ನಾಳೆಯಿಂದ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದಾರೆ ಈ ನಾಲ್ಕು ರಾಶಿಯವರು.! ಭಾರೀ ಅದೃಷ್ಟ ತರಲಿದ್ದಾನೆ ಬುಧ

ನಾಳೆ ಅಂದರೆ ಜೂನ್ 3 ರಿಂದ ಬುಧ ಮತ್ತೆ ನೇರ ನಡೆಗೆ ಮರಳಲಿದ್ದಾನೆ. ಬುಧ ಮತ್ತೆ ನೇರ ನಡೆ ಆರಂಭಿಸುವುದು ನಾಲ್ಕು ರಾಶಿಯ ಜನರಿಗೆ ಅದೃಷ್ಟ ತರಲಿದೆ. ಈ ರಾಶಿಯವರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಸುಧಾರಣೆಯಾಗಲಿದೆ.  

Written by - Ranjitha R K | Last Updated : Jun 2, 2022, 09:24 AM IST
  • ಸಾಮಾನ್ಯವಾಗಿ ಬುಧ ಗ್ರಹವು 27 ದಿನಗಳಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ.
  • ಪ್ರಸ್ತುತ ಬುಧನು ವೃಷಭ ರಾಶಿಯಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ
  • ನಾಳೆ ಅಂದರೆ ಜೂನ್ 3 ರಿಂದ ಬುಧ ಮತ್ತೆ ನೇರ ನಡೆಗೆ ಮರಳಲಿದ್ದಾನೆ.
ನಾಳೆಯಿಂದ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದಾರೆ ಈ ನಾಲ್ಕು ರಾಶಿಯವರು.!  ಭಾರೀ ಅದೃಷ್ಟ ತರಲಿದ್ದಾನೆ ಬುಧ  title=
Budh Margi 3 June 2022 effect on Zodiac Signs (file photo)

ಬೆಂಗಳೂರು : ಸಾಮಾನ್ಯವಾಗಿ ಬುಧ ಗ್ರಹವು 27 ದಿನಗಳಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಆದರೆ ಯಾವುದಾದರೂ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇದ್ದಾಗ,  27 ದಿನಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಪ್ರಸ್ತುತ ಬುಧನು ವೃಷಭ ರಾಶಿಯಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನಾಳೆ ಅಂದರೆ ಜೂನ್ 3 ರಿಂದ ಬುಧ ಮತ್ತೆ ನೇರ ನಡೆಗೆ ಮರಳಲಿದ್ದಾನೆ. ಬುಧ ಮತ್ತೆ ನೇರ ನಡೆ ಆರಂಭಿಸುವುದು ನಾಲ್ಕು ರಾಶಿಯ ಜನರಿಗೆ ಅದೃಷ್ಟ ತರಲಿದೆ. ಈ ರಾಶಿಯವರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಸುಧಾರಣೆಯಾಗಲಿದೆ.  ಬುಧ ನಾಳೆಯಿಂದ ಈ ರಾಶಿಯವರ ಭವಿಷ್ಯವನ್ನು ಬೆಳಗಲಿದ್ದಾನೆ. 

ಈ ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಬುಧ : 
ವೃಷಭ: ಬುಧಗ್ರಹದ ನೇರ ಸಂಚಾರವು ವೃಷಭ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಅವರ ವೃತ್ತಿ ಮತ್ತು ಜೀವನದಲ್ಲಿ ಎದುರಾಗಿದ್ದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತವೆ. ದೊಡ್ಡಮಟ್ಟದ  ಪ್ರಗತಿ ಸಾಧಿಸಬಹುದು. ಹೊಸ ಉದ್ಯೋಗವನ್ನು ಪಡೆಯುವ  ಸಾಧ್ಯತೆ ಬಲವಾಗಿದೆ. ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಇದನ್ನೂ ಓದಿ : ಮೂರು ದಿನಗಳ ನಂತರ ಈ ರಾಶಿಗಳ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ಮಹಾತ್ಮ

ಮಿಥುನ: ಸಂಕ್ರಮಣದಲ್ಲಿರುವ ಬುಧನು ಮಿಥುನ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದಾನೆ. ಹೊಸ ಉದ್ಯೋಗ ಸಿಗಬಹುದು. ಕುಟುಂಬದವರೊಂದಿಗೆ ಒಳ್ಳೆಯ ಸಮಯ ಕಳೆಯುವಿರಿ. ಹಣಕಾಸಿನ ಪ್ರಯೋಜನಕಾರಿಯಾಗಲಿದೆ. ನೀವು ತಾಯಿಯಿಂದ ವಿಶೇಷ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ.

ಕನ್ಯಾ : ಜೂನ್ 3 ಅಂದರೆ ನಾಳೆಯಿಂದ ಕನ್ಯಾ ರಾಶಿಯವರಿಗೆ ಬುಧ ಭಾರೀ ಲಾಭವನ್ನು ಕರುಣಿಸಲಿದ್ದಾನೆ . ಉದ್ಯಮಿಗಳು ವಿಶೇಷ ಯಶಸ್ಸನ್ನು ಪಡೆಯುತ್ತಾರೆ. ಆದಾಯ ಹೆಚ್ಚಲಿದೆ. ಮನೆಯಲ್ಲಿ ಧಾರ್ಮಿಕ ಅಥವಾ ಶುಭ ಕಾರ್ಯಗಳು ನಡೆಯಬಹುದು. ಲಾಭ ಗಳಿಸಲು ಹೆಚ್ಚಿನ  ಅವಕಾಶವಿರುತ್ತದೆ. 

ಇದನ್ನೂ ಓದಿ : Surya Rashi Parivartan: ಜೂ.15ರ ಸೂರ್ಯ ರಾಶಿ ಬದಲಾವಣೆಯಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ

ಮಕರ: ನಾಳೆಯಿಂದ ಮಕರ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ವ್ಯಾಪಾರ ವೃದ್ಧಿಯಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ವರ್ಗಾವಣೆಯಾಗುವ ಸಾಧ್ಯತೆಯೂ ಇದೆ. ಕೆಲಸದ ಸ್ಥಳದಲ್ಲಿ ಹಿರಿಯರ ಸಹಾಯ ದೊರೆಯಲಿದೆ. ಮಂಗಳ  ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News