Tulsi Astro Remedies : ತುಳಸಿಯನ್ನು ಲಕ್ಷ್ಮೀ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ತುಳಸಿ ದಳಗಳಿಲ್ಲದೆ, ವಿಷ್ಣುವಿನ ಆರಾಧನೆ ಅಪೂರ್ಣ ಎಂದೆನಿಸಿಕೊಳ್ಳುತ್ತದೆ. ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ತುಂಬಾ ಶುಭ. ಲಕ್ಷ್ಮೀ ದೇವಿಯನ್ನು ಪ್ರತಿನಿತ್ಯ ಪೂಜಿಸುವುದರಿಂದ, ದೀಪವನ್ನು ಹಚ್ಚುವುದರಿಂದ ಮನೆ ಮಂದಿಯ ಮೇಲೆ ತನ್ನ ಕೃಪಾ ದೃಷ್ಟಿ ಹರಿಸುತ್ತಾಳೆ. ತುಳಸಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಿದರೆ  ಅಪಾರ ಸಂಪತ್ತು ಒದಗಿ ಬರುತ್ತದೆ. ಮತ್ತು ಇಷ್ಟಾರ್ಥಗಳು ನೆರವೇರುತ್ತದೆ. 


COMMERCIAL BREAK
SCROLL TO CONTINUE READING

ಮನೆಯಲ್ಲಿನ ವೈಷಮ್ಯ ಮತ್ತು ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪರಿಹಾರಗಳು: ಮನೆಯಲ್ಲಿ ಪದೇ ಪದೇ ಕಲಹ ಸಂಭವಿಸುತ್ತಿದ್ದರೆ, ಆರ್ಥಿಕ ತೊಂದರೆ ಎದುರಾಗುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿ ಮತ್ತು ತುಳಸಿಗೆ ನೀರನ್ನು ಅರ್ಪಿಸಿ. ಇದರೊಂದಿಗೆ ‘ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯವರ್ಧಿನಿ ಆದಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೀ’ ಎಂಬ ಮಂತ್ರವನ್ನು ಪಠಿಸಬೇಕು. 


ಇದನ್ನೂ ಓದಿ : Pitru Paksha: ಪಿತೃ ಪಕ್ಷದಲ್ಲಿ ಮಗುವಿನ ಜನನ ನೀಡುತ್ತೆ ಈ ಸೂಚನೆ.!


ಇಷ್ಟಾರ್ಥ ಈಡೇರಿಕೆಗೆ ಪರಿಹಾರ:  ಮನದ ಆಸೆಯನ್ನು ಈಡೇರಿಸಿಕೊಳ್ಳಬೇಕಾದರೆ,  ಮನಸ್ಸಿನಲ್ಲಿರುವ ಆಸೆಯನ್ನು ನೆನೆಸಿಕೊಂಡು, ನಿಮ್ಮ ದೇಹದಷ್ಟು ಉದ್ದದ ಹಳದಿ ದಾರವನ್ನು ತೆಗೆದುಕೊಳ್ಳಿ. ಅದರಲ್ಲಿ 108 ಗಂಟುಗಳನ್ನುಹಾಕಿ. ಹೀಗೆ ಮಾಡುವಾಗ ನಿಮ್ಮ ಇಷ್ಟಾರ್ಥ ನೆರವೇರಿಸುವಂತೆ ಮನಸ್ಸಿನಲ್ಲಿ ತುಳಸಿಯನ್ನು ಧ್ಯಾನ ಮಾಡಿಕೊಳ್ಳಿ. ನಂತರ ತುಳಸಿ ಗಿಡಕ್ಕೆ ಈ ದಾರವನ್ನು ಕಟ್ಟಿ. ಇಷ್ಟಾರ್ಥ ನೆರವೇರಿದ ನಂತರ ಈ ದಾರವನ್ನು ತೆಗೆದುಕೊಂಡು ನೀರಿನಲ್ಲಿ,ಬಿಡಿ. 


ಮನೆಯಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕಲು ಪರಿಹಾರ: ಹಗಲಿನಲ್ಲಿ 5 ತುಳಸಿ ಎಲೆಗಳನ್ನು ತೆಗದು, ಪ್ರತಿ ರಾತ್ರಿ ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಇರಿಸಿ ಮಲಗಿಕೊಳ್ಳಿ. ಇದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ. ಸಾಧ್ಯವಾದರೆ ಪ್ರತಿದಿನ ಶ್ರೀಹರಿಯನ್ನು ಪೂಜಿಸಿ ತುಳಸಿಯನ್ನು ಅರ್ಪಿಸಿ. 


ಇದನ್ನೂ ಓದಿ : ಈ ನಾಲ್ಕು ರಾಶಿಯವರು ಚಿನ್ನದ ಉಂಗುರ ಹಾಕಿದರೆ ಕೂಡಿ ಬರುವುದು ಅದೃಷ್ಟ


ಶ್ರೀಮಂತರಾಗಲು ಪರಿಹಾರ: ಬೆಳಿಗ್ಗೆ ಸ್ನಾನ ಮಾಡಿ 4 ತುಳಸಿ ಎಲೆಗಳನ್ನು ಕಿತ್ತು ಇಟ್ಟು ಕೊಳ್ಳಿ. ನಂತರ ಹಿತ್ತಾಳೆಯ ಪಾತ್ರೆಯಲ್ಲಿ ನೀರು ಸುರಿದು ಅವುಗಳನ್ನು ನೆನೆಸಿ. 24 ಗಂಟೆಗಳ ನಂತರ, ಈ ನೀರನ್ನು ಮನೆಯ ಮುಖ್ಯ ಬಾಗಿಲಿನಿಂದ ಹಿಡಿದು ಇಡೀ ಮನೆಗೆ ಸಿಂಪಡಿಸಿ. ಇದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ. 


 



 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.