಿನಿಂದಲೇ ಈ ಕೆಲಸ ಆರಂಭಿಸಿ
ಚಾಣಕ್ಯನ ನೀತಿಯಲ್ಲಿ ಹೇಳಲಾದ ಈ ವಿಷಯಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಚಾಣಕ್ಯ ನೀತಿಯಲ್ಲಿ, ಹೇಳಲಾದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದಾ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರು : ಆಚಾರ್ಯ ಚಾಣಕ್ಯರು ನಮ್ಮ ದೇಶದ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕೀಯ ಗುರು. ಅವರು ನಿತ್ಯದ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಮುಖ ನೀತಿಗಳನ್ನು ಹೇಳಿದ್ದಾರೆ. ಆಚಾರ್ಯ ಚಾಣಕ್ಯನ ನೀತಿ ಶಾಸ್ತ್ರವು ಚಾಣಕ್ಯ ನೀತಿ ಎಂದೇ ಜನಪ್ರಿಯವಾಗಿದೆ. ಚಾಣಾಕ್ಯ ನೀತಿಯಲ್ಲಿ ಹೇಳಲಾದ ಬಹಳಷ್ಟು ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಇದರಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳಲು, ಜೀವನದಲ್ಲಿ ಯಶಸ್ಸನ್ನು ಪಡೆಯಲು, ಶ್ರೀಮಂತರಾಗಲು, ಪ್ರತಿಷ್ಠೆ ಪಡೆಯಲು ಸಹಾಯಕವಾಗುವ ವಿಷಯಗಳನ್ನು ಹೇಳಲಾಗಿದೆ. ಜನರು ಈ ನೀತಿಗಳನ್ನು ಅಳವಡಿಸಿಕೊಂಡರೆ ತಮ್ಮ ಜೀವನದಲ್ಲಿ ಸುಲಭವಾಗಿ ಸುಖ ಸಂತೋಷ ಪಡೆದು ಯಶಸ್ವಿ ಜೀವನವನ್ನು ನಡೆಸಬಹುದು.
ಚಾಣಕ್ಯನ ನೀತಿಯಲ್ಲಿ ಹೇಳಲಾದ ಈ ವಿಷಯಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಚಾಣಕ್ಯ ನೀತಿಯಲ್ಲಿ, ಹೇಳಲಾದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದಾ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗಿದೆ. ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮೀ ದೇವಿಯು ಯಾವಾಗಲೂ ದಯೆ ತೋರುತ್ತಾಳೆ.
ಇದನ್ನೂ ಓದಿ : Budh Margi 2022: ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ತೊಂದರೆ ಹೆಚ್ಚಿಸಲಿದ್ದಾನೆ ಮಾರ್ಗಿ ಬುಧ
ಪತಿ-ಪತ್ನಿಯರ ನಡುವೆ ಪ್ರೀತಿ ಮತ್ತು ಗೌರವ : ಯಾವ ಮನೆಯಲ್ಲಿ ಜನರು ಪ್ರೀತಿ ವಿಶ್ವಾಸದಿಂದ ಬದುಕುತ್ತಾರೆಯೋ ಆ ಮನೆಗಳಲ್ಲಿ ಯಾವಾಗಲೂ ಸಂತೋಷ, ಸಮೃದ್ಧಿ ಇರುತ್ತದೆ. ಚಾಣಕ್ಯ ನೀತಿ ಹೇಳುವಂತೆ ಗಂಡ ಹೆಂಡತಿ ಸದಾ ಪರಸ್ಪರ ಪ್ರೀತಿ ಗೌರವದಿಂದ ಇರಬೇಕು. ಧರ್ಮಗ್ರಂಥಗಳಲ್ಲಿ ಹೆಂಡತಿಯನ್ನು ಮನೆಯ ಲಕ್ಷ್ಮೀ ಎಂದು ಕರೆಯಲಾಗಿದೆ. ಹಾಗಾಗಿ ಪತ್ನಿಯನ್ನು ಗೌರವಿಸುವುದು ಬಹಳ ಮುಖ್ಯ. ಹೀಗೆ ಮಾಡಿದರೆ ಜೀವನದಲ್ಲಿ ಎಂದೂ ಹಣದ ಕೊರತೆ ಎದುರಾಗುವುದಿಲ್ಲ.
ಗುರುಗಳು, ವಿದ್ವಾಂಸರನ್ನು ಗೌರವಿಸಬೇಕು: ಯಾವ ಮನೆಯಲ್ಲಿ ಗುರುಗಳು -ವಿದ್ವಾಂಸರನ್ನು ಗೌರವಿಸಲಾಗುತ್ತದೆಯೋ ಆ ಮನೆಯ ಮೇಲೆ ಲಕ್ಷ್ಮೀಯ ಕೃಪಾ ಕಟಾಕ್ಷ ಹೆಚ್ಚಿರುತ್ತದೆ. ಅಲ್ಲದೆ ಯಾವ ಮನೆಯಲ್ಲಿ ಸಾಧು - ಸಂತರ ಸೇವೆ ಮಾಡಲಾಗುತ್ತದೆ, ಯಾವ ಮನೆಯಲ್ಲಿ ಅನೈತಿಕ ಕಾರ್ಯ ನಡೆಸುವುದಿಲ್ಲ ಆ ಕುಟುಂಬದ ಮೇಲೆ ತಾಯಿ ಲಕ್ಷ್ಮೀ ಸದಾ ಪ್ರಸನ್ನಾಳಾಗಿರುತ್ತಾಳೆ. ಈ ಮನೆಗಳಲ್ಲಿ ಹಣ ಮತ್ತು ಸಂಪತ್ತಿನ ಕೊರತೆ ಎಂದಿಗೂ ಇರುವುದಿಲ್ಲ.
ಇದನ್ನೂ ಓದಿ : Shani Vakri Effect: ಎರಡು ದಿನಗಳ ಬಳಿಕ ಈ ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಶನಿದೇವ
ಆಹಾರಕ್ಕೆ ಗೌರವ: ಅನ್ನದ ಒಂದು ಅಗುಳನ್ನು ಬೆಳೆಯುವುದಕ್ಕೂ ರೈತ ಪಡುವ ಕಷ್ಟ ಅಷ್ಟಿಷ್ಟಲ್ಲ. ಅಂಥಹ ಅನ್ನವನ್ನು ಗೌರವಿಸಬೇಕು. ಅನ್ನ ಅಂದರೆ ಅನ್ನಪೂರ್ಣೇಶ್ವರಿ . ಹಾಗಾಗಿ ಅನ್ನವನ್ನು ಗೌರವಿಸಬೇಕು. ಮನೆಗೆ ಅತಿಥಿಗಳು ಬಂದರೆ ಮೂದಲಿಸಿಕೊಳ್ಳ ಬಾರದು. ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸಬೇಕು, ಸತ್ಕರಿಸಬೇಕು. ರಾತ್ರಿ ವೇಳೆ ಮನೆಯಲ್ಲಿ ಕೊಳಕು ಪಾತ್ರೆಗಳನ್ನು ಇಡಬಾರದು. ಅಡುಗೆ ಮನೆ ಸ್ವಚ್ಚವಾಗಿರುವ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸುತ್ತಾಳೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ