ನವದೆಹಲಿ : ಭಾರತೀಯ ಸಂಪ್ರದಾಯದ ಪ್ರಕಾರ ವ್ಯಕ್ತಿಯ ಮರಣದ ನಂತರ, ಪಿಂಡ ಪ್ರದಾನ ಮಾಡುವುದು ಕಡ್ಡಾಯ ಎಂದು ನಂಬಲಾಗಿದೆ.  ಪಿಂಡ ಪ್ರದಾನವಾಗದೆ (Pind Daan)  ಹೋದರೆ ಮೃತ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ಸಿಗುವುದಿಲ್ಲ ಎನ್ನಲಾಗಿದೆ. ಆ ಆತ್ಮವು  ಮೋಕ್ಷ ಸಿಗದೇ ಅಲೆದಾಡುತ್ತಿರುತ್ತದೆ ಎನ್ನುವುದು ನಂಬಿಕೆ. 


COMMERCIAL BREAK
SCROLL TO CONTINUE READING

ಸತ್ತ ಮೇಲೆ ಪಿಂಡ ಪ್ರದಾನ ಅವಶ್ಯಕ : 
ಗರುಡ ಪುರಾಣದ (Garuda Purana) ಪ್ರಕಾರ ಮೃತ್ಯುವಿನ ಹತ್ತು ದಿನಗಳ ಒಳಗೆ ಪಿಂಡ ಪ್ರದಾನ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಲಾಗಿದೆ. ಪಿಂಡ ಪ್ರದಾನವಾಗದೆ ಹೋದರೆ, 13 ನೇ ದಿನಕ್ಕೆ ಯಮದೂತರು ಆ ಆತ್ಮವನ್ನು ಎಳೆದುಕೊಂಡು ಹೋಗುತ್ತಾರೆ ಎನ್ನಲಾಗಿದೆ. ಇಂಥಹ ಆತ್ಮಗಳು ನಂತರ ಪ್ರೇತಾತ್ಮಗಳಾಗಿ ಅಲೆದಾಡುತ್ತವೆ ಎನ್ನವುದು ನಂಬಿಕೆ. 


ಇದನ್ನೂ ಓದಿ : Mercury Transit 2021: ಜುಲೈ 25ಕ್ಕೆ ಕರ್ಕ ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಬಿಸ್ನೆಸ್ ಹಾಗೂ ನೌಕರಿಯಲ್ಲಿ ಲಾಭ


13 ದಿನಗಳ ಕಾಲ ಸಂಬಂಧಿಕರ ನಡುವೆ ಇರುತ್ತದೆಯಂತೆ ಆತ್ಮ : 
ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯ ಆತ್ಮವು (Soul) 13 ದಿನಗಳವರೆಗೆ ತನ್ನ ಕುಟುಂಬದೊಂದಿಗೆ  ಇರುತ್ತದೆ. ಈ ಅವಧಿಯಲ್ಲಿ, ಅದು, ಮತ್ತೆ ದೇಹವನ್ನು ಪ್ರವೇಶಿಸಲು ಬಯಸುತ್ತದೆಯಂತೆ. ಆದರೆ ದೇಹವನ್ನು ದಹನ ಮಾಡಿರುವ ಕಾರಣ ಅದು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, ಆತ್ಮವು ಹಸಿವು ಮತ್ತು ಬಾಯಾರಿಕೆಯಿಂದ ಬಳಲಿರುತ್ತದೆಯಂತೆ. 


ಪಿಂಡ ಪ್ರದಾನ ಮಾಡುವ ಮೂಲಕ ಆತ್ಮಕ್ಕೆ ಆಹಾರ : 
ಸಂಬಂಧಿಕರು 10 ದಿನಗಳ ಒಳಗೆ ಪಿಂಡ ಪ್ರದಾನ ಮಾಡುತ್ತಾರೆ. ಪಿಂಡ ಪ್ರದಾನದ ಮೂಲಕ ಆತ್ಮಕ್ಕೆ ಆಹಾರ (Food) ಸಿಗುತ್ತದೆ. ಪಿಂಡ್ ದಾನ್‌ನಿಂದ ಆತ್ಮಕ್ಕೆ ಶಕ್ತಿ ತುಂಬುತ್ತದೆಯತೆ. ಇದು ಯಮಲೋಕ ವರೆಗೆ ಪ್ರಯಾಣಿಸಲು ಆತ್ಮಕ್ಕೆ ಅನುವು ಮಾಡಿಕೊಡುತ್ತಯಂತೆ.  ಭೂಮಿಯ (earth) ಮೇಲೆ ವ್ಯಕ್ತಿ ಮಾಡಿದ ಕಾರ್ಯಗಳ ಆಧಾರದ ಮೇಲೆ, ಯಮಲೋಕದಲ್ಲಿ ಶುಭ ಮತ್ತು ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತದೆಯಂತೆ.


ಇದನ್ನೂ ಓದಿ : ಮನೆಯಿಂದ ಹೊರಡುವ ವೇಳೆ ಈ ವಸ್ತುಗಳು ಕಣ್ಣಿಗೆ ಬಿದ್ದರೆ ಶುಭವಂತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ