ನವದೆಹಲಿ : ಶಾಸ್ತ್ರಗಳ ಪ್ರಕಾರ ಕೆಲ ಸ್ಥಳಗಳಿಗೆ ಹೋಗುವಾಗ ಚಪ್ಪಲಿ ಧರಿಸಬಾರದು. ಚಪ್ಪಲಿ ಧರಿಸಿಕೊಂಡು ಕೆಲ ಸ್ಥಳಗಳಿಗೆ ಹೋಗುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ದೇವಸ್ಥಾನದ (Temple) ಒಳಗೆ ಪ್ರವೇಶಿಸುವ ಮೊದಲು ಚಪ್ಪಲಿ ತೆಗೆಯಬೇಕಾಗುತ್ತದೆ. ದೇವಸ್ಥಾನದ ಒಳಗೆ ಚಪ್ಪಲಿ (footwear) ಹಾಕಿಕೊಂಡು ಹೋಗುವುದು ಅಶುಭ ಎಂದು ಹೇಳಲಾಗುತ್ತದೆ. ಕೇವಲ ದೇವಸ್ಥಾನ ಮಾತ್ರವಲ್ಲ ಇನ್ನೂ ಅನೇಕ ಸ್ಥಳಗಳಿವೆ. ಆ ಸ್ಥಳಗಳಿಗೆ ಚಪ್ಪಲಿ ಹಾಕಿಕೊಂಡು ಹೋಗುವುದು ಕೂಡಾ ನಿಷಿದ್ಧ. ಹೌದು, ಈ ಸ್ಥಳಗಳಿಗೆ ತಪ್ಪಿಯೂ ಚಪ್ಪಲಿ ಹಾಕಿಕೊಂಡು ಹೋಗಬಾರದು. ಆ ಸ್ಥಳಗಳು ಯಾವುವು ನೋಡೋಣ..
ಮನೆಯ ದೇವರ ಕೋಣೆ :
ಮನೆಯಲ್ಲಿರುವ ದೇವರ ಕೋಣೆ (Pooja Room) ಕೂಡಾ ದೇವಸ್ಥಾನವಿದ್ದಂತೆ. ಹಾಗಾಗಿ ದೇವರ ಕೋಣೆಗೆ ಹೋಗುವ ಮೊದಲು ಚಪ್ಪಲಿ ತೆಗೆದು ಹೊರಗಿಡಬೇಕು. ಚಪ್ಪಲಿ (Shoes) ಹಾಕಿಕೊಂಡು ದೇವರ ಕೋಣೆಗೆ ಹೋದರೆ, ಮನೆಯ ಸುಖ ಸಮೃದ್ಧಿ ನಷ್ಟವಾಗುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ : Monday Remedies: ಸೋಮವಾರದಂದು ಅಪ್ಪಿ-ತಪ್ಪಿಯೂ ಮಾಡದಿರಿ ಈ ಕೆಲಸ, ಇಲ್ಲವೇ ಪಶ್ಚಾತ್ತಾಪ ಪಡಬೇಕಾಗಬಹುದು
ಅಡುಗೆ ಮನೆ :
ಅಡುಗೆ ಮನೆಯೊಳಗೆ (Kitchen) ಕೂಡಾ ಶೂ ಚಪ್ಪಲಿ ಹಾಕಿಕೊಂಡು ಹೋಗುವುದು ಅಶುಭವಂತೆ. ದೇವಸ್ಥಾನ, ದೇವರ ಕೋಣೆಯಂತೆ ಅಡುಗೆ ಮನೆಗೆ ಕೂಡಾ ಪೂಜನೀಯ ಸ್ಥಾನವಿದೆ. ಅನ್ನ ಎಂದರೆ ಅನ್ನಪೂರ್ಣೆ ಎನ್ನುತ್ತೇವೆ. ಹಾಗಾಗಿ ಅನ್ನಪೂರ್ಣೆ ನೆಲೆಸಿರುವ ಅಡುಗೆ ಮನೆಗೆ ಚಪ್ಪಲಿ (footwear) ಹಾಕಿಕೊಂಡು ಹೋದರೆ ಅನ್ನಪೂರ್ಣೆ ಬೇಸರಗೊಳ್ಳುತ್ತಾಳಂತೆ. ಈ ಕಾರಣದಿಂದ ಅಡುಗೆ ಮನೆಗೂ ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ.
ಸ್ಟೋರ್ ರೂಂ :
ಸ್ಟೋರ್ ರೂಂಗೆ (Store room) ಕೂಡಾ ಚಪ್ಪಲಿ ಹಾಕಿಕೊಂಡು ತೆರಳಬಾರದು. ಸ್ಟೋರ್ ರೂಂನಲ್ಲಿ ಅಡುಗೆ ಸಾಮಗ್ರಿಗಳನ್ನು ದಾಸ್ತಾನು ಮಾಡಿ ಇಡಲಾಗುತ್ತದೆ. ಹಾಗಾಗಿ ಅಲ್ಲಿಗೆ ಹೋಗುವ ಮುನ್ನ ಚಪ್ಪಲಿ ಹೊರಗಿಟ್ಟು ಒಳ ಪ್ರವೇಶಿಸಬೇಕು. ಸ್ಟೋರ್ ರೂಂಗೆ ಚಪ್ಪಲಿ ಹಾಕಿಕೊಂಡು ಹೋದರೆ ಇನ್ನಿಲ್ಲದ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದು ನಂಬಿಕೆ
ಇದನ್ನೂ ಓದಿ : Kedarnath Dham: ಭಕ್ತಾಧಿಗಳಿಲ್ಲದೆ ತೆರೆದ ಕೇದಾರನಾಥ ಧಾಮ್, ಭಕ್ತರಿಗೆ ಆನ್‌ಲೈನ್‌ನಲ್ಲಿ 'ದರ್ಶನ'
ನದಿ :
ಇನ್ನು ನದಿಯ (River) ಬಳಿ ತೆರಳುವುದಕ್ಕೂ ಮುನ್ನ ಚಪ್ಪಲಿಯನ್ನು ದೂರವೇ ಬಿಟ್ಟುಬಿಡಿ. ನದಿ ನೀರಿಗೆ ಇಳಿಯುವಾಗ ಎಂದೂ ಚಪ್ಪಲಿ ಧರಿಸಲೇ ಬೇಡಿ. ಚಪ್ಪಲಿ ಮಾತ್ರವಲ್ಲ ಚರ್ಮದ ಯಾವುದೇ ವಸ್ತುವನ್ನು ಹಿಡಿದು ನದಿ ನೀರಿಗೆ ಇಳಿಯಬಾರದು. ಒಂದು ವೇಳೆ ಹೀಗೆ ಮಾಡಿದರೆ ಮನೆಯ ಸುಖ ಶಾಂತಿ, ಭಂಗವಾಗುತ್ತದೆ.
ತಿಜೋರಿ :
ಮನೆಯಲ್ಲಿ ಹಣ (Money) , ಚಿನ್ನ, ಬೆಳ್ಳಿ, ಒಡವೆಗಳನ್ನು ಇಡುವ ಸ್ಥಳವೇ ತಿಜೋರಿ. ತಿಜೋರಿ ಯಾವ ಕೋಣೆಯಲ್ಲಿ ಇರುತ್ತದೆಯೋ ಅಲ್ಲಿಗೂ ಚಪ್ಪಲಿ (Shoes) ಹಾಕಿಕೊಂಡು ಹೋಗಬಾರದು. ತಿಜೋರಿಯಲ್ಲಿ ನಾವು ಚಿನ್ನ, ಹಣವನ್ನು ಇಟ್ಟರುತ್ತೇವೆ. ಅಂದರೆ ಹಣ, ಚಿನ್ನ ಅಂದರೆ ಲಕ್ಷ್ಮೀ (Godess Lakshmi) ಎನ್ನುವುದು ನಂಬಿಕೆ. ಈ ಕಾರಣದಿಂದ ತಿಜೋರಿ ಇರುವ ಕೋಣೆಗೆ ಚಪ್ಪಲಿ ಹಾಕಿಕೊಂಡು ಹೋದರೆ ಲಕ್ಷ್ಮೀ ಮುನಿಯುತ್ತಾಳಂತೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.