ನವದೆಹಲಿ : ಎಲ್ಲರಿಗೂ ಮನೆಯಲ್ಲಿ ಸಹಜ ಶಾಂತಿ, ನೆಮ್ಮದಿ ಬೇಕು. ಇದಕ್ಕಾಗಿಯೇ ವಾಸ್ತುವಿನ ಮೊರೆ (Vastu) ಹೋಗುತ್ತಾರೆ.  ಮನೆಯಲ್ಲಿ ಸುಖ, ಶಾಂತಿ, ಖುಷಿ, ನೆಮ್ಮದಿ ನೆಲಸಬೇಕು ಎಂದರೆ ಬುದ್ದನ ಮೂರ್ತಿಯನ್ನು (Buddha statue) ಮನೆಯಲ್ಲಿಡಬೇಕು ಎಂದು ಹೇಳುತ್ತಾರೆ ವಾಸ್ತು ಪಂಡಿತರು.  ಇದರಿಂದ ಮನೆಯೂ ಸುಂದರವಾಗಿ ಕಾಣುತ್ತದೆ ಜೊತೆಗೆ ಸುಖ, ನೆಮ್ಮದಿಯೂ ಮನೆಯಲ್ಲಿರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.  ಆದರೆ  ಮನೆಯಲ್ಲಿ ಬುದ್ದನ ಮೂರ್ತಿ ಎಲ್ಲಿಡಬೇಕು..? ಹೇಗಿಡಬೇಕು..? ಹಾಗೂ ಬುದ್ಧನ ಮೂರ್ತಿಹೇಗಿರಬೇಕು ಎನ್ನುವುದು ದೊಡ್ಡ ಪ್ರಶ್ನೆ. ಅದಕ್ಕೆ ಉತ್ತರ  ಇಲ್ಲಿದೆ. 


COMMERCIAL BREAK
SCROLL TO CONTINUE READING

ವಾಸ್ತು ಪಂಡಿತರ ಪ್ರಕಾರ ಸರಿಯಾದ ಜಾಗದಲ್ಲಿ ಬುದ್ದನ ಮೂರ್ತಿ ಇಟ್ಟರೆ ಮನೆಯಲ್ಲಿ  ಶಾಂತಿ ಇರುತ್ತದೆ ಮತ್ತು ಮನೆಯಲ್ಲಿರುವವರಿಗೂ ಮಾನಸಿಕ ಶಾಂತಿ ಇರುತ್ತದೆ ಎನ್ನುತ್ತಾರೆ ವಾಸ್ತು ಪಂಡಿತರು
1. ಪ್ರವೇಶ ದ್ವಾರ:
ವಾಸ್ತು ಪ್ರಕಾರ (Vastu Tips) ಮನೆಯ ಪ್ರವೇಶದ್ವಾರದಲ್ಲಿ ರಕ್ಷಾ ಮುದ್ರೆಯಲ್ಲಿರುವ ಬುದ್ದನ ಮೂರ್ತಿ  (Buddha statue)ಇಟ್ಟರೆ ಶುಭ.  ಆದರೆ ಬುದ್ದನ ಮೂರ್ತಿಯನ್ನು ಯಾವತ್ತಿಗೂ ನೆಲದ ಮೇಲೆ ಇಡಬಾರದು ಎಂದು ಹೇಳುತ್ತಾರೆ.  ಬುದ್ದನ ಮೂರ್ತಿಯನ್ನು ನೆಲದಿಂದ ಕನಿಷ್ಠ ಮೂರು – ನಾಲ್ಕು ಅಡಿ ಮೇಲೆ ಇಡಬೇಕಂತೆ. 


ಇದನ್ನೂ ಓದಿ : Vastu Shastra: ನಿತ್ಯ ಪೂಜೆ ಮತ್ತು ಇತರೆಡೆ ಬಳಕೆಯಾಗುವ ಈ ವಸ್ತುಗಳನ್ನು ನೇರವಾಗಿ ನೆಲದ ಮೇಲಿರಿಸಬೇಡಿ


2. ಲೀವಿಂಗ್ ರೂಮ್ :


 ವಾಸ್ತು ಪ್ರಕಾರ ಎಡ ಗೈ  ತಲೆಗೊತ್ತಿಕೊಂಡು ಶಯನ ಮುದ್ರೆಯಲ್ಲಿರುವ ಬುದ್ದನ ಪ್ರತಿಮೆಯನ್ನು (Buddha in sleeping posotion) ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು. ಇದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ಉಂಟಾಗುತ್ತದೆ. ಇದನ್ನು ಯಾವತ್ತಿಗೂ ಕ್ಲೀನ್ ಟೇಬಲ್ ಮೇಲೆ  ಕವಾಟಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಮಾನಸಿಕ ಶಾಂತಿ ಇರುತ್ತದೆ.


3. ಹೂತೋಟದಲ್ಲಿ:
ವಾಸ್ತು ಅನುಸಾರ ಹೂತೋಟದ ಸ್ವಚ್ಛ  ಇರುವ ಜಾಗದಲ್ಲಿ ಧ್ಯಾನಮುದ್ರೆಯಲ್ಲಿರುವ ಬುದ್ದನ ಮೂರ್ತಿ (meditating buddha) ಸ್ಥಾಪನೆ ಮಾಡಿದರೆ ಒಳ್ಳೆಯದು. ಇದರಿಂದ ತೋಟದಲ್ಲಿ ಸುತ್ತುವ ಸಂದರ್ಭದಲ್ಲಿ ಬುದ್ದನನ್ನ ದರ್ಶನ ಪಡೆದರೆ ಸಹಜವಾಗಿ ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ.


4. ಪೂಜಾ ಸ್ಥಾನ:
ಧ್ಯಾನಮುದ್ರೆಯಲ್ಲಿರುವ ಬುದ್ದ ಮೂರ್ತಿಯನ್ನು ಪೂಜಾ ಕೊಠಡಿಯಲ್ಲಿಡುತ್ತಾರೆ (Pooja room). ಇದರಿಂದ ನಮ್ಮ ಧ್ಯಾನ ಕೇಂದ್ರಿತವಾಗುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿಯೂ ಸಿಗುತ್ತದೆ.  ವಾಸ್ತು ಪ್ರಕಾರ ಇಲ್ಲಿ ಬುದ್ದನ ಮೂರ್ತಿ ಪೂರ್ವಕ್ಕೆ ಮುಖ ಮಾಡಿ ಇಡಬೇಕು. 


ಇದನ್ನೂ ಓದಿ : Tulsi Plant: ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ


5. ಮಕ್ಕಳ ರೂಮಿನಲ್ಲಿ: 
ಮಕ್ಕಳ ಕೋಣೆಯಲ್ಲಿ ಟೇಬಲ್ ಮೇಲೆ ಬುದ್ಧನ ಮೂರ್ತಿಯನ್ನು ಪೂರ್ವದ ಕಡೆ ಮುಖ ಮಾಡಿ ಇಟ್ಟರೆ ಶಿಕ್ಷಣದಲ್ಲಿ ಸಫಲತೆ ಉಂಟಾಗುತ್ತದೆಯಂತೆ. ಶಯನ ಮುದ್ರೆಯಲ್ಲಿರುವ ಬುದ್ದನ ಮೂರ್ತಿಯನ್ನೂ ಕೂಡಾ ಇಡಬಹುದು. 


6. ಮನೆಯ ಮುಖ್ಯದ್ವಾರದ ಗೋಡೆಯ ಮೇಲೆ:
ವಾಸ್ತು ಶಾಸ್ತ್ರದ (Vastu shastra) ಪ್ರಕಾರ ಮನೆಯ ಗೋಡೆಯ ಮೇಲೆ ಬುದ್ದನ ಪೇಂಟಿಂಗ್ ಅಂಟಿಸಬಹುದು. ಇದರಿಂದ ಮನೆಯಲ್ಲಿ ಶುಖ ಶಾಂತಿ ಇರುತ್ತದೆ. ಇದನ್ನು ಲಿವಿಂಗ್ ರೂಮಿನಲ್ಲೂ ಇಡಬಹುದು. ಆದರೆ ಬುದ್ದನ ಪೇಂಟಿಂಗ್ ಮನೆಯ ಒಳಗಿರಬೇಕು. 


7. ಬುಕ್ ಶೆಲ್ಫ್: 
ಗೊತ್ತಿರಲಿ. ಲಾಫಿಂಗ್ ಬುದ್ದ (Laughing buddha) ಮತ್ತು ಗೌತಮ ಬುದ್ಧ  ಇವರಿಬ್ಬರಲ್ಲೂ ವ್ಯತ್ಯಾಸವಿದೆ. ಆದರೆ, ಲಾಫಿಂಗ್ ಬುದ್ದ ಕೂಡಾ ಶಾಂತಿ ಮತ್ತು ಖುಷಿಯ ಪ್ರತೀಕವಾಗಿದೆ. ವಾಸ್ತು ಅನುಸಾರ  ಬುಕ್ ಶೆಲ್ಫ್ ನಲ್ಲಿ ಪೂರ್ವಾಭಿಮುಖವಾಗಿ ಇಡಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ.


ಇದನ್ನೂ ಓದಿ : ತುಳಸಿ ಪೂಜೆಗೂ ನಿಯಮಗಳಿವೆ ; ಯಾವಾಗ ಮತ್ತು ಹೇಗೆ ಪೂಜಿಸಬೇಕೆಂದು ತಿಳಿದಿರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.